ಶಿರಸಿ: ಸಾಮಾಜಿಕ ನ್ಯಾಯ ಮತ್ತು ಅರಣ್ಯವಾಸಿಗಳ ಪರವಾಗಿ ನಿರಂತರ ಮೂರು ದಶಕಕ್ಕಿಂತ ಹೆಚ್ಚು ಸಂಘಟನೆ, ಹೋರಾಟ ಜರುಗಿಸಿರುವ ಹೋರಾಟಗಾರ ರವೀಂದ್ರ ನಾಯ್ಕ ಅವರಿಗೆ ರಾಜ್ಯ ಮಟ್ಟದ ಮಾನವ ಬಂಧತ್ವ ವೇದಿಕೆಯು ಬೆಂಗಳೂರಿನಲ್ಲಿ ಅಭಿನಂದಿಸಿದರು.
ರಾಜ್ಯ ಮಟ್ಟದಲ್ಲಿ ವೈಶಿಷ್ಟ ಪೂರ್ಣವಾದ ಪರಿಸರ ಜಾಗೃತೆಯ ಅಂಗವಾಗಿ ಲಕ್ಷ ವೃಕ್ಷ ಗಿಡ ನೆಡುವ ಅಭಿಯಾನ ಅಂಗವಾಗಿ ಸೆ. 14 ರಂದು ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಜರುಗಿದ ಸಭಾ ಕಾರ್ಯಕ್ರಮದಲ್ಲಿ ರಾಜ್ಯ ಮಾನವ ಬಂಧತ್ವ ವೇದಿಕೆಯ ಪರವಾಗಿ ವೇದಿಕೆಯ ಸಂಚಾಲಕ ಹಾಗೂ ವಕೀಲ ಅನಂತ ನಾಯಕ ಅವರ ನೇತ್ರತ್ವದಲ್ಲಿ ಅಭಿನಂದಿಸಲಾಯಿತು.
ಅಭಿನಂದನೆಯ ಸಂದರ್ಭದಲ್ಲಿ ವಿಶ್ರಾಂತ ನ್ಯಾಯಮೂರ್ತಿ ಹೆಚ್ ಎನ್ ನಾಗಮೋಹನದಾಸ್, ಶಿರಸಿ-ಸಿದ್ಧಾಪುರ ಕ್ಷೇತ್ರದ ಭೀಮಣ್ಣ ನಾಯ್ಕ, ಕಾರವಾರ ಕ್ಷೇತ್ರದ ಶಾಸಕ ಸತೀಶ್ ಶೈಲ್, ಜಿ ಎಮ್ ಶೆಟ್ಟಿ ಅಂಕೋಲಾ, ನಾಸೀರ್, ರಮಾನಂದ ನಾಂಯ್ಕ ಅಚಿವೆ, ಪಾಡುರಂಗ ನಾಯ್ಕ ಬೆಳಕೆ, ಮಾಭ್ಲೇಶ್ವರ ನಾಯ್ಕ ಬೇಡ್ಕಣಿ ಮುಂತಾದವರು ಉಪಸ್ಥಿತರಿದ್ದರು.
ಸಾಮಾಜಿಕ, ಸಾರ್ವಜನಿಕಿ ಹೋರಾಟದಲ್ಲಿ ಐತಿಹಾಸಿಕ ಹೆಜ್ಜೆಯನ್ನಿಟ್ಟ ರವೀಂದ್ರ ನಾಯ್ಕ ಅವರ ಕುರಿತು ಸಭೆಯಲ್ಲಿ ಗಣ್ಯರಿಂದ ಪ್ರೋತ್ಸಾಹಿಕ ಮಾತನಾಡಿ, ಹೋರಾಟಕ್ಕೆ ನ್ಯಾಯ ಕೊಡುವ ದಿಶೆಯಲ್ಲಿ ಸಕ್ರಿಯವಾಗಿ ಸ್ಪಂಧಿಸಿದ್ದೇವೆ ಎಂದು ಗಣ್ಯರು ನುಡಿದರು.