ಮುಂಡಗೋಡ: ಆತ್ಮಾ ಯೋಜನೆಯಡಿಯಲ್ಲಿ 2023-24ನೇ ಸಾಲಿನ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಕೃಷಿಯಲ್ಲಿ ಗಣನೀಯ ಸಾಧನೆ ಮಾಡಿದ ತಾಲೂಕಿನ ರೈತರಿಗೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಶ್ರೇಷ್ಠ ಕೃಷಿ ಪ್ರಶಸ್ತಿ ಹಾಗೂ ನಗದು ಬಹುಮಾನ ನೀಡಲಾಗುವುದು. ತಾಲೂಕು ಮಟ್ಟದ ಪ್ರಶಸ್ತಿಗೆ ಕೃಷಿ ವಿಭಾಗದಲ್ಲಿ ಸಮಗ್ರ ಕೃಷಿ ಪದ್ಧತಿ, ಸಾವಯವ ಕೃಷಿ, ವೈಜ್ಞಾನಿಕ ಯಂತ್ರೋಪಕರಣಗಳ ಬಳಕೆಯಲ್ಲಿ ಸಾಧಿಸಿದ ರೈತರಿಗೆ ತಲಾ ಒಂದರOತೆ 3 ಪ್ರಶಸ್ತಿಗಳಿವೆ. ತೋಟಗಾರಿಕೆ ವಿಭಾಗದಲ್ಲಿ ನವೀನ ತಂತ್ರಜ್ಞಾನ ಅಳವಡಿಕೆಯಲ್ಲಿ ಸಾಧಿಸಿದ ರೈತರಿಗ 1 ಪ್ರಶಸ್ತಿ, ಪಶು ಸಂಗೋಪನೆ ವಿಭಾಗದಲ್ಲಿ ವೈಜ್ಞಾನಿಕ ಹೈನುಗಾರಿಕೆ ಪದ್ಧತಿಯಲ್ಲಿ ಸಾಧಿಸಿದ ರೈತನಿಗೆ 1 ಪ್ರಶಸ್ತಿ, ಒಟ್ಟು ತಾಲೂಕಿಗೆ 5 ಶ್ರೇಷ್ಠ ಕೃಷಿಕ ಪ್ರಶಸ್ತಿಗಳನ್ನು ನೀಡಲು ಅವಕಾಶವಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಎಸ್.ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೃಷಿಯಲ್ಲಿ ರೈತ ಮಹಿಳೆಯರನ್ನು ಪ್ರೊತ್ಸಾಹಿಸುವ ಹಾಗೂ ಇತರೆ ಮಹಿಳೆಯರನ್ನು ಕೃಷಿಯತ್ತ ಆಕರ್ಷಿಸಲು ಒಟ್ಟು ಪ್ರಶಸ್ತಿಗಳಲ್ಲಿ 30%ರಷ್ಟು ಮಿಸಲಾತಿ ನಿಗದಿಪಡಿಸಲಾಗಿದೆ. ಆಸಕ್ತ ರೈತರು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಿಂದ ಅರ್ಜಿ ನಮೂನೆ ಪಡೆದು ಸೂಕ್ತ ದಾಖಲೆಗಳೊಂದಿಗೆ ಹಾಗೂ ಕ್ಷೇತ್ರ ಚಿತ್ರಗಳ ಸಹಿತ ಆ.15ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಆತ್ಮಾ ಯೋಜನೆಯ ಸಿಬ್ಬಂದಿಗಳನ್ನು ಸಂಪರ್ಕಿಸಲು ಕೊರಲಾಗಿದೆ. ಸಂಪರ್ಕಿಸುವ ಮೊಬೈಲ್ ಸಂ.: TEL:+919686362842, TEL:+918748012202.