ಹೊನ್ನಾವರ: ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವಲ್ಲಿ ಜಿಪಿಎಸ್ ಮಾನದಂಡವಲ್ಲ. ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಸಾಗುವಳಿ ಕ್ಷೇತ್ರವನ್ನು ಅರಣ್ಯವಾಸಿಗಳು ಅನುಭವಿಸಲು ಅರಣ್ಯ ಇಲಾಖೆಯು ಯಾವುದೇ ಆತಂಕವಾಗಲೀ, ಒಕ್ಕಲೆಬ್ಬಿಸುವ ಪ್ರಕ್ರೀಯೆ ಜರುಗಿಸುವುದಿಲ್ಲ. ಕಾನೂನು ಬಾಹಿರವಾಗಿ ಒಕ್ಕಲೆಬ್ಬಿಸಿದ್ದಲ್ಲಿ ಹಿರಿಯ ಅಧಿಕಾರಿಗಳ ಗಮನಕ್ಕೆ ತನ್ನಿ ಎಂದು ಅರಣ್ಯವಾಸಿಗಳಿಗೆ ಹೊನ್ನಾವರ ಉಪವಿಭಾಗ ಅರಣ್ಯ ಅಧಿಕಾರಿ ರವಿಶಂಕರ ಹೇಳಿದರು.
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರ ನೇತೃತ್ವದಲ್ಲಿ ಮಂಗಳವಾರ ಗೆರಸೊಪ್ಪ ವಲಯದ ಅರಣ್ಯವಾಸಿಗಳೊಂದಿಗೆ ಜರುಗಿದ ಅರಣ್ಯವಾಸಿಗಳ ಬೃಹತ್ ಸಭೆಯ ಚರ್ಚೆಯ ಸಂದರ್ಭದಲ್ಲಿ ಅವರು ಮಾತನಾಡಿದರು. ಅರಣ್ಯವಾಸಿಗಳ ಮೇಲೆ ಕಾನೂನು ಬಾಹಿರವಾಗಿ ದೌರ್ಜನ್ಯ, ಕಿರುಕುಳ, ಕಾನೂನು ಬಾಹಿರ ಕೃತ್ಯವನ್ನು ಅರಣ್ಯ ಸಿಬ್ಬಂದಿಗಳಿಂದ ಜರುಗಿದ್ದಲ್ಲಿ ಅಂತಹ ಸಿಬ್ಬಂದಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವುದಾಗಿ ಅವರು ಅರಣ್ಯವಾಸಿಗಳಿಗೆ ಭರವಸೆ ನೀಡಿದರು.
ಅರಣ್ಯವಾಸಿಗಳ ತೀವ್ರ ಆಕ್ರೋಶ:
ಅರಣ್ಯವಾಸಿಗಳ ಸಾಗುವಳಿಗೆ, ಮನೆ ರಿಪೇರಿಗೆ, ಬಿದ್ದಿರುವಂತಹ ಮನೆಗಳ ನಿರ್ಮಾಣ ಕಾರ್ಯಕ್ಕೆ ಅರಣ್ಯ ಸಿಬ್ಬಂದಿಗಳು ನೀಡುತ್ತಿರುವ ದೌರ್ಜನ್ಯ, ಕಿರುಕುಳ, ಮಾನಸಿಕ ಹಿಂಸೆಯ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿ, ದೌರ್ಜನ್ಯ ವೆಸಗಿದ ಛಾಯಾಚಿತ್ರ ಮತ್ತು ವಿಡಿಯೋಗಳನ್ನು ಡಿಎಫ್‌ಓ ಅವರ ಗಮನಕ್ಕೆ ತಂದು ಅಸಮಾಧಾನ ಹೊರಹಾಕಿದರು.
ಅರಣ್ಯ ಸಿಬ್ಬಂದಿಗಳಿಗೆ ರವೀಂದ್ರ ನಾಯ್ಕ ಪಾಠ:
ಕಾನೂನು ಬಾಹಿರವಾದ ಅರಣ್ಯಾಧಿಕಾರಿಗಳ ನಡುವಳಿಕೆಯನ್ನು ಪ್ರಶ್ನಿಸುತ್ತ ಅಧ್ಯಕ್ಷ ರವೀಂದ್ರ ನಾಯ್ಕ ಕಾನೂನು ಪ್ರಸ್ತಾಪಿಸುತ್ತ, ಕೇಂದ್ರ ಮತ್ತು ರಾಜ್ಯ ಸರಕಾರದ ಆದೇಶವನ್ನು ಉಲ್ಲೇಖಿಸಿದರು. ಅಲ್ಲದೇ, ಅರಣ್ಯ ಸಿಬ್ಬಂದಿಗಳ ಕಾನೂನು ಅಜ್ಞಾನದ ಕುರಿತು ಸಭೆಗೆ ಪ್ರಸ್ತುತ ಪಡಿಸಿ, ಅರಣ್ಯ ಸಿಬ್ಬಂದಿಗಳಿಗೆ ಸೂಕ್ತ ಕಾನೂನು ಪಾಠ ಮಾಡಿರುವುದು ಚರ್ಚೆಯ ಸಂದರ್ಭದಲ್ಲಿ ವಿಶೇಷವಾಗಿತ್ತು.
ತಾಲೂಕ ಅಧ್ಯಕ್ಷ ಚಂದ್ರಕಾಂತ ಕೊಚರೆಕರ ಪ್ರಾಸ್ತಾವಿಕ ಮಾತನಾಡುತ್ತ, ಅರಣ್ಯ ಸಿಬ್ಬಂದಿಗಳಿಂದ ಉಂಟಾಗುತ್ತಿರುವ ವಿವಿಧ ದೌರ್ಜನ್ಯದ ಘಟನೆಗಳನ್ನು ಸಭೆಯ ಗಮನಕ್ಕೆ ತಂದರು. ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗೋವಿಂದ ನಾಯ್ಕ ಮಾತನಾಡಿ, ಅರಣ್ಯ ಅಧಿಕಾರಿಗಳು ಅರಣ್ಯವಾಸಿಗಳೊಂದಿಗೆ ಸೌಜನ್ಯದಿಂದ ಮಾತನಾಡುವ ಮನೋಪ್ರವೃತ್ತಿ ಬೆಳೆಸಿಕೊಳ್ಳೊಬೇಕೆಂದು ಹೇಳಿದರು. ಸಭೆಯನ್ನು ಉದ್ದೇಶಿಸಿ ಹಿರಿಯ ಧುರಿಣ ಪಿ.ಟಿ ನಾಯ್ಕ, ಯೋಗೇಶ ನಾಯ್ಕ ಮಾತನಾಡಿದರು.
ಜಿಲ್ಲಾ ಸಂಚಾಲಕ ರಾಮಾ ಮರಾಠಿ, ಸುರೇಶ ನಾಯ್ಕ ನಗರ ಬಸ್ತಿಕೇರಿ, ಮಹೇಶ ನಾಯ್ಕ ಸಾಲ್ಕೋಡ, ವಿನೋದ ನಾಯ್ಕ ಯಲಕೊಟಗಿ, ಸಂಕೇತ ನಾಯ್ಕ ಯಲಕೊಟಗಿ, ಅಪಸಾನ ಸರಳಗಿ, ಶೇಷಗಿರಿ ನಾಯ್ಕ ಯಲಕೊಟಗಿ, ಮಂಜುನಾಥ ಗೌಡ, ಸುರೇಶ ನಾಯ್ಕ ತುಂಬೊಳ್ಳಿ ಸಭೆಯ ನೇತೃತ್ವ ವಹಿಸಿದ್ದರು. ಸಭೆಯಲ್ಲಿ ಮಹಾಬಲೇಶ್ವರ ನಾಯ್ಕ ಬೇಡ್ಕಣಿ, ರವಿ ನಾಯ್ಕ ಹಂಜಗಿ, ಭಾಸ್ಕರ ನಾಯ್ಕ ಮುಗದೂರು, ಜಿ.ಬಿ ನಾಯ್ಕ, ಸುಧಾಕರ ಮಡಿವಾಳ ಬಿಳಗಿ, ಗೋವಿಂದ ನಾಯ್ಕ ತಿಳವಳ್ಳಿ ಮುಂತಾದವರು ಉಪಸ್ಥಿತರಿದ್ದರು. ಎಸಿಎಫ್ ಎಸ್.ಎಸ್ ಲಿಂಗಾಣಿ, ಆರ್.ಎಫ್.ಓ ಪ್ರೀತಿ ನಾಯ್ಕ ಉಪಸ್ಥಿತರಿದ್ದರು. ಪಿ.ಎಸ್.ಐ ಮಹಾಂತೇಶ ನೇತೃತ್ವದಲ್ಲಿ 50 ಕ್ಕೂ ಅಧಿಕ ಪೋಲಿಸರಿಂದ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ReplyForward