ಯಲ್ಲಾಪುರ: ಇತ್ತೀಚೆಗೆ ಭಟ್ಕಳದಲ್ಲಿ ವಕೀಲ ಗುರುದಾಸ ಮೊಗೇರರ ಮೇಲೆ ನಡೆದ ದೈಹಿಕ ಹಲ್ಲೆ ಖಂಡಿಸಿ ಹಾಗೂ ವಕೀಲರ ಸಂರಕ್ಷಣಾ ಕಾಯಿದೆ ಶೀಘ್ರವಾಗಿ ಜಾರಿ ಮಾಡುವಂತೆ ಆಗ್ರಹಿಸಿ ವಕೀಲರ ಸಂಘದವರು ತಹಶೀಲ್ದಾರರ ಕಚೇರಿಗೆ ತೆರಳಿ ಮನವಿ ಅರ್ಪಿಸಿದರು.
ವಕೀಲರ ಸಂಘದ ಅಧ್ಯಕ್ಷೆ ಸರಸ್ವತಿ ಭಟ್ ನೇತೃತ್ವದಲ್ಲಿ ವಕೀಲರುಗಳಾದ ಬೀಬಿ ಅಮೀನಾ ಶೇಖ, ಗಣೇಶ ಪಾಠಣಕರ್, ಜಿ.ಎಸ್.ಭಟ್ ಹಳವಳ್ಳಿ, ಜಿ.ಎಸ್.ಭಟ್ ಕಣ್ಣಿ, ವಿ.ಟಿ.ಭಟ್, ಜಿ.ವಿ.ಭಾಗ್ವತ್, ಮಹೇಶ ಎನ್.ನಾಯ್ಕ, ಪಿ.ಜಿ.ಭಟ್, ಎಂ.ಕೆ.ಹೆಗಡೆ, ಸುಭಾಸ್ ಭಟ್ ಮುಂತಾದವರು ಕೋರ್ಟ್ ಕಲಾಪದಿಂದ ಹೊರಗುಳಿದು ನಂತರ ತಹಶೀಲ್ದಾರ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಭಟ್ಕಳದಲ್ಲಿ ಗುರುದಾಸ ಮೊಗೇರ ವಕೀಲರ ಮೇಲೆ ಕಕ್ಷಿದಾರನೊಬ್ಬ ದೈಹಿಕ ಹಲ್ಲೆ ನಡೆಸಿದ ಘಟನೆಯ ಕುರಿತಂತೆ ಯಲ್ಲಾಪುರ ವಕೀಲರ ಸಂಘದ ತೀವ್ರವಾಗಿ ಖಂಡಿಸುತ್ತದೆ. ಘಟನೆಯನ್ನು ಕುರಿತು ಆರೋಪಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ವಕೀಲರ ರಕ್ಷಣೆ ಮತ್ತು ಅವರ ವೃತ್ತಿಗೆ ಕಳಂಕ ಬಾರದಂತೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಈ ಮೂಲಕ ಸರಕಾರಕ್ಕೆ ಮತ್ತು ರಾಜ್ಯಪಾಲರಿಗೆ ಮತ್ತು ಗೃಹ ಇಲಾಖೆಗೆ ಮನವಿ ಮೂಲಕ ಆಗ್ರಹಿಸಿದರು. ಶಿರಸ್ತೇದಾರ ಕೆ.ಎಸ್.ಫರ್ನಾಂಡೀಸ್ ಮನವಿ ಸ್ವೀಕರಿಸಿ ರವಾನಿಸುವ ಭರವಸೆ ನೀಡಿದರು.