ಶಿರಸಿ: ಇಲ್ಲಿನ ಯಕ್ಷ ಸಂಭ್ರಮ ಟ್ರಸ್ಟ್ ನಡೆಸುವ 9ನೇ ವರ್ಷದ ವಾರ್ಷಿಕ ತಾಳಮದ್ದಳೆ ಸರಣಿ ಶ್ರೀರಾಮ ನವರತ್ನಂ ಸೆಪ್ಟೆಂಬರ್ 9 ರಿಂದ 17ರ ತನಕ ನಡೆಯಲಿದ್ದು, 9 ದಿನ ಶ್ರೀರಾಮನ ಸುತ್ತ ಕಥಾ ಹಂದರ ಬಿಚ್ಚಿಕೊಳ್ಳಲಿದೆ.
ಪ್ರಥಮ ದಿನ ಸೆ.9ರಂದು ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ ಸಂಜೆ 5:30ಕ್ಕೆ ದಿವಂಗತ ಚಂದು ಬಾಬು ಪ್ರಶಸ್ತಿಯನ್ನು ವಿ. ಆರ್. ಹೆಗಡೆ ಅತ್ತಿಮುರಡು ಅವರಿಗೆ ಸ್ವರ್ಣವಲ್ಲಿ ಮಠಾಧೀಶರಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು ಪ್ರದಾನ ಮಾಡಲಿದ್ದಾರೆ. ಅತಿಥಿಗಳಾಗಿ ಕಟೀಲು ಹರಿನಾರಾಯಣದಾಸ ಆಸ್ರಣ್ಣ ಪಾಲ್ಗೊಳ್ಳುವರು. ಬಳಿಕ ಶ್ರೀರಾಮಾದರ್ಶ ತಾಳಮದ್ದಲೆ ನಡೆಯಲಿದೆ.
ಸೆ. 10 ರಿಂದ 17ರ ತನಕ ನಗರದ ಟಿಎಮ್ಎಸ್ ಸಭಾಂಗಣದಲ್ಲಿ ಪ್ರತಿದಿನ ಸಂಜೆ 4 ರಿಂದ ನಡೆಯಲಿದೆ. ಹಿಮ್ಮೇಳದಲ್ಲಿ ಪರಮೇಶ್ವರ ಹೆಗಡೆ ಐನಬೈಲ್, ಪ್ರಸನ್ ಭಟ್ ಬಾಳಕಲ್, ರವೀಂದ್ರ ಅಚವೆ,ರವಿಚಂದ್ರ ಕನ್ನಡಿಕಟ್ಟೆ, ಗಜಾನನ ಭಟ್ ತುಳಗೇರಿ, ರಾಮಕೃಷ್ಣ ಹೆಗಡೆ ಹಿಲ್ಲೂರು, ಅನಂತ ದಂತಳಿಕೆ, ಎ.ಪಿ ಪಾಠಕ್, ಚಂದ್ರಕಾಂತ್ ಮೂಡ್ಬಳ್ಳೆ, ವಿದ್ವಾನ್ ಗಣಪತಿ ಭಟ್ ಮೊಟ್ಟೆಗದ್ದೆ, ಚಿನ್ಮಯ್ ಭಟ್ ಇತರರು ಭಾಗವತರಾಗಿ ಭಾಗವಹಿಸಲಿದ್ದಾರೆ. ಎನ್.ಜಿ.ಹೆಗಡೆ, ನರಸಿಂಹ ಭಟ್ಟ ಹಂಡ್ರಮನೆ, ಪ್ರಸನ್ ಹೆಗ್ಗಾರ್, ಅನಿರುದ್ಧ ಹೆಗಡೆ, ವಿಘ್ನೇಶ್ವರ ಗೌಡ, ಶಂಕರ್ ಭಾಗವತ್, ಅಕ್ಷಯ್ ವಿಟ್ಲ ಇತರರು ಪಾಲ್ಗೊಳ್ಳಲಿದ್ದಾರೆ. ಪ್ರಸಿದ್ಧ ಅರ್ಥದಾರಿಗಳಾದ ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೇಕೈ, ಆಸ್ರಣ್ಣ ಹರಿನಾರಾಣದಾಸ, ವಾಸುದೇವ ರಂಗ ಭಟ್ಟ, ಡಾ. ಜಿ.ಎಲ್.ಹೆಗಡೆ ಕುಮಟಾ, ವಿಶ್ವೇಶ್ವರ ಭಟ್ಟ, ಮಂಜುನಾಥ್ ಗೊರಮನೆ, ಮಹೇಶ್ ಭಟ್ ಇಡುಗುಂದಿ, ಸ್ಮಿತಾ ಜೋಷಿ, ಶಂಭು ಶರ್ಮ, ಹರೀಶ್ ಬಳಂತಿಮೊಗರು, ವಿನಾಯಕ್ ಭಟ್, ನಿರ್ಮಲ ಗೋಳಿಕೊಪ್ಪ, ಹಿರಣ್ಯ ವೆಂಕಟೇಶ್ ಭಟ್, ಗಣಪತಿ ಭಟ್ ಸಂಕದಗುಂಡಿ, ದಿವಾಕರ ಹೆಗಡೆ ಕೆರೆಹೊಂಡ, ಜಯಪ್ರಕಾಶ್ ಶೆಟ್ಟಿ, ಎಂ.ಎನ್ ಹೆಗಡೆ ಯಲ್ಲಾಪುರ, ಡಿ.ಕೆ. ಗಾಂವ್ಕರ್, ಸತೀಶ ಶೆಟ್ಟಿ, ವಾದಿರಾಜ ಕಲ್ಲೂರಾಯ, ಎಂ.ವಿ.ಹೆಗಡೆ, ರಾಮಚಂದ್ರ ಶಿರಳಗಿ, ಶ್ರೀಧರ ಚಪ್ಪರಮನೆ ಸೇರಿದಂತೆ ಐವತ್ತಕ್ಕೂ ಅಧಿಕ ಹಿಮ್ಮೇಳ, ಮುಮ್ಮೇಳ ಕಲಾವಿದರು ಸರಣಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಮಾರೋಪ ಸಮಾರಂಭ ಸೆ. 17ರಂದು ಟಿಎಂಎಸ್ ಸಭಾಂಗಣದಲ್ಲಿ ನಡೆಯಲಿದ್ದು ಅಧ್ಯಕ್ಷತೆಯನ್ನು ಟ್ರಸ್ಟ್ ಅಧ್ಯಕ್ಷ ಕೇಶವ ಹೆಗಡೆ ಗಡೀಕೈ ವಹಿಸಿಕೊಳ್ಳುವರು. ಅತಿಥಿಗಳಾಗಿ ಟಿಎಂಎಸ್ ಅಧ್ಯಕ್ಷ ಜಿ.ಎಂ.ಹೆಗಡೆ ಹುಳಗೋಳ ಪಾಲ್ಗೊಳ್ಳುವರು ಎಂದು ಟ್ರಸ್ಟ್ ಕೋಶಾಧ್ಯಕ್ಷ ಸೀತಾರಾಮ ಚಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಾವ ದಿನ ಯಾವುದು?
ಸೆ.9 ಶ್ರೀರಾಮಾದರ್ಶ ( ಸ್ವರ್ಣವಲ್ಲೀಯಲ್ಲಿ)
ಸೆ.10 ಶ್ರೀರಾಮ ವಿರೋಧ (ಟಿಎಂಎಸ್ ಸಭಾಂಗಣ)
ಸೆ.11 ಶ್ರೀರಾಮ ಕಾರುಣ್ಯ (ಟಿಎಂಎಸ್ ಸಭಾಂಗಣ)
ಸೆ.12 ಶ್ರೀರಾಮ ದಂಡನೆ (ಟಿಎಂಎಸ್ ಸಭಾಂಗಣ)
ಸೆ.13 ಶ್ರೀರಾಮ ಪ್ರಪತ್ತಿ (ಟಿಎಂಎಸ್ ಸಭಾಂಗಣ)
ಸೆ.14 ಶ್ರೀರಾಮ ಸಂಗ್ರಾಮ (ಟಿಎಂಎಸ್ ಸಭಾಂಗಣ)
ಸೆ.15 ಶ್ರೀರಾಮ ವಿಜಯ (ಟಿಎಂಎಸ್ ಸಭಾಂಗಣ)
ಸೆ.16 ಶ್ರೀರಾಮ ತತ್ವ (ಟಿಎಂಎಸ್ ಸಭಾಂಗಣ)
ಸೆ.17 ಶ್ರೀರಾಮ ದರ್ಶನ (ಟಿಎಂಎಸ್ ಸಭಾಂಗಣ)