ಶಿರಸಿ:ಬಿಸಲಕೊಪ್ಪ ವಲಯ ಮಟ್ಟದ ಪ್ರೌಢಶಾಲಾ ಇಲಾಖಾ ಕ್ರೀಡಾ ಕೂಟದಲ್ಲಿ ತಾಲೂಕಿನ ಇಸಳೂರಿನ ಸರಕಾರಿ ಪ್ರೌಢಶಾಲೆಯು ವೈಯಕ್ತಿಕ ಮತ್ತು ಗುಂಪಿನ ಆಟಗಳಲ್ಲಿ ಹೆಚ್ಚಿನ ಸಾಧನೆಯೊಂದಿಗೆ ಬಹುತೇಕ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡು, ಸತತ 5ನೇ ವರ್ಷ “ಸಮಗ್ರ ತಂಡ” ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.
ವೈಯಕ್ತಿಕ ವಿಭಾಗದಲ್ಲಿ ಕು. ಅಮೃತಾ ಜಾರ್ಜ 300 ಮೀ ಓಟ ಪ್ರಥಮ, 1500ಮೀ ಓಟ ಪ್ರಥಮ, 800ಮೀ ಓಟ ಪ್ರಥಮ ಸ್ಥಾನವನ್ನು, ಕು. ರಾಫಿಯಾ ಮಹ್ಮದ ಉದ್ದ ಜಿಗಿತ, ತ್ರಿವಿಧ ಜಿಗಿತ, ಪೋಲ್ ವಾಲ್ಟ್ನಲ್ಲಿ ಪ್ರಥಮ ಸ್ಥಾನ ಪಡೆದು ಬಾಲಕಿಯರ ವಿಭಾಗದ ವೀರಾಗ್ರಣಿ ಪ್ರಶಸ್ತಿಯನ್ನು ಮತ್ತು ಪ್ರಣಿತ ಕೆ. 3000ಮೀ, 1500ಮೀ, 800ಮೀ ಓಟಗಳಲ್ಲಿ ಪ್ರಥಮ ಸ್ಥಾನ ಪಡೆದು ಬಾಲಕ ವಿಭಾಗದ ವೀರಾಗ್ರೇಸರ ಪ್ರಶಸ್ತಿ ಪಡೆದಿದ್ದಾರೆ.
ಗುಂಪಿನ ಆಟಗಳಲ್ಲಿ 4 * 100 ಮೀ ರಿಲೇಯಲ್ಲಿ ಎರಡು ವಿಭಾಗಗಳಲ್ಲಿ ಪ್ರಥಮ, ಬಾಲಕರ ಮತ್ತು ಬಾಲಕಿಯರ ಥ್ರೋಬಾಲ್, ಕಬ್ಬಡ್ಡಿ ಪ್ರಥಮ, ಬಾಲಕ ವಿಭಾಗದ ಖೋಖೋ ಪಂದ್ಯದಲ್ಲಿ ಪಥಮ ಸ್ಥಾನಪಡೆದು ತಾಲೂಕು ಹಂತಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ತರಬೇತಿ ನೀಡಿದ ದೈಹಿಕ ಶಿಕ್ಷಣ ಶಿಕ್ಷಕ ಗಣೇಶ ಬಿ.ವಿ ಹಾಗೂ ಶಿಕ್ಷಕ ವೃಂದಕ್ಕೆ ಶಾಲಾಬಿವೃದ್ಧಿ ಸಮಿತಿ ಮತ್ತು ಮುಖ್ಯಾಧ್ಯಾಪಕರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿ, ಎಂಮುಂದಿನ ಹಂತಕ್ಕೆ ಶುಭ ಹಾರೈಸಿದ್ದಾರೆ.