ಮುಂಡಗೋಡ: ತಾಲೂಕಿನ 8 ಗ್ರಾ.ಪಂ.ಗಳಿಗೆ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ 2ನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ನಡೆಯಿತು.
ತಾಲೂಕಿನ ಸಾಲಗಾಂವ ಗ್ರಾ.ಪಂ.ಯ ನೂತನ ಅಧ್ಯಕ್ಷರಾಗಿ ಗಣಪತಿ ಬಾಳಮ್ಮನವರ್, ಉಪಾಧ್ಯಕ್ಷರಾಗಿ ರೇಖಾ ಹರಿಜನ, ಓಣಿಕೇರಿ(ಓರಲಗಿ) ಗ್ರಾ.ಪಂ. ದಲ್ಲಿ ಒಟ್ಟು 6 ಸದಸ್ಯರನ್ನು ಹೊಂದಿದ್ದು ಅದರಲ್ಲಿ ಓರ್ವ ಸದಸ್ಯ ಗೈರು ಆಗಿದ್ದು ಅದರಲ್ಲಿ ಐದು ಸದಸ್ಯರು ಹಾಜರು ಇದ್ದರು. ಎರಡು ಬಿಜೆಪಿ ಬೆಂಬಲಿತ ಸದಸ್ಯರು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದು. ಅದರಲ್ಲಿ ಒಬ್ಬರು ತನ್ನನ್ನೆ ಹಾಕಿಕೊಳ್ಳದೆ 5 ಸದಸ್ಯರೆ ಒಬ್ಬರನ್ನೆ ಮತ ಹಾಕಿ ಅಧ್ಯಕ್ಷ ಮಾಡಲಾಯಿತು. ಅಧ್ಯಕ್ಷರಾದ ಸುರೇಶ ಸುಭಾಂಜಿ, ಉಪಾಧ್ಯಕ್ಷರಾಗಿ ಕುಬೇರಪ್ಪ ಕೋಣನಕೇರಿ, ಗುಂಜಾವತಿ ಗ್ರಾ.ಪಂ.ಯ ನೂತನ ಅಧ್ಯಕ್ಷರಾಗಿ ಬಾಗುಬಾಯಿ ಪಟಕಾರೆ, ಉಪಾಧ್ಯಕ್ಷರಾಗಿ ಲಕ್ಷ್ಮಣ ಕೊಕರೆ, ಹುನಗುಂದ ಗ್ರಾ.ಪಂ.ಯ ನೂತನ ಅಧ್ಯಕ್ಷರಾಗಿ ಷರೀಫಸಿಂಗ್ ಶಿಗಟ್ಟಿ, ಉಪಾಧ್ಯಕ್ಷರಾಗಿ ಜ್ಯೋತಿ ಮೇತ್ರಿ ಆಯ್ಕೆಯಾದರು.
ಬಾಚಣಕಿ ಗ್ರಾ.ಪಂ.ಯ ನೂತನ ಅಧ್ಯಕ್ಷರಾಗಿ ಫಕ್ಕೀರವ್ವ ಪಾಟೀಲ, ಉಪಾಧ್ಯಕ್ಷರಾಗಿ ಇಸ್ಮಾಯಿಲ ಶೇಖಾಲಿ, ನಂದಿಕಟ್ಟಾ ಗ್ರಾ.ಪಂ.ಯ ನೂತನ ಅಧ್ಯಕ್ಷರಾಗಿ ಸಂತೋಷ ಭೋಸಲೆ, ಉಪಾಧ್ಯಕ್ಷರಾಗಿ ಮಾರಕ್ಕ ದುರಮುರಗಿ, ಚವಡಳ್ಳಿ ಗ್ರಾ.ಪಂ.ಯ ನೂತನ ಅಧ್ಯಕ್ಷರಾಗಿ ಬಶಿರಾಬಿ ನದಾಫ, ಉಪಾಧ್ಯಕ್ಷರಾಗಿ ಸುನೀಲ ರಾಠೋಡ, ಪಾಳಾ ಗ್ರಾ.ಪಂ.ಯ ನೂತನ ಅಧ್ಯಕ್ಷರಾಗಿ ಚಂದ್ರುಗೌಡ್ರು ಶಿವನಗೌಡ್ರು, ಉಪಾಧ್ಯಕ್ಷರಾಗಿ ಜಯಂತಿ ಅಕ್ಕಸಾಲಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಎಲ್.ಟಿ ಪಾಟೀಲ್, ನಾಗರಾಜ ಗುಬ್ಬಕ್ಕನವರ, ಗೌರಿಶ ಹರಿಜನ, ಮಾಂತೇಶ ತಳವಾರ, ಸಂತೋಷ ತಳವಾರ, ದೇವಿಂದ್ರಪ್ಪ ಮಡ್ಲಿ, ಸುರೇಶ ಕೇರಿಹೊಲದವರ, ರಾಮಣ್ಣ ಗುಲ್ಯಾನವರ, ಬಸವರಾಜ ಮುಲಿಮನಿ, ಮಂಜು ಕೊಣಕೇರಿ ಹಾಗೂ ಬಾಬಣ್ಣ ಓಣಿಕೇರಿ ಇದ್ದರು.