• Slide
    Slide
    Slide
    previous arrow
    next arrow
  • ಶಾಲೆಯ ಪಕ್ಕದ ಕ್ವಾರಿ ಸ್ಥಗಿತಗೊಳಿಸಲು ಗ್ರಾಮಸ್ಥರ ಆಗ್ರಹ

    300x250 AD

    ಶಿರಸಿ: ತಾಲೂಕಿನ ಮುಂಡಿಗೆಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಬಳಿ ನಡೆಸಲಾಗುತ್ತಿರುವ ಕ್ವಾರಿಯಿಂದಾಗಿ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಕ್ವಾರಿ ಸ್ಥಗಿತಗೊಳಿಸಬೇಕು ಅಥವಾ ಶಾಲೆಗೆ ಬೇರೆ ಕಡೆಗಳಲ್ಲಿ ಜಾಗ ನೀಡಬೇಕು ಎಂದು ಗ್ರಾಮಸ್ಥ ಶ್ರೀಧರ್ ಬಸವಗೌಡ ಆಗ್ರಹಿಸಿದ್ದಾರೆ.

    ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲೆ ಇರುವ ಜಾಗ ರುದ್ರ ಗೌಡ ಅವರದ್ದಾಗಿದೆ. ಶಿರಸಿಯ ಮಾಬ್ಲೇಶ್ವರ ತಾರೀಮನೆ ಅವರು ಈ ಜಾಗವನ್ನ ಖರೀದಿಸಿ 2005ರಲ್ಲಿ 2 ಗುಂಟೆ ಜಾಗವನ್ನ ಶಾಲೆಗೆ ನೀಡಿದ ದಾನಪತ್ರವಿದೆ. ತಾರೀಮನೆಯವರೆಲ್ಲ ಮೃತಪಟ್ಟಿದ್ದು, ಅವರ ಸೊಸೆ ಮಾತ್ರ ಬದುಕುಳಿದಿದ್ದಾರೆ. ಆದರೆ ಚಂದ್ರಪ್ಪ ಚನ್ನಯ್ಯ ಎನ್ನುವವರು ತಾವು ಜಾಗ ಖರೀದಿ ಮಾಡಿರುವುದಾಗಿ ಶಾಲೆಯ ಕೂಗಳತೆ ದೂರದಲ್ಲಿ ಕೆಂಪುಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದರು.

    300x250 AD

    ಆರು ತಿಂಗಳ ಹಿಂದೆ ತಹಶಿಲ್ದಾರರಿಗೆ ಮನವಿ ಕೊಟ್ಟಾಗ ಎರಡು ತಿಂಗಳು ಕ್ವಾರಿ ಸ್ಥಗಿತಗೊಳಿಸಿದ್ದರು. ಕಾನೂನು ಪ್ರಕಾರ ಜಾಗ ಅವರದ್ದಾಗಿದ್ದರೆ ಸರ್ಕಾರ ಶಾಲೆಗೆ ಬೇರೆ ಜಾಗ ನೀಡಲಿ, ಇಲ್ಲದಿದ್ದರೆ ಕ್ವಾರಿ ಸ್ಥಗಿತಗೊಳಿಸಿ ಶಾಲೆ ನಡೆಸಲು ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಈ ಹಿಂದೆಯೇ ಶಾಸಕ ಶಿವರಾಮ ಹೆಬ್ಬಾರ್ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಅದಾದ ಬಳಿಕ ಈಗಲೂ ಸಹ ಮತ್ತೆ ತಿಳಿಸಿದಾಗ ಅವರ ಆಪ್ತ ಸಹಾಯಕರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಬನ್ನಿ ಎಂದಿದ್ದಾರೆ ಎಂದರು. ಈ ವೇಳೆ ಶಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆರಿಯಪ್ಪ ಗೌಡ, ಗ್ರಾಮಸ್ಥರಾದ ನಾಗಪತಿ ಡಿ.ನಾಯ್ಕ, ಭಾಸ್ಕರ್ ಗೌಡ, ಗಣಪತಿ ಗೌಡ, ವಿಠಲ್ ಗೌಡ ಮುಂತಾದವರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top