Slide
Slide
Slide
previous arrow
next arrow

ಯಕ್ಷಗುರು ಕೆ.ಪಿ.ಹೆಗಡೆಗೆ ‘ಅನಂತಶ್ರೀ’ ಪ್ರಶಸ್ತಿ ಪ್ರಕಟ

300x250 AD

ಸಿದ್ದಾಪುರ: ಪ್ರಸಿದ್ಧ ಯಕ್ಷಗಾನ ಗುರು, ಹೆಸರಾಂತ ಕಲಾವಿದ ತಾಲೂಕಿನ ಗೋಳಗೋಡಿನ ಕೆ.ಪಿ.ಹೆಗಡೆ ಅವರಿಗೆ ಯಕ್ಷಗಾನದ ‌ಪ್ರಸಿದ್ಧ ಕಲಾವಿದರಾಗಿದ್ದ ಕೊಳಗಿ ಅನಂತ ಹೆಗಡೆ ಅವರ ಹೆಸರಿನಲ್ಲಿ‌ ನೀಡಲಾಗುವ ‘ಅನಂತಶ್ರೀ’ ಪ್ರಶಸ್ತಿ ಪ್ರಕಟಿಸಲಾಗಿದೆ.

ಈ ವಿಷಯ ತಿಳಿಸಿದ ಶ್ರೀ ಅನಂತ‌ ಯಕ್ಷ ಕಲಾ ಪ್ರತಿಷ್ಠಾನದ ಅಧ್ಯಕ್ಷ ವಿ.ಎಂ.ಭಟ್ಟ ಸಿದ್ದಾಪುರ, ಕಳೆದ 12 ವರ್ಷಗಳಿಂದ ಕೊಳಗಿ ಅನಂತ ಹೆಗಡೆ ಅವರ ನೆನಪಿನಲ್ಲಿ ಪ್ರತಿಷ್ಠಾನ ಆರಂಭಿಸಲಾಗಿದ್ದು, ಕಳೆದ ಏಳು ವರ್ಷದಿಂದ ಹಿರಿಯ, ಸಾಧಕ ಕಲಾವಿದರನ್ನು ಆಯ್ಕೆ‌‌ ಮಾಡಿ ಗೌರವಿಸಲಾಗುತ್ತಿದೆ. ಈ ಬಾರಿ ಸೆಪ್ಟೆಂಬರ್ ಎರಡನೇ ವಾರ‌ ಪ್ರಶಸ್ತಿ ‌ಪ್ರದಾನ‌ ಸಮಾರಂಭ ನಡೆಯಲಿದ್ದು, ಅನಂತ ಹೆಗಡೆ ಒಡನಾಡಿಗಳೂ ಆಗಿದ್ದ ಕೆ‌.ಪಿ.ಹೆಗಡೆ ಅವರಿಗೆ ಪ್ರಶಸ್ತಿ‌ ಪ್ರದಾನ ಮಾಡುವದು ನಮ್ಮ ಹೆಮ್ಮೆ ಎಂದು ತಿಳಿಸಿದ್ದಾರೆ.

ಕಳೆದ ನಾಲ್ಕು ದಶಕಗಳಿಗೂ ಅಧಿಕ ಕಾಲದಿಂದ ಯಕ್ಷಗಾನದ‌ ಬಡಗಿನ ಭಾಗವತರಾಗಿ, ಹಂಗಾರಕಟ್ಟೆ ಯಕ್ಷಗಾನ‌ ಕೇಂದ್ರದ‌ ಗುರುಗಳಾಗಿ ಕಾರ್ಯ ಮಾಡುತ್ತಿದ್ದ ಕೃಷ್ಣ ಪರಮೇಶ್ವರ ಹೆಗಡೆಯವರನ್ನು ಗೌರವಿಸಲು ತೀರ್ಮಾನಿಸಲಾಗಿದೆ‌. ಕೆ.ಪಿ.ಹೆಗಡೆ ಎಸ್.ಎಸ್.ಎಲ್.ಸಿ. ಬಳಿಕ ಎಂ. ನಾರ್ಣಪ್ಪ ಉಪ್ಪೂರು, ಗಣಪತಿ ಹೆಗಡೆ, ಮಂಜುನಾಥ ಭಾಗವತ ಹೊಸ್ತೋಟರ ಶಿಷ್ಯರಾಗಿ‌ ತಮ್ಮ ಕಲಾ ಬದುಕನ್ನು ಆಯ್ಕೆ‌ ಮಾಡಿಕೊಂಡವರು. ಭಾಗವತರಾಗಿ ಕೆ.ಪಿ.ಹೆಗಡೆ ಅವರು ಯಕ್ಷಗಾನ‌ ಕ್ಷೇತ್ರಕ್ಕೆ 1979ರಲ್ಲಿ ಪಾದಾರ್ಪಣೆ ಮಾಡಿದವರು. ಕೋಟ, ಪೆರ್ಡೂರು, ಸಾಲಿಗ್ರಾಮ, ಮೂಲ್ಕಿ, ಶಿರಸಿ ಸೇರಿದಂತೆ ಅನೇಕ‌ ಮೇಳದಲ್ಲಿ ಪ್ರಧಾನ ಭಾಗವತರಾಗಿ ಅನುಪಮ‌ ಸೇವೆ ಸಲ್ಲಿಸಿದ್ದಾರೆ.

300x250 AD

ಯಕ್ಷಗಾನ‌ ಕಲಿಕಾ‌ ಕೇಂದ್ರದ ಗುರುಗಳಾಗಿ ಕೆಲಸ ಮಾಡಿದ ಕೆ.ಪಿ ಹೆಗಡೆ ಅವರಲ್ಲಿ ಗುರು ನಾರ್ಣಪ್ಪ ಉಪ್ಪೂರರ ಛಾಪು, ಅಪೂರ್ವ ರಂಗತಂತ್ರ, ಏರು ಶೃತಿಯಲ್ಲೂ ಹಾಡ ಬಲ್ಲ‌ ಕಂಠ, ರಾಗ, ತಾಳ, ಲಯದಲ್ಲಿ ಅಪೂರ್ವ ಹಿಡಿತವಿದೆ ಎಂಬುದು ವಿಶೇಷವಾಗಿದೆ.
ಅಂದಿನಿಂದ ಈವರೆಗೆ ಕೆ.ಪಿ.ಹೆಗಡೆ ಅವರ ಗರಡಿಯಲ್ಲಿ ಸಾವಿರಕ್ಕೂ ಅಧಿಕ ಶಿಷ್ಯರು ಸಿದ್ಧರಾಗಿ ಹೆಸರುಗಳಿಸಿದ್ದಾರೆ. ಅವರ ಶಿಷ್ಯರಲ್ಲಿ ನಮ್ಮ‌ ಪ್ರತಿಷ್ಠಾನದ ಕಾರ್ಯದರ್ಶಿ, ಪ್ರಸಿದ್ಧ ಭಾಗವತ ಕೇಶವ ಹೆಗಡೆ ಕೊಳಗಿ ಅವರೂ ಒಬ್ಬರು ಎಂಬುದು ನಮ್ಮ ಹೆಮ್ಮೆ ಎಂದು‌ ಪ್ರಕಟಣೆಯಲ್ಲಿ ಅಧ್ಯಕ್ಷ ವಿ.ಎಂ. ಭಟ್ಟ ಹರ್ಷ ವ್ಯಕ್ತಪಡಿಸಿದ್ದಾರೆ.

Share This
300x250 AD
300x250 AD
300x250 AD
Back to top