• Slide
  Slide
  Slide
  previous arrow
  next arrow
 • ಭಾರತಕ್ಕೆ ಜನಸಂಖ್ಯೆ ಹೊರೆ ಆಗಿಲ್ಲ: ಶಿವರಾಮ ಹೆಬ್ಬಾರ್

  300x250 AD

  ಯಲ್ಲಾಪುರ: ಅನೇಕ ರಾಷ್ಟ್ರಗಳು ಜನಸಂಖ್ಯೆ ದೃಷ್ಟಿಯಿಂದ ಕಡಿಮೆ ಜನರನ್ನು ಹೊಂದಿದ್ದರೂ ಆರ್ಥಿಕವಾಗಿ ಮೇಲೆ ಬರಲಿಲ್ಲ. ಆದರೆ 142 ಕೋಟಿ ಜನಸಂಖ್ಯೆ ಹೊಂದಿದ ಭಾರತ ಆರ್ಥಿಕವಾಗಿಯೂ ಬಲಾಡ್ಯವಾಗುತ್ತಿದೆ. ವಿಶ್ವದ ಮಾರುಕಟ್ಟೆಯಲ್ಲಿ ಭಾರತ ಮಹತ್ವದ ಪಾತ್ರವಹಿಸುತ್ತಿದೆ. ಅಲ್ಲದೇ ಹಲವಾರು ದೇಶಗಳಲ್ಲಿ ಭಾರತದ ಬುದ್ಧಿವಂತ ಯುವಕರು ಅಲ್ಲಿಯ ದೇಶದ ಪ್ರಗತಿಗೆ ಕಾರಣರಾಗುತ್ತಿದ್ದಾರೆ. ಭಾರತಕ್ಕೆ ಜನಸಂಖ್ಯೆ ಹೊರೆ ಆಗಿಲ್ಲ, ಆದರೂ ಭವಿಷ್ಯತ್ತಿನ ದೃಷ್ಟಿಯಿಂದ ನಿಯಂತ್ರಣ ಅನಿವಾರ್ಯ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

  ಅವರು ಬುಧವಾರ ಪಟ್ಟಣದ ಅಡಿಕೆ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಉತ್ತರ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಯಲ್ಲಾಪುರ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಶಿರಸಿಯ ಗ್ರೀನ್ ಕೇರ್ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಜನಸಂಖ್ಯಾ ದಿನಾಚರಣೆ ಹಾಗೂ ಅಭಿಯಾನ 2023 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.

  ಶೇ. 65 ರಷ್ಟು ಜನ ದುಡಿಯುತ್ತಿದ್ದಾರೆ. ದೇಶದ ಯುವ ಜನಾಂಗಕ್ಕೆ ಶಿಕ್ಷಣ, ತಿಳುವಳಿಕೆ ನೀಡುವ ಮೂಲಕ ಜನಸಂಖ್ಯೆಯ ನಿಯಂತ್ರಣ ಮಾಡಬಹುದು. ಜನಸಂಖ್ಯೆಯ ಹೆಚ್ಚಳದಿಂದ ಕೃಷಿ, ಉದ್ಯೋಗ, ಶೈಕ್ಷಣಿಕ ಎಲ್ಲಾ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿ ಸ್ವಾವಲಂಭಿಯಾಗಿದೆ ಎಂದರು.

  ಕ್ಷೇತ್ರ ಶಿಕ್ಷಣಾಧಿಕಾರಿ ಎನ್ ಆರ್ ಹೆಗಡೆ ಮಾತನಾಡಿ, ಜನಸಂಖ್ಯೆ ನಿಯಂತ್ರಣಕ್ಕೆ ಶಿಕ್ಷಣವೊಂದೇ ಪರಿಹಾರ. ಭಾರತ ಜಗತ್ತಿನ ಶೇ. 42 ರಷ್ಟು ಅಕ್ಕಿಯನ್ನು ರಪ್ತುಮಾಡುತ್ತದೆ. ಇಂತಹ ಸಂಪದ್ಬರಿತ ರಾಷ್ಟ್ರವಾದರೂ ಶಿಕ್ಷಣ ಮತ್ತು ಉದ್ಯೋಗ ನೀಡದಿದ್ದರೆ ಮುಂದಿನ ದಿನಗಳಲ್ಲಿ ಕಷ್ಟ ಎದುರಿಸಬೇಕಾಗಬಹುದು. ಯಾವುದೂ ಅತಿಯಾಗಬಾರದು. ಮಿತಿಯಲ್ಲಿರಬೇಕು. ಆಗ ನೆಮ್ಮದಿ ಸಾಧ್ಯ ಎಂದರು.

  ತಾಲೂಕಾ ಆಸ್ಪತ್ರೆಯ ತಜ್ಞ ವೈದ್ಯೆ ಡಾ. ಸೌಮ್ಯಾ ಕೆ ವಿ ಉಪನ್ಯಾಸ ನೀಡಿ, ಯಾವುದೇ ದೇಶಕ್ಕೆ ಮಾನವ ಸಂಪತ್ತೆ ಪ್ರಧಾನವಾದದ್ದು. ಆದರೆ ಇಂದು ವಿಶ್ವದಲ್ಲಿ 500 ಕೋಟಿ ಜನಸಂಖ್ಯೆ ದಾಟಿದೆ. ಆದ್ದರಿಂದ ಅದರ ನಿಯಂತ್ರಣ ಮಾಡುವಂತೆ ವಿಶ್ವಸಂಸ್ಥೆ ಆಗ್ರಹಿಸಿದೆ. ಶಿಕ್ಷಣ, ಕೌಶಲ್ಯ, ಆರೋಗ್ಯ, ಪ್ರಧಾನವಾಗಿ ಯುವಜನಾಂಗಕ್ಕೆ ಅರಿವು ಮೂಡಿಸಿದರೆ ಜನಸಂಖ್ಯೆಯನ್ನು ನಿಯಂತ್ರಿಸಬಹುದು. ಇಂದು ಕೃತಕ ಮಾನವ ರ‍್ಮಿತ ವ್ಯಕ್ತಿಗಳನ್ನು ಉದ್ಯೋಗದಲ್ಲಿ ತೊಡಗಿಸಿಕೊಳ್ಳಲಾಗುತ್ತಿದೆ. ಇದರಿಂದಲೂ ಮುಂದಿನ ದಿನ ಜನಸಂಖ್ಯೆ ಹೆಚ್ಚಳಕ್ಕೆ ಮತ್ತು ಉದ್ಯೋಗಕ್ಕೆ ತೊಂದರೆ ಉಂಟಾದಿತು. ನಮ್ಮ ಇಲಾಖೆ ಈ ನಿಟ್ಟಿನಲ್ಲಿ ಸದಾ ಜಾಗೃತಿ ಮೂಡಿಸುತ್ತಿದೆ ಎಂದರು.

  300x250 AD

  ಶಿರಸಿಯ ಗ್ರೀನ್ ಕೇರ್ ಸಂಸ್ಥೆಯ ಕಾರ್ಯದರ್ಶಿ ಜಿತೇಂದ್ರಕುಮಾರ ತೋನ್ಸೆ ಮಾತನಾಡಿ, ಜನಸಂಖ್ಯೆ ನಿಯಂತ್ರಣಕ್ಕೆ ಜಾಗೃತಿಯೊಂದೇ ಪರಿಹಾರ. ಯಲ್ಲಾಪುರದ ಹಳ್ಳಿಯೊಂದನ್ನು ದತ್ತು ಪಡೆದು ಅಲ್ಲಿನ ಜನರಿಗೆ ಅನಾರೋಗ್ಯದ ಸಮಸ್ಯೆಗೆ ಪರಿಹಾರ ನೀಡುವ ಉದ್ದೇಶ ಹೊಂದಿದ್ದೇವೆ ಎಂದರು.

  ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ರಮೇಶ, ತಾಲೂಕಾ ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ್, ತಾ. ಪಂ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ ಕಮ್ಮಾರ ಉಪಸ್ಥಿತರಿದ್ದರು. ಆಶಾ ಕಾರ್ಯಕಾರ್ತೆ ಶಿಲ್ಪಾ ಹೆಗಡೆ ಪ್ರಾರ್ಥಿಸಿದರು. ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಟಿ.ಭಟ್ಟ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಮಹೇಶ ತಾಳಿಕೋಟೆ ನಿರ್ವಹಿಸಿದರು.

  Share This
  300x250 AD
  300x250 AD
  300x250 AD
  Leaderboard Ad
  Back to top