
ಯಲ್ಲಾಪುರ: ನಗರದ ಪಶು ಆಸ್ಪತ್ರೆಯ ಆವರಣದಲ್ಲಿ ಏರ್ಪಡಿಸಿದ್ದ ರೈತರಿಗೆ ಮೇವು ಕತ್ತರಿಸಿಸುವ ಯಂತ್ರ ವಿತರಣೆ ಹಾಗೂ ಕಾಲುಬಾಯಿ ರೋಗಕ್ಕೆ ಲಸಿಕೆ ವಿತರಣೆ ಕಾರ್ಯಕ್ರಮವನ್ನು ಶಾಸಕ ಶಿವರಾಮ ಹೆಬ್ಬಾರ ಉದ್ಘಾಟಿಸಿದರು.
ಜಾನುವಾರುಗಳಿಗೆ ಮೇವು ಕತ್ತರಿಸಿಸುವ ಯಂತ್ರದ ಕಾರ್ಯವೈಖರಿಯನ್ನು ವೀಕ್ಷಿಸಿ, ಪ್ರಶಂಸಿಸಿದರು. ಅಲ್ಲದೇ, ಯಲ್ಲಾಪುರ ತಾಲೂಕಿನ ಅರ್ಹ ಫಲಾನುಭವಿಗಳಿಗೆ ಯಂತ್ರವನ್ನು ಸಾಂಕೇತಿಕವಾಗಿ ವಿತರಿಸಿದರು.