ಹಳಿಯಾಳ: ಸಾಫ್ಟ್ವೇರ್ ಉದ್ಯಮ ಪ್ರಸ್ತುತವಾಗಿ ಬಳಸುತ್ತಿರುವ ನೂತನ ತಂತ್ರಜ್ಞಾನಗಳ ಕುರಿತು ಅರಿವು ಹೊಂದಿದಲ್ಲಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬಹುದೆಂದು ವಿತಾವಿ ಬೆಳಗಾವಿಯ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಪ್ರಾಧ್ಯಾಪಕ ಡಾ.ಸಂತೋಷ್ ಎಲ್.ದೇಶಪಾಂಡೆ ಹೇಳಿದರು.
ಪಟ್ಟಣದ ಕೆಎಲ್‌ಎಸ್ ವಿಡಿಐಟಿ ಮಹಾವಿದ್ಯಾಲಯವು ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಅವರು ಮಾತನಾಡಿದರು. ಪ್ರಾಚಾರ್ಯ ಡಾ.ವಿ.ಎ.ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥೆ ಪ್ರೊ.ಪೂರ್ಣಿಮಾ ರಾಯ್ಕರ್ ಸ್ವಾಗತಿಸಿದರು. ನೇತ್ರಾ ವಂದಿಸಿದರು. ನಿವೇದಿತಾ ನಿರೂಪಿಸಿದರು. ಮಹಾವಿದ್ಯಾಲಯದ ಐಎಸ್‌ಟಿಇ ಹಾಗೂ ಐಇಐ’ನ ಸಂಚಾಲಕ ಪ್ರೊ.ಕಾರ್ತಿಕ್ ಕುಲಕರ್ಣಿ, ಐಐಸಿಯ ಸಂಚಾಲಕ ಡಾ.ಮಹೇಂದ್ರ ದೀಕ್ಷಿತ್ ಕಾರ್ಯಕ್ರಮವನ್ನು ಸಂಯೋಜಿಸಿದ್ದರು.