Slide
Slide
Slide
previous arrow
next arrow

ಮಣಿಪುರದ ಘಟನೆ: ದುಷ್ಟರ ಬಂಧಿಸಿ ಕಠಿಣ ಶಿಕ್ಷೆ ವಿಧಿಸಲು ಸ್ಯಾಮಸನ್ ಒತ್ತಾಯ

300x250 AD

ದಾಂಡೇಲಿ: ಮಣಿಪುರದಲ್ಲಿ ಇತ್ತೀಚೆಗೆ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಬೀದಿಗಳಲ್ಲಿ ಮೆರವಣಿಗೆ ಮಾಡಿದ ಅತ್ಯಂತ ಆಘಾತಕಾರಿ ಹಾಗೂ ಭಯಾನಕ ಘಟನೆಯನ್ನು ಡಿವೈಎಫ್‌ಐ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಸಮಿತಿಯ ಸದಸ್ಯರಾದ ಡಿ.ಸ್ಯಾಮಸನ್ ಅವರು ತೀವ್ರವಾಗಿ ಖಂಡಿಸಿದ್ದಾರೆ.

ಈ ಘಟನೆಯನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊ0ಡಿರುವುದು ಅತ್ಯಂತ ಹೇಯ ಕೃತ್ಯವಾಗಿದೆ. ಸಂತ್ರಸ್ತರ ಗುರುತನ್ನು ಬಹಿರಂಗಪಡಿಸುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲು ದುಷ್ಕರ್ಮಿಗಳ ನಿರ್ಧಾರವು, ಈ ಮುಗ್ಧ ಮಹಿಳೆಯರು ಮತ್ತಷ್ಟು ಭಯಾನಕತೆಯನ್ನು ಅನುಭವಿಸಲು ಹಾಗೂ ಅವರು ಮಾನಸಿಕವಾಗಿ ಕುಗ್ಗುವಂತೆ ಮಾಡುವುದಾಗಿದೆ. ಮಣಿಪುರದಲ್ಲಿ ಎರಡು ತಿಂಗಳ ಕಾಲ ನಡೆದ ಅಶಾಂತಿಯ ಬಗ್ಗೆ ಡಿವೈಎಫ್‌ಐ ತೀವ್ರ ಕಳವಳವನ್ನು ವ್ಯಕ್ತಪಡಿಸುತ್ತದೆ ಎಂದಿದ್ದಾರೆ.
ಯಾವುದೇ ವಿಷಯದ ಬಗ್ಗೆ ಮತ್ತು ಎಲ್ಲದರ ಬಗ್ಗೆಯೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಣಿಪುರದ ಅಶಾಂತಿಯ ಬಗ್ಗೆ ಇದೂವರೆಗೂ ಮಾತನಾಡಿರಲಿಲ್ಲ ಎಂಬುದು ಗಮನಾರ್ಹ ಸಂಗತಿ. ಈ ಅಘತಾಕಾರಿ ವಿಡಿಯೋ ವೈರಲ್ ಆದ ನಂತರ ಆರೋಪಿಗಳನ್ನು ಶಿಕ್ಷಿಸುತ್ತೇವೆ ಎಂಬ ಹೇಳಿಕೆ ನೀಡಿದ್ದಾರೆ. ಯಾವುದೇ ಜನಾಂಗ ಅಥವಾ ಧರ್ಮವನ್ನು ಲೆಕ್ಕಿಸದೆ ಎಲ್ಲಾ ನಾಗರಿಕರ ಹಕ್ಕುಗಳನ್ನು ರಕ್ಷಿಸುವ ಸಾಂವಿಧಾನಿಕ ಜವಾಬ್ದಾರಿಯನ್ನು ಹೊಂದಿರುವ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮಂತ್ರಿಗಳು ಮಣಿಪುರದ ಜನರ ಕುಂದುಕೊರತೆಗಳನ್ನು ಪರಿಹರಿಸಲು ಮತ್ತು ಅಲ್ಲಿನ ಜನತೆ ಶಾಂತಿ ಮತ್ತು ಭದ್ರತೆಯಿಂದ ನೆಮ್ಮದಿಯಿಂದ ಬದುಕಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದನ್ನು ಕೂಡಲೇ ಖಾತ್ರಿಪಡಿಸಬೇಕು ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ರೀತಿಯ ಕ್ರಮವನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top