ಹೊನ್ನಾವರ: ಪಟ್ಟಣದ ದುರ್ಗಾಕೇರಿ ರಸ್ತೆ ಹೊಂಡಗಳಿoದ ಕೂಡಿದ್ದು, ರಸ್ತೆ ದುಃಸ್ಥಿತಿ ಕಂಡು ವಿಠ್ಠಲ್ ರುಕುಮಾಯಿ ದೇವಸ್ಥಾನದ ಎದುರು ಸ್ಥಳೀಯರು ಹೊಂಡದಲ್ಲಿ ಅಡಿಕೆ, ಬಾಳೆಗಿಡಗಳನ್ನ ನೆಟ್ಟು ಆಕ್ರೋಶ ಹೊರಹಾಕಿದ್ದಾರೆ.
ಪಟ್ಟಣದ ವಿವಿಧ ವಾರ್ಡ್ಗಳ ರಸ್ತೆ ತೀರಾ ಹದಗೆಟ್ಟಿದ್ದು, ಸಾರ್ವಜನಿಕರು ಆಗಾಗ ಅಸಮಧಾನ ವ್ಯಕ್ತಪಡಿಸುತ್ತಿದ್ದರು. ಪಟ್ಟಣದ ವಿವಿಧಡೆ ರಸ್ತೆ ಹೊಂಡಗಳಿoದಲೇ ತುಂಬಿ ಹೋಗಿರುದರಿಂದ ಗುರುವಾರ ಏಕಾಏಕಿ ಸ್ಥಳೀಯರು ಹಾಗೂ ಈ ಮಾರ್ಗದಲ್ಲಿ ರಿಕ್ಷಾ, ಬೈಕ್ ಇನ್ನಿತರ ವಾಹನದ ಮೂಲಕ ಸಂಚರಿಸುವ ಸಂಚಾರಿಗಳ ತಾಳ್ಮೆಯ ಕಟ್ಟೆ ಒಡೆದಿದೆ. ರಸ್ತೆ ಹೊಂಡದಲ್ಲಿ ಅಡಿಕೆ ಬಾಳೆ ಗಿಡಗಳನ್ನ ನೆಟ್ಟು ಆಕ್ರೋಶ ಹೊರಹಾಕಿದ್ದಾರೆ.
ಹೊಂಡಗಳ ಸುತ್ತಲೂ ವಾಹನಗಳನ್ನ ನಿಲ್ಲಿಸಿ ಪಟ್ಟಣ ಪಂಚಾಯತ್ ವಿರುದ್ಧ ದಿಕ್ಕಾರ ಕೂಗಿ ವಿನೂತನವಾಗಿ ಪ್ರತಿಭಟನೆ ನಡೆಸಿದರು. ಸ್ಥಳಕ್ಕಾಗಮಿಸಿದ ಪ.ಪಂ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು. ಇತ್ತ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದರಿಂದ ಅತ್ತ ಟ್ರಾಫಿಕ್ ಜಾಮ್ ಉಂಟಾಗಿತ್ತು. ಪ್ರತಿಭಟನೆ ಹೆಚ್ಚಾಗುತ್ತಿದ್ದಂತೆ ಸ್ಥಳಕ್ಕೆ ಪಿಎಸೈ ಮಹಾಂತೇಶ್ ಸೇರಿದಂತೆ ಪೊಲೀಸ್ ಸಿಬ್ಬಂದಿ ಆಗಮಿಸಿದ್ದರು. ಸ್ಥಳೀಯರು ತಹಶೀಲ್ದಾರ್, ಪಟ್ಟಣ ಪಂಚಾಯಿತ ಮುಖ್ಯಾಧಿಕಾರಿ ಸ್ಥಳಕ್ಕೆ ಬರಲೇಬೇಕು ಎಂದು ಆಗ್ರಹಿಸಿ ಬಿಗಿ ಪಟ್ಟು ಹಿಡಿದು ಪ್ರತಿಭಟನೆ ಮುಂದುವರೆಸಿದರು.
ಇದೇ ವೇಳೆ ಮೀನುಗಾರ ಮುಂಖಡರಾದ ಉಮೇಶ ಮೇಸ್ತಾ ಪ.ಪಂ.ಮುಖ್ಯಾಧಿಕಾರಿ ಸ್ಥಳಕ್ಕೆ ಆಗಮಿಸಿಲ್ಲ ಅವರು ಮಂಕಿಗೆ ಹೋಗಿದ್ದಾರಂತೆ ಸಲ್ಪ ಮಳೆ ನಿಂತಿದೆ. ಬಂಗಡೆ ಬಂದಿರಬೇಕು ಅದು ತರಲು ಹೋಗಿರಬೇಕು ಎಂದು ವ್ಯಂಗ್ಯವಾಡಿದರು. ಹೊನ್ನಾವರ ಪ.ಪಂ. ಕಾರ್ಯಲದಲ್ಲಿ ಒಂದೂವರೆ ವರ್ಷದಿಂದ ಇಂಜಿನಿಯರ್ ಇಲ್ಲ. ಆ ಕಾರಣಕ್ಕೆ ಈ ರೋಡ್ ಎಲ್ಲ ಹಾಳಾಗಿದೆ. ಹೊನ್ನಾವರಕ್ಕೆ ತಕ್ಷಣ ಇಂಜಿನಿಯರ್ ಹಾಕಬೇಕು ಎಂದು ಸಚಿವ ಮಂಕಾಳ ವೈದ್ಯರಲ್ಲಿ ವಿನಂತಿಸುತ್ತೇವೆ. ಹೊನ್ನಾವರ ಪಟ್ಟಣದಲ್ಲಿ ಆಗಿರುವ ರಸ್ತೆ ಪುನಃ ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ರವಿರಾಜ್ ದೀಕ್ಷಿತ್ ಸಮಸ್ಯೆ ಅವಲೋಕಿಸಿ ಪ್ರತಿಭಟನಾಕಾರರ ಅಹವಾಲು ಸ್ವೀಕರಿಸಿ ಮುಖ್ಯಾಧಿಕಾರಿಗಳಿಗೆ ಕರೆ ಮಾಡಿ ಸಮಸ್ಯೆ ಬಗೆಹರಿಸುವಂತೆ ತಾಕೀತು ಮಾಡಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿ ಸಾರ್ವಜನಿಕರಿಗೆ ಇಲ್ಲಿನ ರಸ್ತೆಯಿಂದ ಸಮಸ್ಯೆ ಆಗಿದೆ ಎಂದು ಪ್ರತಿಭಟಿಸಿದ್ದಾರೆ. ರಸ್ತೆ ಡ್ಯಾಮೇಜ್ ಆಗಿದೆ. ನಾಳೆಯಿಂದಲೇ ದುರಸ್ತಿ ಕೆಲಸ ಪ್ರಾರಂಭ ಮಾಡುತ್ತಾರೆ. ರಸ್ತೆ ಕಳಪೆ ಆಗಿರೋ ಬಗ್ಗೆ ಏನಾದ್ರು ಕ್ರಮ ಜರುಗಿಸುತ್ತಿರಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿ, ಮುಖ್ಯಾಧಿಕಾರಿಗಳು ಬ್ಲ್ಯಾಕ್ ಲಿಸ್ಟ್ ಮಾಡಿ, ಸಂಬoಧಪಟ್ಟವರಿಗೆ ನೋಟೀಸ್ ಜಾರಿ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪ.ಪಂ ಸದಸ್ಯ ಶಿವರಾಜ ಮೇಸ್ತ, ಸತ್ಯಜಾವಗಲ್, ಉಮೇಶ್ ಸಾರಂಗ್ ,ಸೇರಿದಂತೆ ರಿಕ್ಷಾ ಚಾಲಕರು ಸ್ಥಳೀಯರು, ಸಾರ್ವಜನಿಕರು ಹಾಜರಿದ್ದರು.