ನವದೆಹಲಿ: ಚೀನಾದ ಹ್ಯಾಂಗ್ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2023ರಲ್ಲಿ ಭಾರತದ ಕ್ರೀಡಾಳುಗಳು ಉತ್ತಮ ಸಾಧನೆಯನ್ನು ಮಾಡುತ್ತಿದ್ದಾರೆ. ಚಿನ್ನದ ಪದಕ ಬೇಟೆ ಭರ್ಜರಿಯಾಗಿ ನಡೆಯುತ್ತಿದೆ, ಶೂಟಿಂಗ್ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಲಭಿಸಿದೆ.
ಪುರುಷರ 10 ಮೀಟರ್ ಏರ್ ರೈಫಲ್ ಟೀಮ್ ಈವೆಂಟ್ನಲ್ಲಿ ಭಾರತದ ದಿವ್ಯಾಂಶ್ ಸಿಂಗ್ ಪವಾರ್, ರುದ್ರಾಂಕ್ಷ್ ಬಾಳಾಸಾಹೇಬ್ ಮತ್ತು ಐಶ್ವರ್ಯ ತೋಮರ್ ಅವರು ಭಾರತಕ್ಕೆ ಚಿನ್ನದ ಪದಕ ಜಯಿಸಿದ್ದಾರೆ. ಈ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ.
ಎರಡನೇ ದಿನದ ಆಟದಲ್ಲಿ ಶೂಟಿಂಗ್ ಹೊರತಾಗಿಯೂ ಭಾರತ ರೋಯಿಂಗ್ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದೆ. 19ನೇ ಏಷ್ಯನ್ ಗೇಮ್ಸ್ನ ಮೊದಲ ದಿನ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತ ತನ್ನ ಅಭಿಯಾನವನ್ನು ಆರಂಭಿಸಿತ್ತು. ಶೂಟಿಂಗ್ನಲ್ಲಿ ಮಹಿಳಾ ತಂಡ ವಿಭಾಗದಲ್ಲಿ ಭಾರತ ಆ ಪದಕ ಗೆದ್ದಿತ್ತು. ಮೊದಲ ದಿನ 3 ಬೆಳ್ಳಿ ಹಾಗೂ 2 ಕಂಚು ಗೆದ್ದಿರುವ ಭಾರತ ಎರಡನೇ ದಿನವನ್ನು ಇನ್ನಷ್ಟು ಉತ್ತಮ ರೀತಿಯಲ್ಲಿ ಆರಂಭಿಸಿದೆ. ಇನ್ನು ಎರಡನೇ ದಿನವನ್ನು ಚಿನ್ನದ ಪದಕದೊಂದಿಗೆ ಆರಂಭಿಸಿರುವ ಭಾರತದ ಶೂಟರ್ಗಳು ಈ ಚಿನ್ನದ ಪದಕದೊಂದಿಗೆ ವಿಶ್ವ ದಾಖಲೆಯನ್ನೂ ಮುರಿದಿದ್ದಾರೆ.