ಕುಮಟಾ: ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆಯನ್ನು ಕೇಂದ್ರ ಸರ್ಕಾರ ಮಂಡಿಸಿದ ಹಿನ್ನಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಪಟ್ಟಣದ ಗಿಬ್ ಸರ್ಕಲ್‌ನಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು.
ಗಿಬ್ ಸರ್ಕಲ್ ಬಳಿ ಸಾರ್ವಜನಿಕರಿಗೆ ಸಿಹಿ ವಿತರಿಸಿದ ಬಿಜೆಪಿ ಮಹಿಳೆಯರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಜಯ ಘೋಷ ಹಾಕಿ, ಸಂಭ್ರಮಿಸಿದರು. ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡಿಸಿದ್ದನ್ನು ಸ್ವಾಗತಿಸಿ, ಮಾತನಾಡಿದ ಜಿಲ್ಲಾ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸದಸ್ಯೆ ಅನುರಾಧ ಭಟ್ಟ ಹಾಗೂ ಮಹಿಳಾ ಮೋರ್ಚ ತಾಲೂಕಾಧ್ಯಕ್ಷೆ ಮೋಹಿನಿ ಗೌಡ ಅವರು, ಕಿತ್ತೂರು ರಾಣಿ ಚನ್ನಮ್ಮ, ರಾಣಿ ಅಬ್ಬಕ್ಕ ಮುಂತಾದವರು ಯಶಸ್ವಿ ಆಡಳಿತ ನಡೆಸಿದ ಉದಾಹರಣೆಗಳು ಇತಿಹಾಸದಲ್ಲಿ ದಾಖಲಾಗಿವೆ. ಮಹಿಳೆಯರು ಸಮರ್ಥರಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಅವರ ಪಾಲ್ಗೊಳ್ಳುವಿಕೆ ಹೆಚ್ಚಾಗುವ ಮೂಲಕ ವಿಕಸಿತ ಭಾರತವನ್ನು ನಿರ್ಮಾಣ ಮಾಡಬಹುದು. ಅಲ್ಲದೇ ಮಹಿಳೆಯರಿಗೆ ದೇಶದ ಆರ್ಥಿಕ ಪ್ರಗತಿಯಲ್ಲೂ ಭಾಗಿಯಾಗುವ ಅವಕಾಶ ಸಿಕ್ಕಂತಾಗಿದೆ ಎಂದರು.
ಈ ಸಂದರ್ಭದಲ್ಲಿ ಶಾಸಕ ದಿನಕರ ಶೆಟ್ಟಿ, ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಮಂಡಲಾಧ್ಯಕ್ಷ ಹೇಮಂತ ಗಾಂವಕರ್, ಯುವಮೋರ್ಚಾದ ಜಿಲ್ಲಾ ಪ್ರಭಾರಿ ಎಂ ಜಿ ಭಟ್ಟ, ಜಿಲ್ಲಾ ಪ್ರಮುಖರಾದ ಸುಬ್ರಾಯ ವಾಳ್ಕೆ, ಕುಮಾರ ಮಾರ್ಕಾಂಡೆ, ಜಿ ಜಿ ಹೆಗಡೆ, ಗಜಾನನ ಗುನಗಾ, ಚೇತೇಶ ಶ್ಯಾನಭಾಗ, ತುಳಸು ಗೌಡ, ಜಯಾ ಶೇಟ್, ಶೈಲಾ ಗೌಡ, ಜಿಲ್ಲಾ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.