ಕಾರವಾರ: ಗೃಹರಕ್ಷಕ ದಳದ ನೂತನ ಸಮಾದೇಷ್ಠ ಡಾ.ಸಂಜು ಟಿ.ನಾಯಾಕರವರು ಜಿಲ್ಲಾ ಕಮಾಂಡೆ0ಟ್ ಕಚೇರಿಯಲ್ಲಿ ಪ್ರಥಮ ಸಭೆ ಕೈಗೊಂಡು, ವಿವಿಧ ತಾಲೂಕಿನ 14 ಘಟಕಗಳ ಘಟಕಾಧಿಕಾರಿಗಳ ಸಮ್ಮುಖದಲ್ಲಿ ಹಾಗೂ ಕಚೇರಿಯ ಅಧಿಕಾರಿ ಮತ್ತು ಸಿಬ್ಬಂದಿಗಳ ಸಮ್ಮುಖದಲ್ಲಿ ಗಣಪತಿ ಬಂದೋಬಸ್ತ್ ಮತ್ತು ಗೃಹರಕ್ಷಕರ ಕುಂದು ಕೊರತೆಗಳು ಹಾಗೂ ಇತರೆ ವಿಷಯಗಳ ಬಗ್ಗೆ ಚರ್ಚೆ ಮಾಡಿದರು.
ಘಟಕಾಧಿಕಾರಿಗಳು ಮತ್ತು ಕಚೇರಿಯ ಸಿಬ್ಬಂದಿಗಳು ಅಭಿಮಾನದಿಂದ ಶಾಲು ಮತ್ತು ಪುಷ್ಪಗುಚ್ಛ ನೀಡಿ ಸನ್ಮಾನಿಸಿದರು. ವೃತ್ತಿಯಲ್ಲಿ ಪರಿಣಿತ ದಂತ ವೈದ್ಯರಾದ ಇವರು ಹೋಂ ಗಾರ್ಡ್ ಕಮಾಂಡೆ0ಟ್ ಆಗಿ ಅಧಿಕಾರ ಸ್ವೀಕರಿಸಿದ ನಂತರ ಪ್ರಥಮ ಬಾರಿಗೆ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನ ಭೇಟಿಯಾಗಿದ್ದು, ಅಧಿಕಾರಿಗಳು ಹಾಗೂ ಗೃಹರಕ್ಷಕರ ನಡುವೆ ಯಾವುದೇ ತಾರತಮ್ಯ ಇರಬಾರದೆಂದು ನಾವೆಲ್ಲಾ ಸಮಾನರು. ಸಮಾಜ ಸೇವೆ ಮಾಡುವವರು ಎಂದು ಹೇಳಿ, ತಮ್ಮ ಜೀವನದ ಕಹಿ ಮತ್ತು ಸಿಹಿ ಘಟನೆಗಳನ್ನ ತಮ್ಮ ಭಾಷಣದಲ್ಲಿ ವ್ಯಕ್ತಪಡಿಸಿದರು. ಸಾರ್ವಜನಿಕವಾಗಿ ಹೇಗೆ ಸರಳ ಜೀವನ ನಡೆಸಬೇಕು ಎಂಬ ಬಗ್ಗೆ ತಿಳಿಸಿಕೊಟ್ಟರು.
ಈ ಸಂದರ್ಭದಲ್ಲಿ ಜಿಲ್ಲಾ ಭೋದಕ ರಘು ಬಿ.ಸಿ, ಎಫ್‌ಡಿಎ ಶ್ರೀನಿವಾಸ್, ಎಸ್‌ಡಿಎ ಮಧು ಹಾಗೂ ಘಟಕದ ಅಧಿಕಾರಿಗಳು ಉಪಸಿತರಿದ್ದರು.