ಭಟ್ಕಳ: ಸರಕಾರಿ ಪ್ರೌಢಶಾಲೆ ಸೋನಾರಕೇರಿಯಲ್ಲಿ 77ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ಅದ್ದೂರಿಯಿಂದ ಜರುಗಿತು.
ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರಾದ ಡಾ.ಯಲ್ಲಮ್ಮ, ಸ್ವಾತಂತ್ರ್ಯ ದಿನಾಚರಣೆಯ ಮಹತ್ವ ಹಾಗೂ ಮಾಡಬೇಕಾದ ದೃಢಸಂಕಲ್ಪದ ಕುರಿತು ಮಾತನಾಡಿದರು. ಶಿಕ್ಷಕರಾದ ರವಿ ನಾಯ್ಕ ಇವರು ಭಗತ್ಸಿಂಗ್, ಸುಭಾಸ್ಚಂದ್ರ ಬೋಸ್ ಹಾಗೂ ಇತರೆ ದೇಶ ಭಕ್ತರ ದೇಶಪ್ರೇಮ, ತ್ಯಾಗ, ಬಲಿದಾನಗಳ ಕುರಿತು ಮಾತನಾಡಿದರು. ಎಸ್.ಡಿ.ಎಮ್.ಸಿ ಅದ್ಯಕ್ಷರಾದ ರಾಮಾ ನಾಯ್ಕ ಧ್ವಜಾರೋಹಣ ನೆರವೇರಿಸಿ ಮಕ್ಕಳಿಗೆ ಸಿಹಿ ವಿತರಿಸಿ ಶುಭಾಶಯ ಕೋರಿದರು.
ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. ಮಕ್ಕಳಿಗೆ ಸಿಹಿಯನ್ನು ವಿತರಿಸಿದ ದಾನಿಗಳಿಗೆ ಧನ್ಯವಾದಗಳನ್ನು ಹೇಳಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ಶಿಕ್ಷಕ ವೃಂದ ಹಾಗೂ ಸಿಬ್ಬಂದಿ ವರ್ಗ, ಎಸ್.ಡಿ.ಎಮ್.ಸಿ ಸದಸ್ಯರು, ಬಿ.ಎಡ್ ಪ್ರಶಿಕ್ಷಣಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಶಾಲಾ ಸಂಸತ್ತಿನ ಪ್ರತಿನಿಧಿ ದೀಕ್ಷಾ ದೀಪಕ ನಾಯ್ಕ ನಿರೂಪಿಸಿ, ವಂದನಾರ್ಪಣೆ ಮಾಡಿದಳು.