ನವದೆಹಲಿ: ಇಂದಿನಿಂದ ಐದು ದಿನಗಳ ಕಾಳ ಸಂಸತ್ ಅಧಿವೇಶನ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಸಂಸತ್ ಆವರಣಕ್ಕೆ ಆಗಮಿಸಿದರು. ಅಧಿವೇಶನಕ್ಕೂ ಮುನ್ನ ಮಾತನಾಡಿದ ಪ್ರಧಾನಿ, ‘ಸಂಸತ್ತಿನ ಈ ಅಧಿವೇಶನ ಸಮಯ ಚಿಕ್ಕದಾದರೂ, ಇದು ಐತಿಹಾಸಿಕ ನಿರ್ಧಾರಗಳ ಅಧಿವೇಶನವಾಗಿದೆ, ಈ ಅಧಿವೇಶನದ ಮತ್ತೊಂದು ವಿಶೇಷತೆ ಎಂದರೆ 75 ವರ್ಷಗಳ ಪ್ರಯಾಣವೂ ಒಂದು. ಹೊಸ ಗಮ್ಯಸ್ಥಾನ. ಈಗ ಹೊಸ ಜಾಗದಿಂದ ಪಯಣ ಮುಂದಕ್ಕೆ ಸಾಗುತ್ತಿರುವಾಗ 2047ರ ವೇಳೆಗೆ ದೇಶವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಬೇಕು. ಇದಕ್ಕಾಗಿ ಮುಂಬರುವ ಎಲ್ಲಾ ನಿರ್ಧಾರಗಳನ್ನು ನೂತನ ಸಂಸತ್ ಭವನದಲ್ಲಿ ಕೈಗೊಳ್ಳಲಾಗುವುದು ಎಂದರು’.
ಐದು ದಿನಗಳ ಅಧಿವೇಶನಕ್ಕೆ ಸಂಸದರು ಅತ್ಯಂತ ಉತ್ಸಾಹದ ವಾತಾವರಣದಲ್ಲಿ ಗರಿಷ್ಠ ಸಮಯವನ್ನು ಮೀಸಲಿಡಬೇಕು. ಜೀವನದಲ್ಲಿ ನಿಮ್ಮಲ್ಲಿ ಉತ್ಸಾಹ ಮತ್ತು ನಂಬಿಕೆಯನ್ನು ತುಂಬುವ ಕ್ಷಣಗಳಾಗಿರಬೇಕು ಎಂದರು.
ನಾಳೆ ಗಣೇಶ ಚತುರ್ಥಿಯಂದು ಹೊಸ ಸಂಸತ್ತಿಗೆ ತೆರಳಲಿದ್ದೇವೆ. ಗಣಪತಿಯನ್ನು ವಿಘ್ನನಿವಾರಕ ಎಂದೂ ಕರೆಯಲಾಗುತ್ತದೆ, ಈಗ ದೇಶದ ಅಭಿವೃದ್ಧಿಯಲ್ಲಿ ಯಾವುದೇ ಅಡೆತಡೆಗಳಿಲ್ಲ ಎಂದರು.