ಶಿರಸಿ: ತಾಲೂಕ ಆಡಳಿತ, ನಗರಸಭೆ, ತಾಲೂಕ ಪಂಚಾಯತ ಶಿರಸಿ ಹಾಗೂ ಆರ್ಯ ಈಡಿಗ, ನಾಮಧಾರಿ ಬಿಲ್ಲವ ಅಭಿವೃದ್ಧಿ ಸಂಘ (ರಿ.) ಶಿರಸಿ ಇವರ ಸಂಯುಕ್ತ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಇವರ 169 ನೇ ಜಯಂತಿಯು ಆ.31, ಗುರುವಾರ ಬೆಳಿಗ್ಗೆ 11-30 ಗಂಟೆಗೆ ಯಲ್ಲಾಪುರ ರಸ್ತೆಯಲ್ಲಿರುವ ಡಾ. ಬಿ. ಆರ್. ಅಂಬೇಡ್ಕರ ಭವನದಲ್ಲಿ ನಡೆಯಲಿದೆ.
ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಯನ್ನು ವಿಜೃಂಭಣೆಯಿಂದ ಗುರುಗಳ ಭಾವಚಿತ್ರದ ಮೆರವಣಿಗೆಯೊಂದಿಗೆ ನಡೆಸಲು ನಿಶ್ಚಯಿಸಲಾಗಿದೆ. ಅಂದು ಗುರುಗಳ ಭಾವಚಿತ್ರವನ್ನು ಶೃಂಗರಿಸಿ, ಮೆರವಣಿಗೆಯು ಬೆಳಿಗ್ಗೆ 9-30 ಘಂಟೆಗೆ ಶ್ರೀ ಮಾರಿಕಾಂಬಾ ದೇವಸ್ಥಾನದಿಂದ ಪಾದಯಾತ್ರೆಯ ಮೂಲಕ ಹೊರಟು ಶಿವಾಜಿವೃತ್ತ, ಬಸ್ನಿಲ್ದಾಣ ವೃತ್ತ, ಸಿ.ಪಿ. ಬಝಾರ, ದೇವಿಕೆರೆ ವೃತ್ತ ಮತ್ತು ಅಶ್ವಿನಿ ಸರ್ಕಲ್ ಮೂಲಕ ಹಾದು ಡಾ. ಬಿ.ಆರ್. ಅಂಬೇಡ್ಕರ ಭವನ ತಲುಪಲಿದ್ದು,ನಂತರ ಸಭಾಭವನದಲ್ಲಿ ಸಭಾಕಾರ್ಯಕ್ರಮವು ನಡೆಯುವುದು. ಈ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಗೌರವಾನ್ವಿತ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆ ಹಾಗೂ ಉದ್ಘಾಟನೆಯನ್ನು ಶಾಸಕ ಭೀಮಣ್ಣ ಟಿ. ನಾಯ್ಕ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಲೋಕಸಭಾ ಸದಸ್ಯ ಅನಂತಕುಮಾರ ಹೆಗಡೆ, ಉಪವಿಭಾಗಾಧಿಕಾರಿಗಳು ದೇವರಾಜ್ ಆರ್. ಇವರು ಆಗಮಿಸಲಿದ್ದಾರೆ.
ಶಿರಸಿ ನಗರಸಭೆಯ ಸರ್ವ ಸದಸ್ಯರು ಮತ್ತು ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಹಾಗೂ ಗುರುವಿನ ಸದ್ಭಕ್ತರು, ಶಿರಸಿ ತಾಲೂಕಾ ಎಲ್ಲಾ ಸಮಾಜ ಬಾಂಧವರು ತಮ್ಮ ಕುಟುಂಬ ಸಮೇತರಾಗಿ ಗುರುವಿನ ಜಯಂತಿ ಮೆರವಣಿಗೆ ಹಾಗೂ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಪ್ರಕಟಣೆಯಲ್ಲಿ ಕೋರಲಾಗಿದೆ.