ಯಲ್ಲಾಪುರ: ಜುಲೈ 17ರಂದು ಬೆಳಿಗ್ಗೆ ಯಾರೋ ಅಪರಿಚಿತ ವ್ಯಕ್ತಿಗೆ ಎಟಿಎಮ್‌ನಿಂದ ಹಣವನ್ನು ತೆಗೆಯಲು ಸಹಾಯ ಮಾಡುವಂತೆ ಮಾಡಿ ಬೇರೊಂದು ಕಾರ್ಡ್ ನೀಡಿ ಮೂಲ ಎಟಿಎಮ್ ಕಾರ್ಡ್ನ್ನು ಲಪಟಾಯಿಸಿ, ಶಿರಸಿಯ ಎಟಿಎಮ್‌ನಿಂದ 25 ಸಾವಿರ ರೂಪಾಯಿ ಡ್ರಾ ಮಾಡಿ ಮೋಸ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರ ಪುಣೆ ಜಿಲ್ಲೆ ಇಂದಾಪುರ ತಾಲೂಕಿನ ಯಾದವವಾಡಿ ನಿವಾಸಿ, ಕೂಲಿ ವೃತ್ತಿ ಮಾಡುವ ಅಮೂಲ ಶೆಂಡೆ (33) ಬಂಧಿತ. ಈತ ರಾಜ್ಯ ಹಾಗೂ ಅಂತರ್‌ರಾಜ್ಯದ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ದೊರಕಿದೆ. ಬೆಳಗಾವಿ ಎಪಿಎಮ್‌ಸಿ ಹಾಗೂ ಮಹಾರಾಷ್ಟç ರಾಜ್ಯದ ಚಂದಗಡ, ಕಾಗಲ್, ಮುರಗೋಡ, ಮಾಳಶಿರಸ ಮತ್ತು ಮಧ್ಯಪ್ರದೇಶ ರಾಜ್ಯದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇದೇ ರೀತಿಯ ವಂಚನೆ ಪ್ರಕರಣ ದಾಖಲಾಗಿರುವ ಬಗ್ಗೆ ತಿಳಿದು ಬಂದಿದೆ.
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ, ಅಂಕೋಲಾ ಕಡೆಗಳಲ್ಲಿ ಇದೇ ರೀತಿಯಲ್ಲಿ ಎಟಿಎಮ್ ಗ್ರಾಹಕರಿಗೆ ಮೋಸ ಮಾಡಿದ್ದನ್ನು ಎನ್ನಲಾಗಿದೆ. ಆರೋಪಿತನಿಂದ 12 ಸಾವಿರ ರೂಪಾಯಿ ನಗದು ಹಣ ಹಾಗೂ ಕೃತ್ಯಕ್ಕೆ ಬಳಸಿದ 2 ಎ.ಟಿ.ಎಮ್ ಕಾರ್ಡ, ಮತ್ತು 75 ಸಾವಿರ ರೂಪಾಯಿ ಮೌಲ್ಯದ ಬಜಾಜ್ ಪಲ್ಸರ್ ಮೋಟಾರ ಬೈಕನ್ನು ಜಪ್ತುಪಡಿಸಿಕೊಳ್ಳಲಾಗಿದೆ. ಪಿಐ ರಂಗನಾಥ ನೀಲಮ್ಮನವರ ನೇತೃತ್ವದಲ್ಲಿ ಪಿಎಸ್‌ಐಗಳಾದ ರವಿ ಗುಡ್ಡಿ, ನಿರಂಜನ ಹೆಗಡೆ, ಶ್ಯಾಮ ಪಾವಸ್ಕರ, ಎಎಸ್‌ಐ ಮಂಜುನಾಥ ಮನ್ನಂಗಿ ಹಾಗೂ ಸಿಬ್ಬಂದಿಯವರಾದ, ಬಸವರಾಜ ಹಗರಿ, ಮಹ್ಮದ ಶಫೀ, ಗಿರೀಶ ಲಮಾಣಿ, ಪ್ರವೀಣ ಪೂಜಾರ ಇವರು ಸಹ ಆರೋಪಿತನನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.