ಶಿರಸಿ: ಬೌದ್ಧಿಕ ವಿಕಲಾಂಗ ಮಕ್ಕಳ ಶಾಲೆಗಳ ಶಿಕ್ಷಕರಿಗೆ 2 ದಿನಗಳ ಪ್ರಶಿಕ್ಷಣ ಕಾರ್ಯಾಗಾರವು ಜೂ. 23, 24 ರಂದು ಶಿರಸಿಯ ಮರಾಠಿಕೊಪ್ಪದ ಅಜಿತ ಮನೋಚೇತನ ಕೇಂದ್ರದಲ್ಲಿ ನಡೆಯಿತು. ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಯ ವಿಶೇಷ ಶಿಕ್ಷಕರು ಭಾಗವಹಿಸಿದ್ದರು.
ಉದ್ಘಾಟನಾ ಸಮಾರಂಭ ಕಾರ್ಯಕ್ರಮವನ್ನು ಈಶಾನ್ಯ ಇಂಡಿಯ ಫೌಂಡೇಶನ್ ಸಂಸ್ಥಾಪಕ ನಿರ್ದೇಶಕಿ ಸ್ವಾತಿ ರಘುನಂದನ ಉದ್ಘಾಟಿಸಿದರು.
ಅಂಗವಿಕಲ ಕ್ಷೇತ್ರದ ಕಾರ್ಯಕರ್ತರಿಗೆ ತಾಂತ್ರಿಕ ತರಬೇತಿ ನೀಡುವ ಕೆಲಸದಲ್ಲಿ ನಮಗೆ ಹಲವು ಅನುಭವಗಳಿವೆ. ತಜ್ಞತೆ ಜೊತೆ ಹಲವು ಕ್ಷೇತ್ರ ಪ್ರಯೋಗಗಳು, ನಮ್ಮ ಕಲಿಸುವ, ಸಾಮರ್ಥ್ಯ ಹೆಚ್ಚಿಸಲು ಸಹಾಯಕ ಅಂತರ್ಜಾಲ ಜಾಲತಾಣಗಳ ಲಾಭ ಪಡೆಯಬೇಕು ಎಂದು ಶ್ರೀಮತಿ ಸ್ವಾತಿ ತಿಳಿಸಿದರು.
ಶೈಕ್ಷಣಿಕ ಸಲಹೆಗಾರ ಡಾ. ಕೇಶವ ಕೊರ್ಸೆ, ಬುದ್ಧಿಮಾಂದ್ಯತೆ ಇರುವ ವ್ಯಕ್ತಿಗಳ ವಿಷಯದಲ್ಲಿ ಪಾಲಕರು, ಶಿಕ್ಷಕರ ಜೊತೆ ಸಮಾಜ, ಸರ್ಕಾರ ಇನ್ನಷ್ಟು ಕಾಳಜಿ, ಆದರದಿಂದ ನೋಡಬೇಕು. ಇಲ್ಲಿ ಮಾಶಾಸನ, ಕಾನೂನಿನ ಅಂಶಗಳ ಜೊತೆ ವಿಶೇಷ ಮಕ್ಕಳ ಭವಿಷ್ಯ, ಆರೋಗ್ಯ, ಪಾಲನೆ ಸಂಗತಿಗಳು ಮುಖ್ಯ ಎಂದು ತಿಳಿಸುತಾ, ತರಬೇತಿ ಕಾರ್ಯಾಗಾರದ ಪ್ರತಿನಿಧಿಗಳನ್ನು ಆಳವಾದ ವಿಶ್ಲೇಷಣೆಗೆ ಒಳಪಡಿಸಿದರು.
ಸಂಸ್ಥೆ ಅಧ್ಯಕ್ಷ ಸುಧೀರ ಭಟ್ ಅಧ್ಯಕ್ಷತೆ ವಹಿಸಿದರು. ಮುಖ್ಯ ಶಿಕ್ಷಕಿ ನರ್ಮದಾ ಹೆಗಡೆ ಸ್ವಾಗತಿಸಿದರು. ಶಿಕ್ಷಕಿ ಗೀತಾ ಗೌಡ ವಂದಿಸಿದರು.
ಜೂನ 24 ರ ಮಧ್ಯಾಹ್ನ ನಡೆದ ಕಾರ್ಯಕ್ರಮದಲ್ಲಿ, ಪಾಲಕರು ಶಿಕ್ಷಕರೊಂದಿಗೆ ತಜ್ಞರ ಸಂವಾದ ನಡೆಯಿತು. ಸಮಾರೋಪದಲ್ಲಿ ಅಜಿತ ಮನೋಚೇತನದ ಟ್ರಸ್ಟಿ ವಿ. ಆರ್ ಹೆಗಡೆ ಹೊನ್ನೆಗದ್ದೆ ಅಧ್ಯಕ್ಷತೆ ವಹಿಸಿದರು. ಪಾಲಕರ ಜೊತೆ ಈಶಾನ್ಯ ಫೌಂಡೇಶನ್ ನ ತಜ್ಞರಾದ ಅನೂಪ್, ಲಕ್ಷ್ಮಿಪ್ರಸಾದ, ರೂಪಲಕ್ಷ್ಮಿ, ಮಾರ್ಕ ಲೊಬೊ ಅವರು ಪ್ರಶ್ನೋತ್ತರ ನಡೆಸಿದರು.
ವಿಷಯ ತಜ್ಞೆ ಲಕ್ಷ್ಮಿಪ್ರಸಾದ, ಶಿಕ್ಷಕರು ಕಲಿಯುತ್ತಲೇ ಇರಬೇಕು. ಇಲ್ಲಿ ಸಂಶೋದಕ ಪ್ರವೃತ್ತಿ ಇರಲಿ, ಅಜಿತ ಮನೋಚೇತನ ರಾಜ್ಯದ ಮಾದರಿ ಸಂಸ್ಥೆಗಳ ಸಾಲಿಗೆ ಸೇರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಾಗರದ ಚೈತನ್ಯ ಸಂಸ್ಥೆಯ ಶಾಂತಲಾ ಸುರೇಶ್, ಯಲ್ಲಾಪುರದ ರಾಘವೇಂದ್ರ ಬುದ್ದಿಮಾಂದ್ಯ ಮಕ್ಕಳ ಶಾಲೆಯ ಚಂದ್ರು ಅವರು ಕಾರ್ಯಾಗಾರ ನಮ್ಮ ತಿಳುವಳಿಕೆ ಹೆಚ್ಚಿಸಿದೆ ಎಂದರು
ಕ್ಯಾನ್ಸರ ರೋಗದ ಜೊತೆ ಹೋರಾಟ ನಡೆಸಿ ಗೆದ್ದ ಹುಬ್ಬಳ್ಳಿಯ ಪತ್ರಕರ್ತೆ ಮತ್ತು ಆಪ್ತ ಸಲಹೆಗಾರ್ತಿ ಶ್ರೀಮತಿ ಕೃಷ್ಣಿ ಶಿರೂರ್ ಸಮಾರೋಪದ ಮುಖ್ಯ ಆಹ್ವಾನಿತರಾಗಿದ್ದರು.
“ಅಂಗವಿಕಲತೆಯನ್ನು ಒಪ್ಪಿಕೊಂಡು ಎದುರಿಸಬೇಕು, ಕೊರಗಬಾರದು ವಿಶೇಷ ಮಕ್ಕಳಿಗೆ ನೆರಳಾಗಬೇಕು. ಯೋಗ, ಮುದ್ರೆ, ಗಾಯತ್ರಿ, ಧ್ಯಾನಗಳಿಂದ ಸೂಕ್ತ ಚಿಕಿತ್ಸೆ, ತರಬೇತಿಗಳಿಂದ ದೈಹಿಕ, ಮಾನಸಿಕ ನ್ಯೂನ್ಯತೆ, ಪರಿಹರಿಸಲು ದೈನಂದಿನ ಕ್ರಮದಲ್ಲಿ ಇವೆಲ್ಲ ಇರುವಂತೆ ಪ್ರಯತ್ನಿಸೋಣ ಎಂದು ಪಾಲಕರು, ಶಿಕ್ಷಕರನ್ನು ಕೃಷ್ಣಿ ಶಿರೂರು ಹುರಿದುಂಬಿಸಿದರು. ತಮ್ಮ ಕ್ಯಾನ್ಸರ ವಿರುದ್ಧದ ಹೋರಾಟ ಬಿಚ್ಚಿಟ್ಟರು.
ಕಾರ್ಯಾಗಾರದಲ್ಲಿ ಅಂಗವಿಕಲ ಕಲ್ಯಾಣ ಅಧಿಕಾರಿಗಳು, ರೊಟೇರಿಯನ ಮಹೇಶ ತೇಲಂಗ, ಸಂಸ್ಥೆಯ ಕಾರ್ಯದರ್ಶಿ ಅನಂತ ಹೆಗಡೆ ಅಶಿಸರ, ಪಾಲ್ಗೊಂಡರು, ಶ್ರೀಮತಿ ಸುಮಿತ್ರಾ ಪ್ರಾರ್ಥನೆಗೈದರು, ಪರಿಮಳ ವಂದಿಸಿದರು. ಶ್ಯಾಮಲಾ ಹೆಗಡೆ ಸಂವಾದಕ್ಕೆ ನೆರವಾದರು, ಗಣೇಶ ಮೊಗೇರ್ ಫಿಸಿಯೋಥೆರಫಿಯ ಅನುಭವ ತೀಳಿಸಿದರು.