ಯಲ್ಲಾಪುರ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರೆಕಾಲಿಕ ಉಪನ್ಯಾಸಕರೊಬ್ಬರು ಮಕ್ಕಳೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದು, ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎನ್ನುವ ದೂರು ಕೇಳಿಬರುತ್ತಿದೆ.
ಕಾಲೇಜಿಗೆ ಆಗಮಿಸಿರುವ ಅರೆಕಾಲಿಕ ಉಪನ್ಯಾಸಕನ್ನೊಬ್ಬನಿಗೆ ಇಂಗ್ಲಿಷ್ನಲ್ಲಿ ಲೆಚ್ಚರ್ ಕೊಡಲು ಬಾರದಿದ್ದರೂ ಮಕ್ಕಳ ಮಧ್ಯೆ ಒಡಕು ತಂದಿಟ್ಟು, ತಾರತಮ್ಯ ನೀತಿ ಅನುಸರಿಸುತ್ತಿದ್ದಾನೆ ಎನ್ನುವ ಆಪಾದನೆ ಕೇಳಿಬಂದಿದೆ. ಇದರಿಂದ ಮನನೊಂದ ವಿದ್ಯಾರ್ಥಿಯೊಬ್ಬ ಕಾಲೇಜಿಗೆ ಹೋಗಲು ಹಿಂದೇಟು ಹಾಕುತ್ತಿದ್ದು, ಪಾಲಕರಿಗೆ ಅರೆಕಾಲಿಕ ಉಪನ್ಯಾಸಕನ ತಾರತಮ್ಯ ನೀತಿ ಹಾಗೂ ಟಾರ್ಗೆಟ್ ಮಾಡುವ ಗುಣ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಅವಮಾನಿಸುವುದು, ಪ್ರತ್ಯೇಕಿಸುವುದು ಹಾಗೂ ವಿದ್ಯಾರ್ಥಿಯನ್ನೇ ಗುರಿ ಮಾಡುವುದರಿಂದ ಮಕ್ಕಳ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರಲಿದ್ದು, ಮುಂದು ತಮ್ಮ ಮಕ್ಕಳು ತಪ್ಪು ನಿರ್ಧಾರ ಕೈಗೊಳ್ಳುವ ಸಾಧ್ಯತೆಯ ಅಳುಕಿನಿಂದ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು, ಜಿಲ್ಲಾಧಿಕಾರಿಗಳಿಗೆ, ಯೂನಿವರ್ಸಿಟಿಯ ಚಾನ್ಸಲರ್, ಉನ್ನತ ಶಿಕ್ಷಣ ಸಚಿವರಿಗೆ ಮುಖ್ಯಮಂತ್ರಿಗಳಿಗೆ, ಮಾನವ ಹಕ್ಕು ಆಯೋಗಕ್ಕೆ ದೂರು ನೀಡಲು ನಿರ್ಧರಿಸಿದ್ದಾರೆ. ಈಗಾಗಲೆ ಸಿಡಿಸಿ ಕಮಿಟಿ ಅಧ್ಯಕ್ಷರಾದ ಶಾಸಕ ಶಿವರಾಮ ಹೆಬ್ಬಾರ್ ಗಮನಕ್ಕೂ ಕೂಡ ಪಾಲಕರು, ಕಾಲೇಜಿನ ಸಮಸ್ಯೆ ಬಗ್ಗೆ ಅರುವಿದ್ದಾರೆ.
ಯಲ್ಲಾಪುರದ ಮಣ್ಣಿನ ನೆಲಕ್ಕೆ ಒಗ್ಗದ ಕೆಲವೊಂದು ಶಬ್ದಗಳನ್ನು ವಿದ್ಯಾರ್ಥಿಗಳ ಮೇಲೆ ಪ್ರಯೋಗ ಮಾಡುತ್ತಿರುವುದು ಹಾಗೂ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡುವುದು ಕೂಡ ನಡೆಯುತ್ತಿರುವುದು ವಿಪರ್ಯಾಸವಾಗಿದೆ. ಅಷ್ಟಕ್ಕೂ ತಮ್ಮ ಜನಪ್ರತಿನಿಧಿಗಳನ್ನು ನಿರ್ಧರಿಸುವ ಹಕ್ಕು ಹೊಂದಿರುವ 18 ವರ್ಷ ದಾಟಿರುವ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡುವದಕ್ಕೆ ಉಪನ್ಯಾಸಕರಿಗೆ ಅಧಿಕಾರ ನೀಡಿದವರು ಯಾರು ಎನ್ನುವುದು ಯಕ್ಷಪ್ರಶ್ನೆಯಾಗಿದೆ.
ಮತ್ತೆ ಮತ್ತೆ ಅವಾಚ್ಯ ಶಬ್ದಗಳ ಪ್ರಯೋಗ ನಡೆದರೆ ಯಲ್ಲಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾಗುವ ಎಲ್ಲ ಲಕ್ಷಣಗಳು ಕಂಡು ಬರುತ್ತಿದ್ದು, ಕಾಲೇಜಿಗೆ ಸಂಬoಧಿಸಿದ ಸಮಿತಿಯವರು ಇಲ್ಲಿಗೆ ಇದನ್ನು ಬಗೆಹರಿಸಿ ಅಧಿಕಾರದ ದುರುಪಯೋಗ ಪಡಿಸಿಕೊಳ್ಳುತ್ತಿರುವ ಮತ್ತು ಈ ನೆಲದ ಭಾಷೆಗೆ ಒಗ್ಗದ ಕೆಟ್ಟ ಶಬ್ದಗಳನ್ನು ಪ್ರಯೋಗಿಸುತ್ತಿರುವ ಉಪನ್ಯಾಸಕರನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಬೇಕಾಗಿದೆ.