Slide
Slide
Slide
previous arrow
next arrow

ಶಾಸ್ತ್ರೀಯಬದ್ಧ ಸಂಗೀತ ಮನಸ್ಸನ್ನು ಸದಾ ಚಿಂತನಶೀಲವಾಗಿಸುತ್ತದೆ: ಡಾ.ಸುಮನ್ ಹೆಗಡೆ

300x250 AD

ಶಿರಸಿ: ನಗರದ ಯೋಗಮಂದಿರದಲ್ಲಿ ಸ್ಥಳೀಯ ರಾಗಮಿತ್ರ ಪ್ರತಿಷ್ಠಾನ ಸಂಘಟಿಸಿದ್ದ ಗುರು ಅರ್ಪಣೆ ಕಲಾ ಅನುಬಂಧ ಕಾರ್ಯಕ್ರಮದಲ್ಲಿ ಗಾಯಕಿ ಮೇಧಾ ಭಟ್ಟ ಅಗ್ಗೇರೆ ಇವರು ಗಾಯನ ಮೂಲಕ ಸಂಗೀತಾಭಿಮಾನಿಗಳನ್ನು ಮಂತ್ರಮುಗ್ಧಗೊಳಿಸಿದರು.

ಸೋಂದಾ ಸ್ವರ್ಣವಲ್ಲೀ ಶ್ರೀಗಳ 33ನೇ ಪೀಠಾರೋಹಣ ಅಂಗವಾಗಿ ನಿರಂತರ 1ವರ್ಷ ಕಾಲ ಪ್ರತಿ ತಿಂಗಳ ಮೊದಲ ಸೋಮವಾರ ನಡೆಯುವ ಕಲಾ ಅನುಬಂಧ ಸಂಗೀತ ಕಾರ್ಯಕ್ರಮದಲ್ಲಿ ಗಾಯಕಿ ಮೇಧಾ ಭಟ್ಟ ರಾಗ ರಾಗೇಶ್ರಿಯಲ್ಲಿ ವಿಸ್ತಾರವಾಗಿ ಹಾಡಿದರು. ನಂತರ ಮಹಾರಾಷ್ಟ್ರದಲ್ಲಿ ಜನಪ್ರಿಯವಾದ ಕಬೀರ ಭಜನ್‌ಗಳನ್ನು ಸೊಗಸಾಗಿ ಹಾಡಿ ಮೆಚ್ಚುಗೆ ಪಡೆದು, ಕೊನೆಯಲ್ಲಿ ರಾಗ ಭೈರವಿ ಸುಂದರವಾಗಿ ಪ್ರಸ್ತುತಪಡಿಸಿದರು. ಹಾರ್ಮೊನಿಯಂನಲ್ಲಿ ವಿದ್ವಾನ್ ಪ್ರಕಾಶ ಹೆಗಡೆ ಯಡಳ್ಳಿ, ತಬಲಾದಲ್ಲಿ ಗಣೇಶ ಗುಂಡ್ಕಲ್ ಯಲ್ಲಾಪುರ, ತಂಬೂರದಲ್ಲಿ ಅಂಜನಾ ಮತ್ತು ಕೀರ್ತಿ ಸಹಕಾರ ನೀಡಿದರು.

ಇದಕ್ಕೂ ಮೊದಲು ಬಾನ್ಸುರಿ ಕಾರ್ಯಕ್ರಮದಲ್ಲಿ ವಿ.ಭಾರ್ಗವರಾವ್ ಬೆಂಗಳೂರು ಕೊಳಲು ಕಾರ್ಯಕ್ರಮವನ್ನು ಸೊಗಸಾಗಿ ನಡೆಸಿಕೊಟ್ಟರು. ಭಕ್ತಿಸಂಗೀತದಲ್ಲಿ ನಗರದ ಸುಪ್ರಸ್ನನಗರದ ಸ್ಪಂದನಾ ಮಹಿಳಾ ಮಂಡಳಿಯವರು ಭಕ್ತಿ ಪ್ರಧಾನ ಹಾಡುಗಳನ್ನು ಹಾಡಿದರು. ತಬಲಾದಲ್ಲಿ ಸುಧಾಕರ ನಾಯ್ಕ, ಹಾರ್ಮೊನೀಯಂನಲ್ಲಿ ವೈಷ್ಣವಿ ಹೆಗಡೆ ಮತ್ತು ಶಾಂತಾ ಕಾರಂತ ಸಾಥ್ ನೀಡಿದರು.
ಕಾರ್ಯಕ್ರಮವನ್ನು ಮಹಾಲಕ್ಷ್ಮಿ ಮೆಮೋರಿಯಲ್ ಆಸ್ಪತ್ರೆಯ ವೈದ್ಯೆ ಡಾ.ಸುಮನ್ ಹೆಗಡೆ ಉದ್ಘಾಟಿಸಿ ಮಾತನಾಡಿ, ಸಂಗೀತದ ಕಲಾ ಪ್ರಕಾರಗಳನ್ನು ಸಣ್ಣ ವಯಸ್ಸಿನಲ್ಲಿಯೇ ಅಭ್ಯಾಸ ಮಾಡಿದಾಗ ಮನಸ್ಸಿನ ಏಕಾಗ್ರತೆ ಹಾಗೂ ಜೀವನದ ಸಾಧನೆಗೆ ಸಹಕಾರಿಯಾಗುತ್ತದೆ. ಶಾಸ್ತ್ರೀಯ ಬದ್ಧವಾದ ಸಂಗೀತ ಸದಾ ಚಿಂತನಶೀಲವಾಗಿಸುತ್ತದೆ. ಅದೆಷ್ಟೋ ದೈನಂದಿನ ಕಷ್ಟದುಃಖಗಳನ್ನು ಹೋಗಲಾಡಿಸುತ್ತದೆ ಎಂದರು.

300x250 AD

ಇದೇ ಸಂದರ್ಭದಲ್ಲಿ ತಬಲಾ ವಾದಕರಾಗಿ ಸಾಧನೆ ಮಾಡಿದ ವಿದ್ವಾನ್ ಎಂ.ಜಿ.ಭಟ್ಟ ನೆಬ್ಬೂರು ಅವರನ್ನು ಶಾಲು ಹೊದೆಸಿ ಸನ್ಮಾನಿಸಲಾಯಿತು. ಸನ್ಮಾನ ನೆರವೇರಿಸಿದ ಹಿರಿಯ ಸಂಗೀತಗಾರ ಪಂಡಿತ ಎಂ.ಪಿ.ಹೆಗಡೆ ಪಡಿಗೆರೆ ಸಂಗೀತಾಭ್ಯಾಸ ಮಾಡುವಾಗ ವಹಿಸಬೇಕಾದ ಗಮನಗಳ ಕುರಿತು ವಿವರಿಸಿದರು. ಸಂತೋಷ ಜ್ಯುವೇಲರಿಯ ರಾಜು ಎಂ.ಶೇಟ್ ಉಪಸ್ಥಿತರಿದ್ದರು.
ಸಂಗೀತಾಭಿಮಾನಿ ಆರ್.ಎನ್.ಭಟ್ಟ ಸುಗಾವಿ ಅಧ್ಯಕ್ಷತೆ ವಹಿಸಿದ್ದರು. ರಾಘಮಿತ್ರ ಪ್ರತಿಷ್ಠಾನದ ವಿದ್ವಾನ್ ಪ್ರಕಾಶ ಹೆಗಡೆ ಯಡಳ್ಳಿ ಸ್ವಾಗತಿಸಿದರು. ಗಿರಿಧರ ಕಬ್ನಳ್ಳಿ ನಿರೂಪಿಸಿದರು.

Share This
300x250 AD
300x250 AD
300x250 AD
Back to top