Slide
Slide
Slide
previous arrow
next arrow

ಉರುಳು ಹಾಕಿ ಜಿಂಕೆ ಬೇಟೆ; ಮೂವರ ಬಂಧನ, ನಾಲ್ವರು ಪರಾರಿ

300x250 AD

ಜೊಯಿಡಾ: ತಾಲೂಕಿನ ಫಣಸೋಲಿ ಅರಣ್ಯ ವ್ಯಾಪ್ತಿಯಲ್ಲಿ ಉರುಳು ಹಾಕಿ ಜಿಂಕೆಯೊ0ದನ್ನು ಸಾಯಿಸಿ ಮಾಂಸ ಮತ್ತು ಚರ್ಮ ಬೇರ್ಪಡಿಸುವ ಸಂದರ್ಭದಲ್ಲಿ ಫಣಸೋಲಿ ಅರಣ್ಯಾಧಿಕಾರಿಗಳು 3 ಆರೋಪಿಗಳನ್ನು ಬಂಧಿಸಿದ್ದು, ನಾಲ್ವರು ಪರಾರಿಯಾಗಿದ್ದಾರೆ.
ಫಣಸೋಲಿ ಅರಣ್ಯ ಇಲಾಖೆ ವ್ಯಾಪ್ತಿಯ ವಿರ್ನೋಲಿ ಅರಣ್ಯ ಸಂಖ್ಯೆ 48ರಲ್ಲಿ ಉರುಳು ಹಾಕಿ ಗಂಡು ಜಿಂಕೆಯೊ0ದನ್ನು ಸಾಯಿಸಿ ತಲೆ, ಚರ್ಮ, ಮಾಂಸ ಬೇರ್ಪಡಿಸುತ್ತಿದ್ದ ವೇಳೆ ಫಣಸೋಲಿ ಅರಣ್ಯ ಸಿಬ್ಬಂದಿಗಳು ದಾಳಿ ಮಾಡಿ ವಿಷ್ಣು ಕಲ್ಮೋಕರ, ಕೇಶವ ಹರಿಜನ, ಸುರೇಶ ಮುಂದಾಯಕರ ಎನ್ನುವವರನ್ನು ಬಂಧಿಸಿ ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, 25.72 ಕೆಜಿ ತಲೆ ಮತ್ತು ಮಾಂಸ ಹಾಗೂ 11 ಕೆಜಿ ಚರ್ಮ ಮತ್ತು ಕತ್ತಿಯನ್ನು ವಶಪಡಿಸಿಕೊಳ್ಳಲಾಗಿದೆ.

ಕೃಷ್ಣ ಕಲ್ಮೋಲಕರ, ಮಂಜುನಾಥ ಕಲ್ಮೋಲಕರ, ಉಮಾಕಾಂತ ಧರಣಿ, ಉಮೇಶ ಧರಣಿ ಎನ್ನುವವರು ನಾಪತ್ತೆಯಾಗಿದ್ದು, ಪ್ರಕರಣ ದಾಖಲಾಗಿ ಪತ್ತೆ ಕಾರ್ಯ ಮುಂದುವರಿದಿದೆ. ಈ ಕಾರ್ಯಾಚರಣೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ನೀಲೇಶ್ ಶಿಂಧೆ, ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಎಸಿಎಫ್ ಅಮರಾಕ್ಷರ ಎಮ್. ಮಾರ್ಗದರ್ಶನದಲ್ಲಿ ಫಣಸೋಲಿ ವಲಯ ಅರಣ್ಯಾಧಿಕಾರಿ ರಶ್ಮಿ ದೇಸಾಯಿ, ಸಿಬ್ಬಂದಿಗಳಾದ ಅಣ್ಣಪ್ಪ ಮುದಕಣ್ಣವರ್, ಶೇಖರ್ ಪಮ್ಮಾರ, ಪರಮೇಶ್ವರ ಪಾಟೀಲ್, ಹೈದರ್ ಅಲಿ ಮತ್ತು ಕಾವಲುಗಾರರು, ವಾಹನ ಚಾಲಕರು ಪಾಲ್ಗೊಂಡಿದ್ದರು.

300x250 AD
Share This
300x250 AD
300x250 AD
300x250 AD
Back to top