ಹಳಿಯಾಳ: ಕೆಎಲ್‌ಎಸ್ ವಿಡಿಐಟಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದ ವಿದ್ಯಾರ್ಥಿಗಳು ಇಂಡಸ್ಟ್ರಿಯಲ್ ಆಟೋಮೇಷನ್ ಕುರಿತಾದ ತಾಂತ್ರಿಕ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ.
ಮೈಸೂರಿನಲ್ಲಿರುವ ವಿತಾವಿಯ ಪ್ರಾದೇಶಿಕ ಕೇಂದ್ರದಲ್ಲಿ ಬೊಶ್ ರೇಸ್ರ‍್ತ್ ಶ್ರೇಷ್ಠತೆಯ ಕೇಂದ್ರವು ಆಯೋಜಿಸಿದ್ದ ಈ ತಾಂತ್ರಿಕ ಸ್ಪರ್ಧೆಯಲ್ಲಿ 7ನೇ ಸೆಮಿಸ್ಟರ್‌ನ ಅಮೆಯ್ ಹೆಚ್., ಸುದೀಪ್ ಎನ್., ಸೌರಭ್ ಹೆಚ್., ಶ್ರೀಕಾಂತ್ ಜಿ., ಶಶಿಧರ ಗೌಡ ಭಾಗವಹಿಸಿ ವಿಜೇತರಾಗಿ ಪುರಸ್ಕಾರವನ್ನು ಸ್ವೀಕರಿಸಿದ್ದಾರೆ.
ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದ 7ನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳಾದ ಆಶಿಶ್ ಜಿ., ಕೀರ್ತಿ ಎಸ್., ಶಾಂಭವಿ ಪಿ. ಮತ್ತು ಅಮೃತಾ ಇವರುಗಳು ಪ್ರೊ.ವಿಜಯಲಕ್ಷ್ಮಿ ಕಲಾಲ್ ಮತ್ತು ಪ್ರೊ.ದೀಪಕ್ ಶರ್ಮ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ್ದ ಸ್ಮಾರ್ಟ್ ಗ್ರೀನ್ ಹೌಸ್ ಫಾರ್ಮಿಂಗ್ ಪ್ರಾಜೆಕ್ಟ್ ಬೆಂಗಳೂರಿನ ಕ್ವೆಸ್ಟ್ ಗ್ಲೋಬಲ್ ಸರ್ವಿಸ್ ಪ್ರೈ.ಲಿ. ಅವರು ಸೆ.15ರಂದು ಆಯೋಜಿಸಿದ್ದ ಪ್ರಾಜೆಕ್ಟ್ ಪ್ರದರ್ಶನ ಸ್ಪರ್ಧೆ ಇಂಗೆನಿಯo- 2023ರಲ್ಲಿ ಪ್ರಶಂಸೆಗೆ ಒಳಪಟ್ಟಿದೆ. ದೇಶದಾದ್ಯಂತ 1300 ಹೆಚ್ಚು ಪ್ರಾಜೆಕ್ಟ್ಗಳಲ್ಲಿ ಅತ್ಯುತ್ತಮ 10 ಪ್ರಾಜೆಕ್ಟ್ ಪ್ರದರ್ಶನಗೊಂಡಿದ್ದು, ಮಹಾವಿದ್ಯಾಲಯದ ವಿದ್ಯಾರ್ಥಿಗಳ ಪ್ರಾಜೆಕ್ಟ್ ಇದರಲ್ಲೊಂದಾಗಿದೆ.
ವಿದ್ಯಾರ್ಥಿಗಳ ಈ ಎಲ್ಲಾ ಸಾಧನೆಯು ಹರ್ಷ ತಂದಿದೆ ಎಂದು ಆಡಳಿತ ಮಂಡಳಿಯ ಅಧ್ಯಕ್ಷರಾದ ವಿನಾಯಕ್ ಲೋಕುರ್ ಹೇಳಿದ್ದಾರೆ.ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಮನ್ನಣೆ ಗಳಿಸಿರುವುದಕ್ಕೆ ಪ್ರಾಚಾರ್ಯ ಡಾ. ವಿ ಎ ಕುಲಕರ್ಣಿ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದ ಮುಖ್ಯಸ್ಥ ಡಾ.ಮಹೇಂದ್ರ ದೀಕ್ಷಿತ್, ಪ್ರೊ ರಜತ್ ಆಚಾರ್ಯ ಮತ್ತು ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿಗಳು ಸಂತಸ ವ್ಯಕ್ತಪಡಿಸಿದ್ದಾರೆ.