Slide
Slide
Slide
previous arrow
next arrow

ಹೆದ್ದಾರಿ ಸುರಂಗ ತೆರೆಯಲು ಒಂದು ವಾರ ಕಾಲಾವಕಾಶ: ಗಣಪತಿ ಉಳ್ವೇಕರ

300x250 AD

ಕಾರವಾರ: ಆಡಳಿತ ಪಕ್ಷದ ಜನಪ್ರತಿನಿಧಿಗಳು ಉಸ್ತುವಾರಿ ಸಚಿವರ ಹಾಗೂ ಐಆರ್‌ಬಿಯ ನಡುವಿನ ಮುಸುಕಿನ ಗುದ್ದಾಟದಿಂದಾಗಿ ಕಾರವಾರದ ಸಾರ್ವಜನಿಕರಿಗೆ ರಾಷ್ಟ್ರೀಯ ಹೆದ್ದಾರಿ 66 ಕ್ಕೆ ಹೊಂದಿಕೊಂಡಂತೆ ಕಾರವಾರ ನಗರದ ಪ್ರವೇಶ ಭಾಗದಲ್ಲಿ ಹಳೆಯ ಲಂಡನ್ ಬ್ರಿಜ್ ಇರುವಲ್ಲಿ ಸುರಂಗ ಮಾರ್ಗವನ್ನು ಉಪಯೋಗಿಸಲು ಸಾಧ್ಯವಾಗದೇ ಇರುವುದು ಖಂಡನೀಯವಾಗಿದೆ ಎಂದು ವಿಧಾನಪರಿಷತ್ ಸದಸ್ಯ ಉಳ್ವೇಕರ ತಿಳಿಸಿದ್ದಾರೆ.

ಆಡಳಿತ ಪಕ್ಷದ ಸ್ಥಳೀಯ ಶಾಸಕ ಸತೀಶ್ ಸೈಲ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳ ಎಸ್ ವೈದ್ಯ ಅವರು ಈ ಸುರಂಗವನ್ನು ಸಾರ್ವಜನಿಕರ ಉಪಯೋಗಕ್ಕೆ ತೆರವು ಗೊಳಿಸದೇ ಪ್ರತಿಷ್ಠೆಯ ಪ್ರಶ್ನೆಯನ್ನಾಗಿ ತೆಗೆದುಕೊಂಡಿದ್ದು, ಸುರಕ್ಷತಾ ಕಾರಣದಿಂದಾಗಿ ಸುರಂಗವನ್ನು ಮುಚ್ಚಿದ್ದಾರೆ ಎಂಬ ಸಬೂಬು ಹೇಳುತ್ತಿದ್ದಾರೆ. ಈ ಭಾಗದಿಂದ ಪ್ರತಿದಿನ ಸಾವಿರಾರು ಸ್ಥಳೀಯ ನಿವಾಸಿಗಳು ಹಾಗೂ ದೊಡ್ಡ ಪ್ರಮಾಣದ ಪ್ರವಾಸಿಗಳು ತೆರಳುತ್ತಿದ್ದು ಸುರಂಗವನ್ನು ಮುಚ್ಚಿರುವುದರಿಂದ ಅವರೆಲ್ಲ 3-4 ಕಿಲೋಮೀಟರ್ ಹೆಚ್ಚಿನ ಪ್ರದೇಶವನ್ನು ಸುತ್ತಿ ಬರಬೇಕಾಗಿದೆ. ತಾವೇ ಉದ್ಘಾಟಿಸಿದ ಸುರಂಗವನ್ನು ಸ್ಥಳೀಯ ಶಾಸಕರು ಈಗ ಸುರಕ್ಷತೆಯ ದೃಷ್ಟಿಯಿಂದ ಸರಿ ಇಲ್ಲ ಎಂದು ಹೇಳುತ್ತಿರುವುದು ಕೇವಲ ಸುರಕ್ಷತೆಯ ದೃಷ್ಟಿಗಾಗಿಯೇ ಅಥವಾ ಅದರ ಹಿಂದೆ ಬೇರಾವುದಾದರೂ ಬೇಡಿಕೆ ಅಥವಾ ಹುನ್ನಾರ ಅಡಗಿದೆಯೋ ಎಂಬುದನ್ನು ಜನರಿಗೆ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ಭಾಗದ ಜನಪ್ರತಿನಿಧಿಯಾಗಿ ಪ್ರತಿದಿನ ಸಾರ್ವಜನಿಕರಿಂದ ಈ ಬಗ್ಗೆ ನನಗೆ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಸುರಂಗವನ್ನು ತಕ್ಷಣ ಸಾರ್ವಜನಿಕರು ಉಪಯೋಗಕ್ಕಾಗಿ ತೆರವುಗೊಳಿಸಬೇಕು ಎಂದು ನಾನು ಈ ಮೂಲಕ ಒತ್ತಾಯಿಸುತ್ತಿದ್ದೇನೆ. ಜಿಲ್ಲಾಡಳಿತ ಹಾಗೂ ಹಾಲಿ ಸರ್ಕಾರಗಳೇ ಈ ಅವ್ಯವಸ್ಥೆಗೆ ಜವಾಬ್ದಾರಿಯಾಗಿದ್ದು, ಸಾರ್ವಜನಿಕರ ಸಂಯಮದ ಕಟ್ಟೆ ಈಗ ಒಡೆಯುತ್ತಿದೆ. ಹೀಗಾಗಿ ಒಂದು ವಾರದ ಒಳಗಾಗಿ ಈ ಸುರಂಗವನ್ನು ಮತ್ತೆ ಸಾರ್ವಜನಿಕರ ಉಪಯೋಗಕ್ಕಾಗಿ ತೆರವುಗೊಳಿಸಬೇಕು. ಜಿಲ್ಲಾಧಿಕಾರಿಗಳು ಯಾವುದೇ ರಾಜಕಾರಣಿಗಳ ಒತ್ತಡ ಅಥವಾ ಬೆದರಿಕೆಗೆ ಮಣಿಯದೆ ದಿಟ್ಟವಾದ ಕ್ರಮ ಕೈಗೊಳ್ಳಬೇಕು ಎಂದು ಈ ಮೂಲಕ ನಾನು ಒತ್ತಾಯಿಸುತ್ತೇನೆ ಎಂದು ಗಣಪತಿ ಉಳ್ವೇಕರ ತಿಳಿಸಿದ್ದಾರೆ.

300x250 AD

ಇಂದಿನಿAದ ಒಂದು ವಾರದ ಒಳಗಾಗಿ ಈ ಸುರಂಗವನ್ನು ತೆರವುಗೊಳಿಸದಿದ್ದರೆ ಸಪ್ಟೆಂಬರ್ 29ರಂದು ನಾನೇ ಮುಂದಾಗಿ ನಿಂತು ಸಾರ್ವಜನಿಕರ ಸಹಕಾರದಿಂದ ಈ ಸುರಂಗ ಮಾರ್ಗವನ್ನು ಸಾರ್ವಜನಿಜನಿಕರ ಉಪಯೋಗಕ್ಕಾಗಿ ತೆರವುಗೊಳಿಸುತ್ತೇನೆ. ಆಗ ಯಾವುದಾದರೂ ಕಾನೂನು ಮತ್ತು ಸುವ್ಯಸ್ಥೆಯ ಸಮಸ್ಯೆ ಉಂಟಾದರೆ ಅದಕ್ಕೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸ್ಥಳೀಯ ಶಾಸಕರೇ ಹೊಣೆ ಎಂಬುದನ್ನು ಈ ಮೂಲಕ ಸ್ಪಷ್ಟಪಡಿಸುತ್ತೇನೆ. ಸೆ.29ರಂದು ಈ ಸುರಂಗವನ್ನು ನಾವು ಸಾರ್ವಜನಿಕರ ಉಪಯೋಗಕ್ಕಾಗಿ ತೆರವುಗೊಳಿಸಿಯೇ ಸಿದ್ಧ. ಅದಕ್ಕಾಗಿ ಯಾವುದೇ ಸ್ಥಿತಿಯನ್ನು ಎದುರಿಸಲು ನಾವು ಸಿದ್ಧರಿದ್ದು ಸಾರ್ವಜನಿಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಣಯಕ್ಕೆ ಬರಲಾಗಿದೆ. ಹೀಗಾಗಿ ಸ್ಥಳೀಯ ಆಡಳಿತ ಹಾಗೂ ಐಆರ್ ಬಿ ಮತ್ತು ಜನಪ್ರತಿನಿಧಿಗಳು ತಕ್ಷಣ ಕ್ರಮ ಕೈಗೊಂಡು ಇದನ್ನು ಈ ವಾರದಲ್ಲಿ ತೆರವುಗೊಳಿಸಲೇಬೇಕು. ಇಲ್ಲದಿದ್ದರೆ ಮುಂದಿನ ಪರಿಣಾಮಕ್ಕೆ ಸಿದ್ಧರಾಗಿರಬೇಕು ಎಂದು ಉಳ್ವೇಕರ್ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top