ಕಾರವಾರ: ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮಕ್ಕಳಿಗೆ ಪುಸ್ತಕದ ಹೊರೆ ಕಡಿಮೆ ಮಾಡುವ ಪ್ರಯತ್ನದ ಅಂಗವಾಗಿ ಪ್ರತಿ ತಿಂಗಳ ಮೂರನೇ ಶನಿವಾರದಂದು ಹಮ್ಮಿಕೊಂಡ ಸಂಭ್ರಮ ಶನಿವಾರದಲ್ಲಿ ನಗೆ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಲಿಂಗ ಸಮಾನತೆಯ ಕುರಿತು ‘ಬಿಲ್ಲು ಹಬ್ಬ’ ನಾಟಕವನ್ನು ಅಭಿನಯಿಸಿದ್ದು ವಿಶೇಷವಾಗಿತ್ತು.
ಪಾತ್ರಧಾರಿಗಳಾಗಿ ಪೂಜಾ ಪಾಂಡುರಂಗ ಗೌಡ, ಶ್ವೇತಾ ಗೆರಗ್ಯಾ ಗೌಡ, ದಾಕ್ಷಾಯಣಿ ಗೌಡ, ಲಾಲಿ ಗೌಡ, ಶಾಂತಾ ಗೌಡ, ಸುದೀಪ ಗೌಡ, ಶಾಲಿನಿ ಗೌಡ ಇವರು ಉತ್ತಮವಾಗಿ ಅಭಿನಯ ಮಾಡಿದರು. ಲಕ್ಷ್ಮಿ ಗೌಡ ಮತ್ತು ಪ್ರಸಾದ ಗೌಡ ಸಂಗಡಿಗರು ಕಥಾ ವಾಚನ ಮಾಡಿದರು. ಪ್ರಭಾವತಿ ಗೌಡ ಮತ್ತು ದುರ್ಗೇಶ ಗೌಡ ಪುಸ್ತಕದಲ್ಲಿ ಬಂದ ಸಾಬಿನಯ ಗೀತೆಯನ್ನು ಹಾಡಿದರು.
ಶರತ ಗೌಡ, ನಿತೇಶ ಗೌಡ, ಕಾಮೇಶ್ವರ ಗೌಡ ಹಾಗೂ ಸಂಗಡಿಗರು ಕೋಲಾಟ ಪ್ರದರ್ಶಿಸಿದರು. ಮೋನಿಕಾ ಗೌಡ, ನಿತೇಶ ಗೌಡ, ಅಕ್ಷಿತಾ ಗೌಡ, ಪಾವನಿ ಗೌಡ, ದಾಮಿನಿ ಗೌಡ, ದಿವ್ಯಾ ಗೌಡ ‘ಕನ್ನಡಮ್ಮನ ಹಾರೈಕೆ’ ಹಾಡನ್ನು ಲಿಂಗ ಸಮಾನತೆಯ ಪ್ರತೀಕವಾಗಿ ಭೇದ ಭಾವವಿಲ್ಲದೆ ಪ್ರದರ್ಶಿಸಿದ್ದು ವಿಶೇಷವಾಗಿತ್ತು. ಕಾರ್ಯಕ್ರಮ ನಿರ್ವಹಣೆಯನ್ನು ಶಿಕ್ಷಕಿ ರೂಪಾ ಉಮೇಶ ನಾಯ್ಕ ಮಾಡಿದರೆ, ಕಾರ್ಯಕ್ರಮದ ಉಸ್ತುವಾರಿಯನ್ನು ಮುಖ್ಯಾಧ್ಯಾಪಕ ಅಖ್ತರ ಸೈಯದ್ ಅವರು ನಿರ್ವಹಿಸಿದರು.