Slide
Slide
Slide
previous arrow
next arrow

ನಾರಾಯಣಗುರು ಈಡಿಗ ನಿಗಮಕ್ಕೆ ಹಣ ಮೀಸಲಿಡಲು ಮನವಿ

300x250 AD

ಗೋಕರ್ಣ: ರಾಷ್ಟ್ರೀಯ ಈಡಿಗ ಮಹಾಮಂಡಳಿ ನೇತೃತ್ವದಲ್ಲಿ ಪ್ರಣವಾನಂದ ಸ್ವಾಮೀಜಿಯವರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಹಿಂದುಳಿದ ವರ್ಗಗಳ ಸಚಿವ ಶಿವರಾಜ ತಂಗಡಿ ಅವರನ್ನು ಭೇಟಿ ಮಾಡಿ ನಾರಾಯಣಗುರು ಈಡಿಗ ನಿಗಮಕ್ಕೆ ಕೂಡಲೇ ಹಣ ಮೀಸಲಿಡಬೇಕು ಎಂದು ಮನವಿ ಸಲ್ಲಿಸಿ ಒತ್ತಾಯಿಸಿದರು.

ಚುನಾವಣೆಯ ಪೂರ್ವದಲ್ಲಿ ತಮ್ಮ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಾರಾಯಣಗುರು ಈಡಿಗ ನಿಗಮಕ್ಕೆ ಪ್ರತಿವರ್ಷ 250 ಕೋಟಿ ನೀಡುವುದಾಗಿ ತಿಳಿಸಿದ್ದೇವೆ. ಆದರೆ ಪ್ರಥಮ ಬಜೆಟ್‌ನಲ್ಲಿ ಹಣ ಬಿಡುಗಡೆ ಮಾಡದಿರುವುದು ನಿಜಕ್ಕೂ ಬೇಸರ ತರಿಸಿದೆ. ಹಾಗೇ ನಾರಾಯಣಗುರು ಈಡಿಗ ನಿಗಮಕ್ಕೆ ಅಧ್ಯಕ್ಷ ಹಾಗೂ ಪದಾಧಿಕಾರಿಗಳನ್ನು ನೇಮಿಸಬೇಕು ಎಂದು ಶ್ರೀಗಳು ಆಗ್ರಹಿಸಿದರು.
ಇದಕ್ಕೆ ಸ್ಪಂದಿಸಿದ ಉಪಮುಖ್ಯಮಂತ್ರಿ ಹಾಗೂ ಹಿಂದುಳಿದ ವರ್ಗದ ಸಚಿವರು ಮಾತನಾಡಿ, ಕೂಡಲೇ ಈ ವಿಷಯದ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಮತ್ತು ಸಮಾಜಕ್ಕೆ ಯಾವ ರೀತಿಯಲ್ಲಿಯೂ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಕಾರ್ಯದರ್ಶಿ ಡಾ.ಮಂಚೇಗೌಡ, ರಾಜ್ಯಾಧ್ಯಕ್ಷ ಜಿ.ಎನ್.ಸಂತೋಷ, ನಾಗರಾಜ ನಾಯಕ, ಜನಾರ್ಧನ, ಉದಯ ಗೌಡ, ನಾಗಯ್ಯ ಗುತ್ತೇದಾರ, ಗುರುರಾಜ ಎನ್., ಸುನೀಲ ಇತರರು ಉಪಸ್ಥಿತರಿದ್ದು ಸಮಸ್ಯೆಗಳನ್ನು ವಿವರಿಸಿದರು.

300x250 AD
Share This
300x250 AD
300x250 AD
300x250 AD
Back to top