ಶಿರಸಿ: 2021-22ನೇ ಸಾಲಿನಲ್ಲಿ ಶಿರಸಿ ತಾಲೂಕಿನಲ್ಲಿ ಪ್ರತಿಷ್ಠಾಪಿತ ಸಾರ್ವಜನಿಕ ಗಣೇಶ ಉತ್ಸವ ಸಮಿತಿಯವರಿಗೆ ಪೊಲೀಸ್ ಇಲಾಖೆ ಘೋಷಿಸಿದ್ದ ಪ್ರಶಸ್ತಿಯನ್ನು ಗುರುವಾರ ನಗರ ಠಾಣೆಯ ಗಣೇಶ ಮಂಟಪದಲ್ಲಿ ವಿತರಿಸಲಾಯಿತು.
ಈ ವೇಳೆ ಮಾತನಾಡಿದ ಡಿಎಸ್‌ಪಿ ಕೆ.ಎಲ್.ಗಣೇಶ, ಕಳೆದ ವರ್ಷದಿಂದ ಪೊಲೀಸ್ ಇಲಾಖೆ ಪ್ರಾರಂಭಿಸಿರುವ ಶಿಸ್ತು ಬದ್ಧವಾಗಿ, ಶಾಂತ ರೀತಿಯಿಂದ ಗಣೇಶ ಉತ್ಸವ ನಡೆಸಿರುವ ಸಮಿತಿಯನ್ನು ಆಯ್ಕೆ ಮಾಡಿ ಈ ಪ್ರಶಸ್ತಿಯನ್ನು ನೀಡುತ್ತಿದ್ದೇವೆ. ಪ್ರಶಸ್ತಿಗೆ ಹಲವು ಮಾನದಂಡಗಳನ್ನು ನೀಡಲಾಗಿದ್ದು, ಅದರ ಪ್ರಕಾರ ನಡೆದುಕೊಂಡ ಸಮಿತಿಯವರಿಗೆ ಬಹುಮಾನ ನೀಡಲಾಗಿದೆ. ಈ ಬಾರಿಯು ಅತ್ಯುತ್ತಮ ಗಣೇಶ ಸಮಿತಿಗೆ ಬಹುಮಾನ ನೀಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಸಿ.ಪಿ.ಐ. ರಾಮಚಂದ್ರ ನಾಯಕ, ಇನಸ್ಪೇಕ್ಟರ್ ಸೀತಾರಾಮ ಪಿ., ಪಿ.ಎಸ್.ಐ. ರಾಜಕುಮಾರ ಉಕ್ಕಲಿ, ರತ್ನಾ ಕುರಿ, ಚಂದ್ರಕಲಾ ಪತ್ತಾರ, ಸುನೀಲ್ ಉಪಸ್ಥಿತರಿದ್ದರು.
ಬಹುಮಾನ ಪಡೆದ ಸಮಿತಿಗಳು
- ಶ್ರೀ ಗಣೇಶ ಮಂಡಳಿ ಶಿವಾಜಿ ಚೌಕ,
- ಸಮನ್ವಯ ಸೇವಾ ಸಮಿತಿ ಹುಲೇಕಲ್,
- ಶ್ರೀ ಗಜಾನನೋತ್ಸವ ಸಮಿತಿ, (ಕಾಂಗ್ರೆಸ್) ಇಂದಿರಾ ನಗರ,
- ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ದಾಸನಕೊಪ್ಪ,
- ಶ್ರೀ ಸಾರ್ವಜನಿಕ ಗಜಾನನೋತ್ಸವ ಸಮಿತಿ (ಬಿಜೆಪಿ ಯುವಮೋರ್ಚಾ),
- ಶ್ರೀ ಸಾರ್ವಜನಿಕ ಗಜಾನನೊತ್ಸವ ಸಮಿತಿ ಹೆಗಡೆಕಟ್ಟಾ,
- ಫ್ರೆಂಡ್ಸ್ ಸರ್ಕಲ್ ಗಜಾನನೋತ್ಸವ ಸಮಿತಿ ಸೊರಬ ರಸ್ತೆ ಬನವಾಸಿ,
- ಶ್ರೀ ಸಾರ್ವಜನಿಕ ಗಜಾನನೊತ್ಸವ ಮಂಡಳಿ ಗಣೇಶ ನಗರ,
- ಶ್ರೀ ಗಜಾನನ ಸಮಿತಿ ಕಾಮ್ಕೊ,
- ಗಣೇಶೋತ್ಸವ ಸಮಿತಿ ಸಿಂಪಿಗಲ್ಲಿ,
- ಶ್ರೀ ಗಜಾನನೊತ್ಸವ ಸಮಿತಿ ಬಾಪೂಜಿನಗರ,
- ಶ್ರೀ ಸಾರ್ವಜನಿಕ ಗಜಾನನೊತ್ಸವ ಸಮಿತಿ ದಮನಬೈಲ್ ಚಿಪಗಿ