Slide
Slide
Slide
previous arrow
next arrow

ಬೆಳೆ ಸಮೀಕ್ಷೆಯಲ್ಲಿ ಮಿತಿ ಸಡಿಲಿಕೆಗೆ ಆಗ್ರಹ

300x250 AD

ಮುಂಡಗೋಡ: ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಬೆಳೆ ಹಾನಿ ಸಮೀಕ್ಷೆಯಲ್ಲಿ ಆಣೆವಾರಿ ಮಿತಿ ಸಡಿಲಿಸಿ ಎಲ್ಲಾ ರೈತರಿಗೂ ಬೆಳೆ ವಿಮೆ ದೊರಕಿಸಿಕೊಡುವಂತೆ ದೊಡ್ಡ ಪ್ರಮಾಣದ ವ್ಯವಸಾಯ ಸೇವಾ ಸಹಕಾರಿ ಸಂಘದವರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

ಈಗಾಗಲೇ ತಾಲೂಕನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದೆ. ಸಂಘದ ವ್ಯಾಪ್ತಿಯ ರೈತರು ಹಲವಾರು ಬೆಳೆ ಬೆಳೆದಿದ್ದು, ಅದರಲ್ಲಿ ಭತ್ತ, ಮೆಕ್ಕೆಜೋಳ ಹಾಗೂ ಅಡಿಕೆ ಬೆಳೆ ಪ್ರಮುಖವಾಗಿರುತ್ತದೆ. ಇವೆಲ್ಲ ಮಳೆ ಕೊರತೆಯಿಂದ ಇಳುವರಿ ಕುಂಠಿತವಾಗಿರುವುದಲ್ಲದೆ ಬೆಳೆ ನಾಶವಾಗಿದೆ. ಅಡಿಕೆ ಬೆಳೆ ಒಣಗಿದಲ್ಲದೆ ಹೂವು, ಕಾಯಿಗಳು ಉದುರಿ ಹೋಗಿದೆ. ಈಗಾಗಲೇ ರೈತರು ಸಂಘದಿ0ದ ಸಾಲ ಪಡೆದಿದ್ದು, ಮರು ಪಾವತಿ ಮಾಡಲು ತುಂಬಾ ಕಷ್ಟವಾಗಿರುವುದನ್ನು ಆಡಳಿತ ಮಂಡಳಿ ಗಮನಿಸಿ, ಸಂಘದ ವ್ಯಾಪ್ತಿಯ ರೈತರಿಗೆ ಈಗಾಗಲೇ ಸಾಲ ಪಡೆದ ರೈತರಿಗೆ ಬೆಳೆವಿಮೆ ಅಳವಡಿಸಿದ್ದು, ಎಲ್ಲಾ ರೈತರಿಗೂ ಬೆಳೆ ವಿಮೆ ದೊರೆಯುವಂತೆ ಮಾಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.

300x250 AD

ಈ ಸಂದರ್ಭದಲ್ಲಿ ಎಲ್‌ಎಸ್‌ಎಂಪಿ ಸೊಸೈಟಿ ಅಧ್ಯಕ್ಷ ಹುಲಿಯಪ್ಪ ಕರೇಗೌಡರ್, ಅನ್ನದಾತ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಧ್ಯಕ್ಷರಾದ ಚಿದಾನಂದ ಹರಿಜನ, ಮುಖಂಡರಾದ ಪೀರಜ್ಜ ಸಾಗರ, ಶಿವಾನಂದ ಕುರುಬರ, ವಿನಾಯಕ ರಾಯ್ಕರ, ನಿಂಗಪ್ಪ ಕುರುಬರ, ಸೊಸೈಟಿಯ ಮುಖ್ಯ ಕಾರ್ಯನಿರ್ವಾಹಕ ಕೆ.ಪುಷ್ಪಾಂಗದನ್ ಮುಂತಾದವರಿದ್ದರು.

Share This
300x250 AD
300x250 AD
300x250 AD
Back to top