Slide
Slide
Slide
previous arrow
next arrow

ವಿವಿದೋದ್ದೇಶ ಕೃಷಿ ಸಹಕಾರಿಗೆ 25.96 ಲಕ್ಷ ರೂ. ಲಾಭ: ರಾಜಗೋಪಾಲ ಅಡಿ

300x250 AD

ಗೋಕರ್ಣ: ತನ್ನದೇ ಆದ ಇತಿಹಾಸವನ್ನು ಹೊಂದಿರುವ ಸಂಘವು ಪ್ರತಿಷರ್ವ ಲಾಭದಾಯಕವಾಗಿ ಪ್ರಗತಿಯನ್ನು ಹೊಂದುತ್ತಿದೆ. ಈ ವರ್ಷ 25.96 ಲಕ್ಷ ರು. ಲಾಭವಾಗಿದೆ. ಇದರಲ್ಲಿ ಶೇರುದಾರರಿಗೆ ಶೇ.10 ರಷ್ಟು ಡಿವಿಡೆಂಟ್ ನೀಡಲಾಗುವುದು ಎಂದು ವಿವಿದೋದ್ದೇಶ ಅಧ್ಯಕ್ಷ ರಾಜಗೋಪಾಲ ಅಡಿ ಹೇಳಿದರು.

ಇಲ್ಲಿಯ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಈ ಕುರಿತು ಅವರು ಮಾತನಾಡಿದರು. ಕಳೆದ 5 ವರ್ಷಗಳಿಂದ ಶಾಲೆಗಳಿಗೆ ಪೀಠೋಪಕರಣ, ಕಾಯಿಲೆಯಿಂದ ಬಳಲುವವರಿಗೆ ಆರ್ಥಿಕ ನೆರವು ಸೇರಿದಂತೆ ಇನ್ನಿತರ ಕಾರ್ಯಚಟುವಟಿಕೆಗಳಿಗೆ ಸಹಾಯಧನ ನೀಡಲಾಗುತ್ತದೆ. ಸಂಘದ ಅಭಿವೃದ್ಧಿಗಾಗಿ ಎಲ್ಲರೂ ಕೂಡ ಒಗ್ಗಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದರು.

300x250 AD

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ತೇಜಸ್ವಿ ಮತ್ತು ಸದಸ್ಯರು ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಾಹಕ ಪ್ರದೀಪ ಆಚಾರ್ಯ ನಿರ್ವಹಿಸಿದರು. ಸಂಘದ ಎಲ್ಲ ಸಿಬ್ಬಂದಿಗಳು ಸಹಕರಿಸಿದರು.

Share This
300x250 AD
300x250 AD
300x250 AD
Back to top