ಶಿರಸಿ: ತಾಲೂಕಿನ ನೆಗ್ಗು ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಬುಧವಾರ ನಡೆಯಿತು. ಲಾಝರ್ ಸಿಲ್ವೆಸ್ಟರ್ ರೆಬೆಲ್ಲೋ ಅಧ್ಯಕ್ಷರಾಗಿ ಹಾಗೂ ಸಾವಿತ್ರಿ ಮಡಿವಾಳ ಉಪಾಧ್ಯಕ್ಷರಾಗಿ ಆಯ್ಕೆಗೊಂಡರು.
ನೂತನ ಅಧ್ಯಕ್ಷ ಲಾಝರ್ ಮಾತನಾಡಿ, ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.ಈ ವೇಳೆ ಸದಸ್ಯರಾದ ಎಚ್.ವಿ. ಗಣೇಶ, ಚಂದ್ರಕಾಂತ ಹೆಗಡೆ, ಸುರೇಶ ಹೆಗಡೆ, ಮಂಜುಳಾ ಪಾವಸ್ಕರ, ನಾಗವೇಣಿ ಆಚಾರಿ, ಜ್ಯೋತಿ ಹೆಗಡೆ, ನೇತ್ರಾವತಿ ಹೆಗಡೆ, ಸರಸ್ವತಿ ಹೆಗಡೆ, ಕೃಷ್ಣ ಮಡಿವಾಳ, ಮಂಜುನಾಥ ಗೌಡ, ಪಿಡಿಒ ಮಮತಾ ಗುಡ್ಡದಮನೆ ಇತರರಿದ್ದರು. ಸತೀಶ ಹೆಗಡೆ ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.