ಕುಮಟಾ: ಉತ್ತರ ಕನ್ನಡ ಜಿಲ್ಲಾ ಚದುರಂಗ ಸಂಘದ ವತಿಯಿಂದ ಸೆ. 23 ಮತ್ತು 24 ರಂದು ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆ ನಡೆಯಲಿದೆ. ಸೆ.23 ರಂದು 14 ರಿಂದ 17 ವರ್ಷಗಳ ನಡುವಿನ ಮಕ್ಕಳ ನಡುವೆ ಸ್ಪರ್ದೆ ನಡೆಯಲಿದೆ. ಸೆ. 24 ರಂದು ಮುಕ್ತ ಚದುರಂಗ ಸ್ಪರ್ಧೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಸಂಘಟನೆಯ ಕಾರ್ಯದರ್ಶಿಗಳಾದ ರಾಮಚಂದ್ರ ಭಟ್ಟ ತಿಳಿಸಿದರು.
ಚದುರಂಗ ಸ್ಪರ್ಧೆಯು ಇಲ್ಲಿನ ಡಾ.ಎ.ವಿ.ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸಂಘಟಿಸಲಾಗಿದ್ದು, ಸ್ಪರ್ಧೆಯಲ್ಲಿ ಒಟ್ಟು 33 ಟ್ರೋಪಿ ಮತ್ತು ಬಹುಮಾನವನ್ನು ವಿತರಿಸಲಾಗುವದು. ಇದರಲ್ಲಿ 23 ಶನಿವಾರದಂದು ನಡೆಯುವ ಸ್ಪರ್ದೆಯಲ್ಲಿ ಉತ್ತಮ 5 ಆಟಗಾರರಿಗೆ ಹಾಗೂ ಕುಮಟಾ ತಾಲೂಕಿನ 3 ಉತ್ತಮ ಆಟಗಾರರಿಗೆ ಹಾಗೂ ಉತ್ತಮ ಬಾಲಕಿಯರಿಗೆ 3 ರಂತೆ 14 ವರ್ಷದೊಳಗಿನವರಿಗೆ ಓಟ್ಟು 11 ಹಾಗೂ 17 ವರ್ಷದ ಒಳಗಿನವರಿಗೆ 11 ರಂತೆ ಒಟ್ಟು 22 ಟ್ರೋಪಿ ಮತ್ತು ಬಹುಮಾನ ನೀಡಲಾಗುವದು.
ಸೆ.24 ರವಿವಾರದಂದು ನಡೆಯುವ ಮುಕ್ತ ವಿಭಾಗದ ಸ್ಪರ್ಧೆಯಲ್ಲಿ 11 ಟ್ರೋಪಿ ಮತ್ತು ಬಹುಮಾನ ನೀಡಲಾಗುವದು. ಈ ಪಂದ್ಯಾವಳಿಗಳ ಪ್ರಯೋಜನ ಪಡೆದುಕೊಳ್ಳಲು ಅಂತರಾಷ್ಟ್ರೀಯ ಶ್ರೇಯಾಂಕಿತ ಆಟಗಾರರಾದ ಯೋಗೀಶ ಭಟ್ಟ (Tel:+919986680118) ಅಥವಾ ಸುರೇಶ ಕಟ್ಟಿಗೆ (Tel:+919480718360) ಇವರಲ್ಲಿ ಹೆಸರು ನೊಂದಾಯಿಸಿಕೊಳ್ಳಲು ವಿನಂತಿಸಲಾಗಿದೆ.