• Slide
    Slide
    Slide
    previous arrow
    next arrow
  • ಸುಸಜ್ಜಿತ ಆಸ್ಪತ್ರೆ ಉತ್ತರ ಕನ್ನಡ ಜನರ ಹಕ್ಕು: ಡಾ.ವಿವೇಕ ಉಡುಪ

    300x250 AD

    ಭಟ್ಕಳ: ವಿವೇಕ ಜಾಗ್ರತ ಬಳಗಗಳು ಮಧ್ಯ ವಲಯ-4 ಡಿವೈನ್ ಪಾರ್ಕ್ ಟ್ರಸ್ಟ್ ಸಾಲಿಗ್ರಾಮ ಇದರ ಅಂಗ ಸಂಸ್ಥೆ ಸಾರಥ್ಯದಲ್ಲಿ 22ನೇ ‘ಯೋಗ ಪರ್ಯಟನೆ’ ವಿಶೇಷ ಸತ್ಸಂಗ ಕಾರ್ಯಕ್ರಮವು ಇಲ್ಲಿನ ನಾಗಯಕ್ಷೆ ಧರ್ಮಾರ್ಥ ಸಭಾಭವನದಲ್ಲಿ ನಡೆಯಿತು.

    ಕಾರ್ಯಕ್ರಮವನ್ನು ಸ್ವಾಮಿ ವಿವೇಕಾನಂದರಿಗೆ ಆರತಿ ಎತ್ತುವ ಮೂಲಕ ಪೂಜೆ ಸಲ್ಲಿಸಿ ಶ್ರೀರಾಮ ಸ್ತೋತ್ರ ಪಠಣದ ಮೂಲಕ ಆರಂಭಿಸಲಾಯಿತು. ಡಾ.ವಿವೇಕ ಉಡುಪ ಮಾತನಾಡಿ, ಜಗತ್ತಿನಲ್ಲಿ ಮಾನಸಿಕ ಒತ್ತಡ ಇರುವವರ ಸಂಖ್ಯೆ ಹೆಚ್ಚುತ್ತಿದೆ. ನಮ್ಮಲ್ಲಿನ ಭಾವೋದ್ವೇಗ ಹೆಚ್ಚಿಸಿ ಮನಸ್ಸಿನ ಸಮತೋಲನ ಹಾಳು ಮಾಡಿಕೊಳ್ಳಲು ನಾವುಗಳೇ ಕಾರಣ. ಯುವ ಜನತೆಯು ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳುವ ದಾರಿ ಉತ್ತಮ ಪಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಯುವ ಜನತೆಗಾಗಿ ಬಹುದೊಡ್ಡ ವ್ಯಕ್ತಿತ್ವ ವ್ರದ್ದಿಯ ಸಲಹೆಯನ್ನು ನೀಡುತ್ತಾ ಬಂದಿದ್ದು, ಅದನ್ನು ನಮ್ಮೆಲ್ಲರ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಸ್ವಾಮಿ ವಿವೇಕಾನಂದರ ವಿಶ್ವ ಗುರು ಕನಸು ನನಸಾಗಲಿದೆ ಎಂದರು.

    300x250 AD

    ಜಿಲ್ಲೆಯ ಜನರು ಉಡುಪಿ ಭಾಗಕ್ಕೆ ಚಿಕಿತ್ಸೆಗಾಗಿ ಬರುತ್ತಿರುವುದನ್ನು ಗಮನಿಸುತ್ತೇನೆ. ನಮ್ಮಲ್ಲಿಯು ಸಹ ರೋಗಿಗಳು ಬರುತ್ತಿದ್ದು ಆಗ ನಿಮ್ಮ ಜಿಲ್ಲೆಯ ಜನರಿಗೆ ನಿಮ್ಮ ಚಿಕಿತ್ಸೆಯ ವೆಚ್ಚ ಆಸ್ಪತ್ರೆಯ ನಿರ್ಮಾಣದಿಂದ ಉಳಿಯಲಿದೆ. ಇದು ಜಿಲ್ಲೆಯ ಜನರ ಹಕ್ಕು ಅದನ್ನು ಹೆಚ್ಚಿನ ಜವಾಬ್ದಾರಿಯನ್ನು ಹೊತ್ತು ಸಮಾಜದ ಜನರು ಕಳಕಳಿ ಇಟ್ಟು ಸರಕಾರದ ಗಮನಕ್ಕೆ ಬರಬೇಕು. ಸುಸಜ್ಜಿತ ಆಸ್ಪತ್ರೆಯ ನಿರ್ಮಾಣ ಇಷ್ಟರೊಳಗೆ ಆಗಬೇಕು. ಇನ್ನು ಅತೀ ಶೀಘ್ರದಲ್ಲಿ ಆಗಲಿ ಎಂದು ಗುರೂಜಿಯಲ್ಲಿ ಪ್ರಾರ್ಥಿಸಲಿದ್ದೇವೆ ಎಂದರು.
    ಕಾರ್ಯಕ್ರಮಕ್ಕೆ ಹೊನ್ನಾವರ, ಕುಮಟಾ, ಅಂಕೋಲಾ ಮತ್ತು ಕಾರವಾರದಿಂದ ಡಿವೈನ್ ಪಾರ್ಕ್ನ ಸಾವಿರಾರು ಭಕ್ತರು ವಾಹನದ ಮೂಲಕ ಆಗಮಿಸಿ ಪಾಲ್ಗೊಂಡರು. ವೇದಿಕೆಯಲ್ಲಿ ಭಟ್ಕಳ ವಿವೇಕದ ಪ್ರಮುಖರು, ಸಿ.ಟು ಅಧಿಕಾರಿ ಬಳಗದ ಎಮ್.ಎನ್.ನಾಯ್ಕ, ಭಟ್ಕಳ ಜಾಗ್ರತ ಬಳದ ಉಪಾಧ್ಯಕ್ಷ ಜಿ.ಪಿ.ರಾಜಶೇಖರ, ಹೊನ್ನಾವರ ವಿವೇಕ ಜಾಗ್ರತ ಬಳಗದ ಅಧ್ಯಕ್ಷ ಅನಂತ ಎಮ್. ಗೌಡ, ಕುಮಟಾ ಬಳಗದ ಕಾರ್ಯಾಧ್ಯಕ್ಷ ಸುರೇಶ ಅಂಬಿಗ ಇದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top