Slide
Slide
Slide
previous arrow
next arrow

ಉಸಿರಾ ಇಂಡಸ್ಟ್ರೀಸ್‌ನ 29ನೇ ವಾರ್ಷಿಕೋತ್ಸವ ಆಚರಣೆ

300x250 AD

ಭಟ್ಕಳ: ತಾಲೂಕಿನ ಬೇಂಗ್ರೆ ಗ್ರಾಮದಲ್ಲಿ 1994ರ ಗಾಂಧಿ ಜಯಂತಿಯ0ದು ಪ್ರಾರಂಭಿಸಲಾದ ಲಾವಂಚ ಕೈಗಾರಿಕೆಯ ಉಸಿರಾ ಇಂಡಸ್ಟ್ರೀಸ್‌ನ 29ನೇ ವರ್ಷದ ವಾರ್ಷಿಕೋತ್ಸವ ಹಾಗೂ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಜಿ ಅವರ ಜನ್ಮದಿನವನ್ನು ವಿಜೃಂಭಣೆಯಿAದ ಆಚರಿಸಲಾಯಿತು.

ಸಮಾರಂಭ ಉದ್ಘಾಟಿಸಿ ಆರ್‌ಎನ್‌ಎಸ್ ಪಾಲಿಟೆಕ್ನಿಕ್‌ನ ಉಪ ಪ್ರಾಚಾರ್ಯ ಮರಿಸ್ವಾಮಿ ಕೊಪ್ಪಳ ಮಾತನಾಡಿ, ಉಸಿರಾ ಇಂಡಸ್ಟ್ರಿಯ ಉದ್ಯಮಿ ಎಂ.ಡಿ.ಮ್ಯಾಥ್ಯೂರವರು ಗಾಂಧೀಜಿ ಕಂಡ ಗ್ರಾಮೋದ್ಧಾರವೇ ದೇಶೋದ್ಧಾರ ಕನಸನ್ನ ಈ ಭಾಗದಲ್ಲಿ ನನಸು ಮಾಡಿದ್ದಾರೆ. ಪರಿಸರ ಪ್ರೇಮಿಯೂ, ಜಲತಜ್ಞರು ಆದ ಇವರು ನೂರಾರು ನಿರುದ್ಯೋಗಿ ಯುವಕ- ಯುವತಿಯರಿಗೆ ಉದ್ಯೋಗದಾತರಾಗಿದ್ದಾರೆ ಎಂದರು.

ಗಾAಧೀಜಿಯವರು ಆಹಿಂಸಾ ಮಾರ್ಗದಿಂದ ಬ್ರಿಟೀಷರನ್ನ ಭಾರತದಿಂದ ಓಡಿಸಲು ಹಾಗೂ ಭಾರತಕ್ಕೆ ಮುಂಚೂಣಿಯಲ್ಲಿದ್ದು ಸ್ವಾತಂತ್ರ‍್ಯ ಬರಲು ಕಾರಣರಾದರೆ, ದೇಶದ ಎರಡನೆಯ ಪ್ರಧಾನಿಯಾಗಿ ಲಾಲ್ ಬಹದ್ದೂರ್ ಶಾಸ್ತ್ರಿಯವರು ಅತ್ಯಂತ ಪ್ರಾಮಾಣಿಕ, ದಕ್ಷತೆಯಿಂದ ದೇಶವನ್ನು ಮುನ್ನಡೆಸಿದವರು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಉಸಿರಾ ಇಂಡಸ್ಟ್ರಿಯ ಮಾಲಕ ಎಂ.ಡಿ.ಮ್ಯಾಥ್ಯೂ ಮಾತನಾಡಿ, ಸ್ಥಳೀಯ ಜನರಿಗೆ ಉದ್ಯೋಗ ಸೃಷ್ಟಿಸುವುದರ ಜೊತೆಗೆ ಸ್ಥಳೀಯವಾಗಿ ಸಿಗುವ ವಸ್ತುಗಳಿಂದ ಉಪಯುಕ್ತ ಕರಕುಶಲ ವಸ್ತುಗಳನ್ನಾಗಿ ಮಾಡಿ ಜನರಿಗೆ ಉದ್ಯೋಗದ ಜೊತೆಗೆ ನಮ್ಮ ಸುತ್ತಲಿನ ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಬೇಕು ಎಂದು ತಿಳಿಸಿದರು.

300x250 AD

ಊರಿನ ಪ್ರಮುಖರಾದ ವೆಂಕಟಯ್ಯ ಬೈರಮನೆ, ಕೃಷಿ ಅಧಿಕಾರಿ ಜಿ.ಎಲ್.ಹೆಗಡೆ, ಸೋನಾರಕೇರಿ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಯಲ್ಲಮ್ಮ ಮರಿಸ್ವಾಮಿ ಮಾತನಾಡಿ ಶುಭ ಕೋರಿದರು. ವೇದಿಕೆ ಮೇಲೆ ಮಾದೇವ್ ಆಚಾರ್, ಏಲಿಯಮ್ಮ ಮ್ಯಾಥ್ಯೂ, ವಿಜಯ್ ಮೊಗೇರ ಮತ್ತು ಶುಕ್ರಯ್ಯ ಹಳ್ಳೆರ್ ಉಪಸ್ಥಿತರಿದ್ದರು.

ಉಸಿರಾ ಸಿಬ್ಬಂದಿ ವರ್ಗದವರು ತಮ್ಮ ಅನಿಸಿಕೆಯೊಂದಿಗೆ ಶುಭ ಕೋರಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ ನೂರಕ್ಕೂ ಅಧಿಕ ಸಿಬ್ಬಂದಿ ವರ್ಗದವರಿಗೆ ಉತ್ತಮವಾದ ಒಂದು ಜೊತೆ ಬಟ್ಟೆಗಳನ್ನ, ಸಿಹಿ ತಿಂಡಿಗಳನ್ನು ವಿತರಿಸಿದರು.

Share This
300x250 AD
300x250 AD
300x250 AD
Back to top