Slide
Slide
Slide
previous arrow
next arrow

ಸೇವಾ ಮನೋಭಾವದಿಂದ ಸ್ವಸ್ಥ ಸಮಾಜದ ನಿರ್ಮಾಣ ಸಾಧ್ಯ: ವಿನುತಾ ನಾಯಕ

300x250 AD

ಕುಮಟಾ: ಇಂದಿನ ಆಧುನಿಕ ಯುಗದಲ್ಲಿ ಶಿಕ್ಷಣ ಕೇವಲ ಅಂಕಗಳಿಕೆ, ಉದ್ಯೋಗ ಗಳಿಕೆಗೆ ಮಾತ್ರ ಸೀಮಿತವಾಗದೆ ನಾವು ಬೆಳೆದು ಬಂದ ಋಣ ತೀರಿಸಲು ಸೇವಾ ಮನೋಭಾವದಿಂದ ನಮ್ಮ ಕೈಲಾದ ಮಟ್ಟಿಗೆ ಬಡವರ, ದೀನದಲಿತರ, ಅಸಹಾಯಕರ ಏಳಿಗೆಗೆ ಶ್ರಮಿಸಬೇಕು. ಆಗ ಮಾತ್ರ ಸ್ವಸ್ಥ ಸಮಾಜದ ನಿರ್ಮಾಣ ಸಾಧ್ಯ ಎಂದು ಭಾರತಿ ಸಂಸ್ಥೆ ಅಧ್ಯಕ್ಷೆ ವಿನುತಾ ನಾಯಕ ಅಭಿಪ್ರಾಯಪಟ್ಟರು.

ತಾಲೂಕಿನ ಹಿರೇಗುತ್ತಿ ದೇವರಬೋಳೆ ಎಸ್‌ಎನ್‌ಎಸ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾರತಿ ಸಂಸ್ಥೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಉಚಿತ ಐಡಿ ಕಾರ್ಡ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

300x250 AD

ಅಧ್ಯಕ್ಷತೆ ವಹಿಸಿದ್ದ ಮುಖ್ಯಾಧ್ಯಾಪಕಿ ದೇವಾಂಗನೆ ನಾಯಕ, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರದ ಸೌಲಭ್ಯವನ್ನೇ ನೆಚ್ಚಿಕೊಂಡಿದ್ದರೆ ಸಾಧ್ಯವಿಲ್ಲ. ಭಾರತಿ ಸಂಸ್ಥೆಯಂತಹ ಸಂಘ- ಸಂಸ್ಥೆಗಳು ಕೈಜೋಡಿಸಿದರೆ ಪ್ರಗತಿ ಸಾಧ್ಯ. ಭಾರತಿ ಸಂಸ್ಥೆಯ ಈ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.
ಎಸ್‌ಡಿಎಂಸಿ ಅಧ್ಯಕ್ಷ ಮಾರುತಿ ಪಟಗಾರ, ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಪಾಲಕರು ಉಪಸ್ಥಿತರಿದ್ದರು. ಶಿಕ್ಷಕ ವಿನಾಯಕ್ ಸ್ವಾಗತಿಸಿ ಪರಿಚಯಿಸಿದರು. ಶಿಕ್ಷಕಿ ಜೀವನ ನಾಯಕ್ ನಿರೂಪಿಸಿದರು. ಜಯಲಕ್ಷ್ಮಿ ನಾಯಕ್ ವಂದಿಸಿದರು. ಶಿಕ್ಷಕಿ ಉಷಾ ನಾಯಕ್ ಕಾರ್ಯಕ್ರಮವನ್ನು ನಿರ್ವಹಿಸಿದರು.

Share This
300x250 AD
300x250 AD
300x250 AD
Back to top