ಹೊನ್ನಾವರ: ಸ್ಥಳೀಯ ನ್ಯೂ ಇಂಗ್ಲಿಷ್ ಸ್ಕೂಲ್‌ನ ಪೂರ್ವ ವಿದ್ಯಾರ್ಥಿ, ಪ್ರಸ್ತುತ ಭಾರತೀಯ ಭೂಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೇಜರ್ ಭಾರ್ಗವ ಕಾಮತ್ ಶಾಲೆಗೆ ಭೇಟಿ ನೀಡಿ, ಎನ್‌ಸಿಸಿ ಕೆಡೆಟ್‌ಗಳಿಗೆ ಭೂಸೇನೆಯಲ್ಲಿರುವ ವಿಪುಲ ಅವಕಾಶಗಳು ಮತ್ತು ಎನ್‌ಸಿಸಿಯ ಮಹತ್ವ ಹಾಗೂ ರಾಷ್ಟ್ರ ಪ್ರೇಮದ ಕುರಿತಾಗಿ ವಿವರಿಸಿದರು.
ತಮ್ಮ ಸೇವಾವಧಿಯಲ್ಲಿ ನಡೆದ ರೋಚಕ ಘಟನೆಗಳ ಕುರಿತು ವಿವರಿಸಿದರು. ಪ್ರತಿಯೊಬ್ಬ ವಿದ್ಯಾರ್ಥಿಯೂ ದೇಶಪ್ರೇಮ, ಶಿಸ್ತು, ಧೈರ್ಯ ಮತ್ತು ಸೇವಾ ಮನೋಭಾವನೆಗಳನ್ನು ರೂಢಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಈ ಸಂದರ್ಭದಲ್ಲಿ ಶಾಲಾ ಎನ್‌ಸಿಸಿ ಟ್ರೂಪ್ ವತಿಯಿಂದ ಭಾವನಾತ್ಮಕವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.
ಶಾಲಾ ಮುಖ್ಯಾಧ್ಯಾಪಕರು ಮಾತನಾಡಿ, ಇಂತಹ ವಿದ್ಯಾರ್ಥಿಗಳೇ ದೇಶದ ನಿಜವಾದ ಆಸ್ತಿ ತಾವೆಲ್ಲರೂ ಇವರ ಆದರ್ಶವನ್ನು ಜೀವನದಲ್ಲಿ ಪಾಲಿಸಬೇಕು ಎಂದು ಹೇಳಿದರು. ಶಾಲಾ ಎನ್‌ಸಿಸಿ ಘಟಕದಲ್ಲಿ ತರಬೇತಿ ಪಡೆದ ಸುಮಾರು 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಂದು ಭಾರತೀಯ ಸೇನೆ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದು ಅತ್ಯಂತ ಹೆಮ್ಮೆ ಮತ್ತು ಅಭಿಮಾನ ತಂದಿದೆ ಎಂದು ಶಾಲಾ ಎನ್‌ಸಿಸಿ ಘಟಕದ ಮುಖ್ಯಸ್ಥ ಎಲ್.ಜಿ.ಭಟ್ಟ ಸಂತಸ ವ್ಯಕ್ತಪಡಿಸಿದರು.