ಸಿದ್ದಾಪುರ: ತಾಲ್ಲೂಕಿನ ಭುವನಗಿರಿಯ ಭುವನೇಶ್ವರಿದೇವಾಲಯದ ಪುಷ್ಕರಣಿಯು ಪುರಾತನ ಕಾಲದ ಕೆರೆಯಾಗಿದ್ದು, ಮಳೆಗಾಲದಲ್ಲಿ ಚರಂಡಿಯ ನೀರು ಕೆರೆ ಸೇರಿ ಕಲುಷಿತಗೊಳ್ಳುತ್ತಿದ್ದರೂ ಸಂಬ0ಧಪಟ್ಟ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀಕಾಂತ ಹೆಗಡೆ ಗುಂಜಗೋಡು ಹೇಳಿದರು.
ಅವರು ಬುಧವಾರ ತಹಶೀಲ್ದಾರರಿಗೆ ಮತ್ತು ಲೋಕೋಪಯೋಗಿಅಧಿಕಾರಿಗೆ ಈ ಕುರಿತು ಮನವಿ ನೀಡಿ ಮಾಹಿತಿ ನೀಡಿದರು. ಭುವನಗಿರಿಕೆರೆಯು ಬಿಳಗಿ ಅರಸರಕಾಲದಲ್ಲಿ ನಿರ್ಮಿಸಿದ್ದು ಪ್ರತಿದಿನ ಭುವನೇಶ್ವರಿದೇವಿಯ ಅಭಿಷೇಕಕ್ಕೆ ಈ ಕೆರೆಯ ನೀರನ್ನೇ ಬಳಸಲಾಗುತ್ತದೆ. ಮಳೆಗಾಲದಲ್ಲಿ ರಸ್ತೆಯ ಚರಂಡಿ ನೀರು ಸರಾಗವಾಗಿ ಹರಿದು ಹೋಗದ ಕಾರಣ ಚರಂಡಿ ನೀರು ಕೆರೆಯನ್ನು ಸೇರುತ್ತಿದ್ದು ನೀರು ಮಲಿನಗೊಳ್ಳುತ್ತಿದೆ.ಇದನ್ನು ಸರಿಪಡೀಸುವಕುರಿತು ಕಳೆದ 3-4 ವರ್ಷಗಳಿಂದಲೂ ಸಂಬoಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದರೂಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಭಕ್ತಾದಿಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಉಂಟಾಗುತ್ತಿದ್ದು ಸಂಬoಧಪಟ್ಟ ಅಧಿಕಾರಿಗಳು ಕೂಡಲೆ ಗಮನ ಹರಿಸಿ ಕೆರೆಯ ಸುಸ್ಥಿತಿ ಕಾಪಾಡಲು ಸಹಕರಿಸುವಂತೆ ಮನವಿ ನೀಡಲಾಗಿದೆಎಂದರು.