• Slide
  Slide
  Slide
  previous arrow
  next arrow
 • ಹಾಸಣಗಿ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘದ ನೂತನ ನಿರ್ದೇಶಕರ ಆಯ್ಕೆ

  300x250 AD

  ಯಲ್ಲಾಪುರ: ತಾಲೂಕಿನ ಹಾಸಣಗಿ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಯ ಆಯ್ಕೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಸಾಮಾನ್ಯ ಸಾಲಗಾರ ಕ್ಷೇತ್ರದಿಂದ ನಿಕಟಪೂರ್ವ ಅಧ್ಯಕ್ಷ ಆರ್.ಎನ್.ಹೆಗಡೆ ಗೋರ್ಸಗದ್ದೆ, ನಿಕಟಪೂರ್ವ ಉಪಾಧ್ಯಕ್ಷ ಟಿ.ವಿ.ಹೆಗಡೆ ಬೆದೆಹಕ್ಕಲು, ಆರ್.ಎನ್.ಭಟ್ಟ ಎಣ್ಣೆಸರ, ಮೋಹನ ಎನ್.ಭಟ್ಟ ಹೊನ್ನಳ್ಳಿ, ರಾಘವೇಂದ್ರ ಎಸ್ ಭಟ್ಟ ಹಾಸಣಗಿ, ಮೀಸಲು ಪರಿಶಿಷ್ಟ ಜಾತಿ ಸ್ಥಾನದಿಂದ ಗಂಗಾಧರ ವಿ ಮೇದಾರ, ಮೀಸಲು ಪರಿಶಿಷ್ಟ ಪಂಗಡ ಸ್ಥಾನದಿಂದ ಮಂಜುನಾಥ ಎಸ್ ಸಿದ್ದಿ, ಹಿಂದುಳಿದ ಪ್ರವರ್ಗ ಅ ಮೀಸಲು ಸ್ಥಾನದಿಂದ ವಿನೋದ ಎನ್ ನಾಯ್ಕ ಚಿಕ್ಕೊತ್ತಿ, ಹಿಂದುಳಿದ ಪ್ರವರ್ಗ ಬ ಮೀಸಲು ಕ್ಷೇತ್ರದಿಂದ ರಾಮರಾಜ ಎನ್.ಮರಾಠಿ, ಮಹಿಳಾ ಮೀಸಲು ಕ್ಷೇತ್ರದಿಂದ ಸುಶೀಲಾ ಎನ್.ಜೋಷಿ ತೋರಣಸರ ಮತ್ತು ಮೀರಾ ನರಸಿಂಹ ಹೆಗಡೆ ಲಿಂಗನಸರ ಹಾಗೂ ಸಾಲಗಾರರಲ್ಲದ ಕ್ಷೇತ್ರದಿಂದ ನಾಗರಾಜ ಎನ್.ಹೆಗಡೆ ಕಂಪ್ಲಿ ಸೇರಿದಂತೆ 12 ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ. ಅಲ್ಲದೇ ಜಿಲ್ಲಾ ಮಧ್ಯವರ್ತಿ ಬ್ಯಾಂಕಿನ ಪ್ರತಿನಿಧಿಯಾಗಿ ಗೋಪಾಲಕೃಷ್ಣ ಎನ್.ಹೆಗಡೆ ನಂದೀಸರ ನಾಮನಿರ್ದೇಶಿತಗೊಂಡಿದ್ದಾರೆ.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top