Slide
Slide
Slide
previous arrow
next arrow

ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳ ವಿತರಣೆ

300x250 AD

ಯಲ್ಲಾಪುರ: ತಾಲೂಕಿನ ಹುತ್ಕಂಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೋಷಣ ಅಭಿಯಾನ ಮತ್ತು ದಕ್ಷಿಣಾಮೂರ್ತಿ ಎಜುಕೇಶನ್ ಫೌಂಡೇಷನ್ ವತಿಯಿಂದ ಶಾಲಾ ಮಕ್ಕಳಿಗೆ ಸ್ಕೂಲ್ ಬ್ಯಾಗ್ ಮತ್ತು ನೋಟ್‌ಬುಕ್, ಕಲಿಕಾ ಪರಿಕರ ವಿತರಣೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆ ಉದ್ಘಾಟಿಸಿ ಮಾತನಾಡಿ, ಕಲಿಕೆಗೆ ಪೂರಕವಾಗಲು ಸರಕಾರ ಜೊತೆಗೆ ಈ ತರಹ ಸಂಘ ಸಂಸ್ಥೆ ದಾನಿಗಳು ನೆರವಾಗುತ್ತಿದ್ದಾರೆ. ಮಕ್ಕಳೂ ಅದರ ಪ್ರಯೋಜನ ಪಡೆದು ಉತ್ತಮ ಶೈಕ್ಷಣಿಕ ಪ್ರಗತಿ ತೋರಿದಾಗ ಈ ಕೊಡುಗೆಗಳು ಸಾರ್ಥಕವೆನಿಸುತ್ತದೆ ಎಂದ ಅವರು, ಮಕ್ಕಳು ಏರ್ಪಡಿಸಿದ್ದ ಪೋಷಣ ಅಭಿಯಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಎಸ್‌ಡಿಎಂಸಿ ಅಧ್ಯಕ್ಷ ನರಸಿಂಹ ಸಾತೊಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶಿಕ್ಷಣದ ಸರ್ವತೋಮುಖ ಅಭಿವೃಧ್ದಿಗೆ ನಾವು ನಮ್ಮದೇ ಆದ ಕೊಡುಗೆ ನೀಡುವ ಮೂಲಕ ಶಿಕ್ಷಣದ ಬಗ್ಗೆ ನಮಗಿರುವ ಪ್ರೀತಿ ಕಾಳಜಿ ತೋರೋಣ. ನಮ್ಮ ಶಾಲೆ ಗುರುತಿಸಿ ಮಕ್ಕಳಿಗೆ ದೊಡ್ಡ ಮೌಲ್ಯದ ಸಹಾಯ ಹಸ್ತ ನೀಡಿದ ದಕ್ಷಿಣಮೂರ್ತಿ ಫೌಂಡೇಶನ್ನಿಗೆ ಋಣಿಯಾಗಿದ್ದೇವೆ ಎಂದರು.

300x250 AD

ದಕ್ಷಿಣಾ ಮೂರ್ತಿ ಎಜುಕೇಷನ್ ಸೊಸೈಟಿ ಸಂಚಾಲಕಿ ಶಾಲಿನಿ ರಾಯ್ಕರ್ ಹಾಗೂ ಶ್ವೇತಾ ನಾಗೇಶ ಕುಡ್ತರ್ಕರ್ ಮಕ್ಕಳಿಗೆ ಸ್ಕೂಲ್ ಬ್ಯಾಗ್ ಮತ್ತು ನೋಟ್‌ಬುಕ್ ಸೇರಿದಂತೆ ಇನ್ನಿತರ ಕಲಿಕಾ ಸಾಮಗ್ರಿಗಳನ್ನು ವಿತರಿಸಿದರು. ಶಿಕ್ಷಕಿ ಶಾಲಿನಿ ನಾಯ್ಕ, ದೀಪಾ ಶೇಟ್, ವಿಜಯಲಕ್ಷ್ಮಿ ಭಟ್ ಹಾಗೂ ಎಸ್‌ಡಿಎಂಸಿ ಸದಸ್ಯರು, ಪಾಲಕರು ಉಪಸ್ಥಿತರಿದ್ದರು. ಮುಖ್ಯಾಧ್ಯಾಪಕ ಸತೀಶ ಪಿ.ಶೆಟ್ಟಿ ಪ್ರಾಸ್ತಾವಿಕಗೈದು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಬಿಆರ್‌ಸಿ ಸಂಯೋಜನಾಧಿಕಾರಿ ಶ್ರೀರಾಮ ಹೆಗಡೆ, ಶಿಕ್ಷಣ ಸಂಯೋಜಕ ಪ್ರಶಾಂತ್ ಜಿ.ಎನ್., ಬಿಆರ್‌ಪಿಗಳಾದ ಪ್ರಶಾಂತ ಪಟಗಾರ, ಸಂತೋಷ ಜಿಗಳೂರು, ಸಿಆರ್‌ಪಿ ಕೆ.ಆರ್.ನಾಯ್ಕ ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top