Slide
Slide
Slide
previous arrow
next arrow

ನಿಷ್ಠಾವಂತ ನೌಕರರಿಂದ ಸಂಸ್ಥೆಯ ಅಭಿವೃದ್ಧಿ ಸಾಧ್ಯ: ಗೋಪಾಲಕೃಷ್ಣ ವೈದ್ಯ

300x250 AD

ಶಿರಸಿ: ಇತ್ತೀಚೆಗೆ ಮುಂಡಗನಮನೆ ಸೊಸೈಟಿ ಆವಾರದಲ್ಲಿ ಸಂಘದ ಕಾರ್ಯಕ್ಷೇತ್ರದ ಸದಸ್ಯರಾದ ನಿವೃತ್ತ ಅಂಚೆಪಾಲಕ ಪಿಲ್ಲು ಬೂದು ಮರಾಠಿ, ನಿವೃತ್ತ ಕಂದಾಯ ಇಲಾಖೆಯ ಗ್ರಾಮ ಸಹಾಯಕ ಯಂಕು ಗೋಮಾ ಮರಾಠಿ, ಶಿರಸಿ ಕೆ.ಎಸ್.ಆರ್.ಟಿ.ಸಿ. ಡಿಪೋದ ಚಾಲಕ ಸುಧಾಕರ ಇವರಿಗೆ ಸನ್ಮಾನಿಸಲಾಯಿತು.

ಸಂಘದ ಅಧ್ಯಕ್ಷ ಗೋಪಾಲಕೃಷ್ಣ ವೆಂ. ವೈದ್ಯ ಸನ್ಮಾನಿಸಿ, ಮಾತನಾಡಿ ಯಾವುದೇ ನೌಕರರು ನಿಷ್ಠೆಯಿಂದ ಕೆಲಸ ಮಾಡಿದಲ್ಲಿ, ಅವರು ದುಡಿಯುತ್ತಿರುವ ಸಂಸ್ಥೆ ಅಭಿವೃದ್ದಿ ಹೊಂದುತ್ತದೆ. ಅಲ್ಲದೇ ಅಂತಹ ನೌಕರರಿಗೆ ಸಮಾಜದಲ್ಲಿ ಗೌರವ ಸಿಗುತ್ತದೆ. ಅದರಂತೆ ಇಂದು ಸನ್ಮಾನ ಸ್ವೀಕರಿಸಿದ ಮೂವರು ನಿಷ್ಠೆಯಿಂದ ಸೇವೆ ಗೈದಿದ್ದಾರೆ. ಆ ಕಾರಣದಿಂದ ಸರ್ವಸದಸ್ಯರ ವತಿಯಿಂದ ಸನ್ಮಾನಿಸಲಾಗಿದೆ. ಇವರಿಗೆ ನಮ್ಮ ಆರಾಧ್ಯ ದೈವ ಶ್ರೀ ರಾಮಲಿಂಗೇಶ್ವರನು ಆಯುರಾರೋಗ್ಯವನ್ನು ದಯಪಾಲಿಸಲಿ ಎಂದರು. ಈ ವೇಳೆ ಸಭೆಯಲ್ಲಿ ಸಂಘದ ಎಲ್ಲಾ ನಿರ್ದೇಶಕರು ಹಾಗೂ ಮುಖ್ಯಕಾರ್ಯನಿರ್ವಾಹಕರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top