Slide
Slide
Slide
previous arrow
next arrow

ಶಿಕ್ಷಣ ಕ್ಷೇತ್ರದ ಸಮಸ್ಯೆ ಬಗೆಹರಿಸಲು ಸಿದ್ಧ: ಮಂಕಾಳ ವೈದ್ಯ

300x250 AD

ಹೊನ್ನಾವರ: ಕ್ಷೇತ್ರದಲ್ಲಿ ಶೈಕ್ಷಣಿಕ ಕ್ಷೇತ್ರದ ಸಮಸ್ಯೆ ಬಗೆಹರಿಸಲು ಸಿದ್ಧನಿದ್ದು, ಶಾಲೆಯಲ್ಲಿಯ ಸಮಸ್ಯೆ ಗಮನಕ್ಕೆ ತಂದರೆ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಸಚಿವ ಮಂಕಾಳ ವೈದ್ಯ ಶಿಕ್ಷಕರಿಗೆ ಭರವಸೆ ನೀಡಿದರು. ಕೆಳಗಿನೂರಿನ ಒಕ್ಕಲಿಗ ಸಮುದಾಯ ಭವನದಲ್ಲಿ ಶಿಕ್ಷಣ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಭೂತ ಸೌಕರ್ಯ ಮತ್ತು ಕುಂದುಕೊರತೆಯ ಕುರಿತು ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ತಾಲೂಕಿನ ವಿವಿಧ ಶಾಲೆಯಲ್ಲಿ ಇರುವ ಕೊರತೆಗಳ ಬಗ್ಗೆ ಆಗಬೇಕಿರುವ ಕಾಮಗಾರಿ, ಕಟ್ಟಡದ ದುರಸ್ಥಿ ಬೇಡಿಕೆಯನ್ನು ಇಡೇರಿಸುವಂತೆ 80 ಕೂ ಹೆಚ್ಚು ಶಿಕ್ಷಕರು ತಮ್ಮ-ತಮ್ಮ ಶಾಲೆಯ ಕೋರತೆಯನ್ನು ಇಡೇರಿಸುವಂತೆ ಅಗ್ರಹಿಸಿ ಸಚಿವರಿಗೆ ಮನವಿ ಸಲ್ಲಿಸಿದರು.

ವಿವಿಧ ಶಾಲಾ ಶಿಕ್ಷಕರು ಸಭೆಯಲ್ಲಿ ತಮ್ಮ ಶಾಲೆ ಸಮಸ್ಯೆ ವಿವರಿಸಿದರು. ವಿಶೇಷವಾಗಿ ವಿವಿಧ ಶಾಲೆಯಲ್ಲಿ ಕಟ್ಟಡ ಸಮಸ್ಯೆ, ಶೌಚಾಲಯ, ಸಮುದಾಯ ಭವನ, ಶಿಕ್ಷಕರ ಕೊರತೆ, ಮೆಲ್ಚಾವಣೆ ದುರಸ್ತಿ, ಅಕ್ಷರದಾಸೋಹ ಕಟ್ಟಡದ ಬೇಡಿಕೆಯನ್ನು ಮುಂದಿಟ್ಟರು. ಸ್ಥಳದಲ್ಲಿದ್ದ ಅಧಿಕಾರಿಗಳ ಬಳಿ ಎಲ್ಲಾ ಸಮಸ್ಯೆಯನ್ನು ಪಟ್ಟಿ ಮಾಡಿ ಭೇಟಿ ನೀಡಿ ಅಂದಾಜು ನಕ್ಷೆ ಸಿದ್ದಪಡಿಸಿ ಸಲ್ಲಿಸುವಂತೆ ಸೂಚಿಸಿದರು.
ಗೇರುಸೊಪ್ಪ ಮಾರ್ಗದಲ್ಲಿ ಹೆಣ್ಣು ಮಕ್ಕಳಿಗೆ ಹಾಸ್ಟೆಲ್ ಅಗತ್ಯವಿರುವ ಕುರಿತು ಶಿಕ್ಷಕರು ನೀಡಿದ ಮನವಿಗೆ, ಪ್ರಸುತ್ತ ಇರುವ ಹೊನ್ನಾವರ, ಮಂಕಿ ಹಾಸ್ಟೆಲ್ ಮೇಲ್ದರ್ಜೆಗೆ ಏರಿಸುವ ಇಂಗಿತ ವ್ಯಕ್ತಪಡಿಸಿದರು. ಅವಶ್ಯವಿದ್ದಲ್ಲಿ ಇಲ್ಲಿಯೂ ಹಾಸ್ಟೆಲ್ ನಿರ್ಮಾಣದ ಭರವಸೆ ನೀಡಿದರು. ಮಾಹಿತಿ ನೀಡಿದರು. ಅಡುಗೆ ಅನಿಲ ದರ ಹೆಚ್ಚಾಗಿದೆ. ಸರ್ಕಾರ ನೀಡುವ ಹಣ ಸಾಕಾಗುವುದಿಲ್ಲ. ಖರ್ಚಿಗೆ ತಕ್ಕಹಾಗೆ ಹಣ ಕಳೆದ ಎರಡು ವಷÀðದಿಂದ ನೀಡದೇ ಸಮಸ್ಯೆ ಆಗುತ್ತಿದೆ ಎಂದಾಗ, ಈ ಹಿಂದೆ ನನ್ನ ಶಾಸಕತ್ವ ಅವಧಿಯಲ್ಲಿ ಈ ಸಮಸ್ಯೆ ಇರಲಿಲ್ಲ. ಮುಂದಿನ ದಿನದಲ್ಲಿ ಅಡುಗೆ ಅನಿಲ ಮತ್ತು ಬಿಸಿಯೂಟದ ಇತರೆ ಸಾಮಗ್ರಿಗಳ ಬಗ್ಗೆ ಸರ್ಕಾರದ ಗಮನ ಸೆಳೆದು ಸಮಸ್ಯೆ ಬಗೆಹರಿಸಲು ಪ್ರಾಮಾಣಿಕಾಗಿ ಪ್ರಯತ್ನಿಸುವ ಭರವಸೆ ನೀಡಿದರು.

300x250 AD

ವಿವಿಧ ಬೇಡಿಕೆ ಸ್ವೀಕಾರದ ಬಳಿಕ ಸಚಿವರು ಮಾತನಾಡಿ ಪ್ರತಿ ವ್ಯಕ್ತಿಯ ಸಾಧನೆಗೆ ಶಿಕ್ಷಣವೇ ಪ್ರಮುಖ ಕಾರಣವಾಗಿದ್ದು, ಅದರಲ್ಲೂ ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಹಂತದಲ್ಲಿ ಯಾವೊಬ್ಬ ವಿದ್ಯಾರ್ಥಿಗೂ ಏನೆ ಸಮಸ್ಯೆ ಉಂಟಾಗಬಾರದು. ಸರ್ಕಾರ ವಿವಿಧ ಸೌಲಭ್ಯ ನೀಡಿ ಉಚಿತ ಶಿಕ್ಷಣ ನೀಡುತ್ತಿದ್ದು, ಅಧಿಕಾರಿಗಳು ಅಗತ್ಯವಿರುವ ಸೌಲಭ್ಯಗಳ ಬೇಡಿಕೆ ಸಲ್ಲಿಸಿದರೆ ಆ ಸಮಸ್ಯೆ ಈಡೇರಿಸಲಾಗುವುದು. ಶೈಕ್ಷಣಿಕ ಸಮಸ್ಯರ ಬಗೆಹರಿಸಲು ಅನುದಾನದ ಕೊರತೆ ಇಲ್ಲ. ದಾನಿಗಳು ಪೂರ್ವ ವಿದ್ಯಾರ್ಥಿಗಳು ತಮ್ಮ ಶಾಲೆಯ ಅಭಿವೃದ್ದಿಗೆ ಮುಂದಾಗುತ್ತಾರೆ. ಸರ್ಕಾರವು ಹಣ ಬಿಡುಗಡೆ ಮಾಡಲಿದೆ. ಎಲ್ಲರ ಸಹಕಾರದ ಶೈಕ್ಷಣಿಕ ಸಮಸ್ಯೆ ಬಗೆಹರಿಸಿ, ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರು ಹಾಗೂ ಒತ್ತು ನೀಡುವಂತೆ ಸೂಚಿಸಿದರು.
ಸಚಿವರಾದ ಮಂಕಾಳ ವೈದ್ಯ ಅವರಿಗೆ ತಾಲೂಕಾ ಪಂಚಾಯತ ವತಿಯಿಂದ, ಕ್ಷೇತ್ರ ಶಿಕ್ಷಣಾಧಿಕಾರಿಗಳ ವತಿಯಿಂದ, ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ತಾಲೂಕಿನಲ್ಲಿ ಶಿಕ್ಷಕರಿಗಾಗಿ ಗುರುಭವನ ಮಂಜೂರಿ ಮಾಡಬೇಕು ಎಂದು ಆಗ್ರಹಿಸಿ ಪ್ರಾಥಮಿಕ ಶಾಲೆಯ ಶಿಕ್ಷರ ಸಂಘದ ವತಿಯಿಂದ ಮನವಿ ಸಲ್ಲಿಸಿದರು. ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕ, ಬಿ.ಇ.ಓ ಜಿ.ಎಸ್.ನಾಯ್ಕ ಉಪಸ್ಥಿತರಿದ್ದರು. ಯುವಜನಸೇವಾ ಕ್ರೀಡಾಧಿಕಾರಿ ಸುಧೀಶ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.

Share This
300x250 AD
300x250 AD
300x250 AD
Back to top