ಗೋಕರ್ಣ: ಇತ್ತೀಚೆಗೆ ನಿಧನರಾದ ಉಮಾಕಾಂತ ಗೋಪಿ, ಗಣಪತಿ ಗೌಡ ಅವರ ಶೃದ್ಧಾಂಜಲಿ ಸಭೆಯನ್ನು ಕಾಂಗ್ರೆಸ್ ಘಟಕದವರು ಹಮ್ಮಿಕೊಂಡು ಅವರ ಆತ್ಮಕ್ಕೆ ಚಿರಶಾಂತಿ ಕೋರಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೊನ್ನಪ್ಪ ನಾಯಕ ಮಾತನಾಡಿ, ಉಮಾಕಾಂತ ಗೋಪಿ ಅವರು ಅಧಿಕಾರಕ್ಕಾಗಿ ಆಸೆ ಪಡದೇ ಪಕ್ಷನಿಷ್ಠೆಯಿಂದ ದುಡಿಯುತ್ತಿದ್ದರು ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಮಾಜಿ ಅಧ್ಯಕ್ಷ ನಾಗರಾಜ ಹಿತ್ತಲಮಕ್ಕಿ ಪ್ರಮುಖರಾದ ಕುಮಾರ ಮಾರ್ತಾಂಡೆ, ಪ್ರಮೋದಚಂದ್ರ ಗೋಪಿ, ರಾಮಚಂದ್ರ ನಿರ್ವಾಣೇಶ್ವರ, ವಿಶ್ವನಾಥ ಗೋಪಿ, ಭವಾನಿ ಹೊಸಮನಿ ಇತರರು ಸಂತಾಪ ಸೂಚಿಸಿದ್ದರು. ಪದ್ಮನಾಭ ಗೌಡ, ಸೋಮು ಗೌಡ ಇತರರು ಪಾಲ್ಗೊಂಡಿದ್ದರು.