Slide
Slide
Slide
previous arrow
next arrow

ಯಲ್ಲಾಪುರ,ಮುಂಡಗೋಡ, ಬನವಾಸಿ ಭಾಗವನ್ನು ಬರಗಾಲ ಪೀಡಿತ ಪ್ರದೇಶವಾಗಿ ಘೋಷಿಸಲು ಹೆಬ್ಬಾರ್ ಆಗ್ರಹ

300x250 AD

ಶಿರಸಿ: ನಗರದ ಅರಣ್ಯ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಯಲ್ಲಾಪುರ, ಮುಂಡಗೋಡ ಹಾಗೂ ಬನವಾಸಿ ಭಾಗವನ್ನು ಬರಗಾಲ ಪೀಡಿತ ಪ್ರದೇಶವನ್ನಾಗಿ ಘೋಷಿಸುವ ಕುರಿತಂತೆ ಶಾಸಕ ಶಿವರಾಮ ಹೆಬ್ಬಾರ್ ಪತ್ರಿಕಾಗೋಷ್ಠಿ ನಡೆಸಿದರು.

ಈ ವೇಳೆ ಮಾತನಾಡಿದ ಶಾಸಕರು ಪ್ರಸ್ತುತ ವರ್ಷದಲ್ಲಿ ವಾಡಿಕೆಗಿಂತ ಮಳೆಯ ಪ್ರಮಾಣವು ಅತ್ಯಂತ ಕಡಿಮೆಯಾಗಿದೆ ಯಲ್ಲಾಪುರ, ಮುಂಡಗೋಡ ಹಾಗೂ ಬನವಾಸಿ ಭಾಗದಲ್ಲಿ ಶೇಕಡಾವಾರು 70 ಪ್ರತಿಶತ ಮಳೆಯ ಕೊರತೆ ಉಂಟಾಗಿದೆ.ರೈತರು ಹಾಕಿರುವ ಬಿತ್ತನೆ ಬೀಜಗಳು ಹಾಳಾಗಿದ್ದು ವ್ಯವಸಾಯವನ್ನು ಅವಲಂಬಿಸಿರುವ ಈ ಭಾಗದ ರೈತರು ಅತ್ಯಂತ ಸಂಕಷ್ಟಕ್ಕೆ ಸಿಲುಕಿದ್ದಾರೆ.

300x250 AD

ರೈತರ ಸಂಕಷ್ಟವನ್ನು ಅರಿತು ರಾಜ್ಯ ಸರಕಾರ ಯಲ್ಲಾಪುರ, ಮುಂಡಗೋಡ ಹಾಗೂ ಬನವಾಸಿ ಭಾಗವನ್ನು ಶೀಘ್ರದಲ್ಲೇ ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಬೇಕು ಎಂದು ಆಗ್ರಹಿಸಿದರು. ಸರಕಾರಕ್ಕೆ ಹಾಗೂ ಜಿಲ್ಲಾಡಳಿತಕ್ಕೆ ಸೂಕ್ತ ಪ್ರಸ್ತಾವನೆಯನ್ನು ಸಂಬಂಧಪಟ್ಟ ಅಧಿಕಾರಗಳು ಮೂಲಕ ತಲುಪಿಸುವುದಾಗಿ ತಿಳಿಸಿದರು.

Share This
300x250 AD
300x250 AD
300x250 AD
Back to top