ಶಿರಸಿ: ನಗರದ ಶಾಲಾ ಕಾಲೇಜುಗಳ ಸಮೀಪ ಕಾನೂನು ಉಲ್ಲಂಘಿಸಿ ಸಿಗರೇಟ್ ಮತ್ತು ಗುಟ್ಕಾ ಮಾರಾಟ ಮಾಡುತ್ತಿದ್ದ ಅಂಗಡಿಗಳಿಗೆ ಶಿರಸಿ ನಗರ ಠಾಣೆ ಹಾಗೂ ಮಾರ್ಕೆಟ್ ಠಾಣೆ ಪೊಲೀಸರು ಕೊಟ್ಪಾ ಕಾಯ್ದೆ ಅಡಿ ದಂಡ ವಿಧಿಸಿದ್ದಾರೆ.
ಈ ವಿಶೇಷ ಕಾರ್ಯಾಚರಣೆಯಲ್ಲಿ 90 ಅಂಗಡಿಗಳಲ್ಲಿ ತಪಾಸಣೆ ನಡೆಸಲಾಗಿದ್ದು 33 ಅಂಗಡಿಗಳು ನಿಯಮ ಮೀರಿರುವುದು ಪತ್ತೆಯಾಗಿದೆ. ಇವುಗಳಿಗೆ ತಲಾ 200 ರೂ ಗಳಂತೆ ದಂಡ ವಿಧಿಸಿ ಎಚ್ಚರಿಕೆ ನೀಡಲಾಗಿದೆ.
ಶಿರಸಿ ಉಪ ವಿಭಾಗದ DYSP ಗಣೇಶ್ ಕೆ. ಎಲ್ ಹಾಗೂ ಸಿಪಿಐ ರಾಮಚಂದ್ರ ನಾಯಕ ಮಾರ್ಗದರ್ಶನದಲ್ಲಿ PSI ರಾಜಕುಮಾರ್, ಭೀಮಾಶಂಕರ್, ASI ಕಿರಪ್ಪ ಘಟಕಂಬ್ಳೆ , ಅಶೋಕ್ ರಾಥೋಡ್,ನೆಲ್ಸನ್ ಸಿಬ್ಬಂದಿಯವರುಗಳಾದ ಚಿದಾನಂದ ನಾಯ್ಕ್, ವಿನಾಯಕ ಗೌಡ, ಹನುಮಂತ, ಹನುಮಂತ D.J., ಮಂಜು ಕಾಶಿಕೋವಿ, ಜಗದೀಶ ಪಾಲ್ಗೊಂಡಿದ್ದರು.