• Slide
  Slide
  Slide
  previous arrow
  next arrow
 • ಶಿರಸಿ ಲಯನ್ಸ್ ಕ್ಲಬ್: ನೂತನ ಅಧ್ಯಕ್ಷರಾಗಿ ಲ.ಅಶೋಕ ಹೆಗಡೆ ನೇಮಕ

  300x250 AD

  ಶಿರಸಿ: ಶಿರಸಿ ಲಯನ್ಸ್ ಕ್ಲಬ್, ಲಿಯೋ ಕ್ಲಬ್ ಶಿರಸಿ ಹಾಗೂ ಲಿಯೊ ಕ್ಲಬ್ ಶ್ರೀನಿಕೇತನ ಇವುಗಳ 2023-24 ವರ್ಷದ ನೂತನ ಪದಾಧಿಕಾರಿಗಳ ಪದಗ್ರಹಣ ಲಯನ್ಸ್ ಭವನದಲ್ಲಿ ನೆರವೇರಿತು. ಅಧ್ಯಕ್ಷರಾಗಿ ಲ.ಅಶೋಕ ಹೆಗಡೆ, ಲ.ಜ್ಯೋತಿ ಅಶ್ವಥ ಹೆಗಡೆ ಕಾರ್ಯದರ್ಶಿಯಾಗಿ, ಲ. ಶರಾವತಿ ಭಟ್ಟ ಖಜಾಂಚಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

  ಲಿಯೋ ಕ್ಲಬ್ ಶ್ರೀನಿಕೇತನದ ಅಧ್ಯಕ್ಷೆಯಾಗಿ ಲಿಯೊ ಸಿರಿ ಅಶೋಕ ಹೆಗಡೆ, ಕಾರ್ಯದರ್ಶಿಯಾಗಿ ಲಿಯೋ ಅಪೂರ್ವ ಹೊನ್ನಾವರ, ಖಜಾಂಚಿಯಾಗಿ ಲಿಯೊ ನವ್ಯ ಮಡಿವಾಳ ಹಾಗೂ ಲಿಯೊ ಕ್ಲಬ್ ಶಿರಸಿಯ ಅಧ್ಯಕ್ಷೆಯಾಗಿ ಲಿಯೊ ಭುವನ ಹೆಗಡೆ, ಕಾರ್ಯದರ್ಶಿಯಾಗಿ ಲಿಯೊ ಪೃಥ್ವಿ ಹೆಗಡೆ, ಖಜಾಂಚಿಯಾಗಿ ಲಿಯೊ ಅನನ್ಯಾ ನಾಯ್ಕ್ ಪ್ರಮಾಣವಚನ ಸ್ವೀಕರಿಸಿದರು.
  ಲಯನ್ಸ್ ಪ್ರಾಂತ್ಯ 317B ಇದರ ಮೊದಲನೇ ಉಪಪ್ರಾಂತ್ಯಪಾಲ ಲ. ಮನೋಜ ಮಾನೆಕರ ನೂತನ ಪಧಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ, ಪಧಾಧಿಕಾರಿಗಳ ಕರ್ತವ್ಯ ಹಾಗೂ ಜವಾಬ್ದಾರಿಗಳನ್ನು ತಿಳಿಸಿದರು. ನಂತರ ಸಭೆಯನ್ನುದ್ದೇಶಿಸಿ ಮಾತನ್ನಾಡಿದರು.

  ಈ ಸಮಾರಂಭದಲ್ಲಿ ಗೌರವ ಅತಿಥಿಯಾಗಿ ಆಗಮಿಸಿದ PDG ಲ. ಡಾ. ರವಿ ಹೆಗಡೆ, ಹೂವಿನಮನೆ ಲಯನ್ಸ್ ಕ್ಲಬ್ ಶಿರಸಿ ಹಾಗೂ ಲಿಯೋ ಕ್ಲಬ್ ಗಳಿಗೆ ನೂತನವಾಗಿ ಸೇರ್ಪಡೆಯಾದವರಿಗೆ ಪ್ರತಿಜ್ಞಾ ವಿಧಿ ಬೋಧಿಸಿ ನಂತರ ಸಭೆಯನ್ನುದ್ದೇಶಿಸಿ ಮಾತನ್ನಾಡಿದರು.
  ಲಯನ್ ಅನಿತಾ ಹೆಗಡೆಯವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವು, ದೀಪ ಬೆಳಗುವುದರೊಂದಿಗೆ ವಿದ್ಯುಕ್ತವಾಗಿ ಚಾಲನೆಗೊಂಡಿತು. 2022-23 ರ ಅಧ್ಯಕ್ಷರಾದ ಲಯನ್ ತ್ರಿವಿಕ್ರಮ ಪಟವರ್ಧನ ಸ್ವಾಗತಿಸಿದರು. ಲಿಯೊ ಶ್ರೆಯಾ ಬಡಿಗೇರ್, ಲಿಯೊ ಸುಘೋಶ್ ಜೋಶಿ ಹಾಗೂ ಲ. ರಮಾ ಪಟವರ್ಧನ ಇವರು 2022-23ನೇ ಸಾಲಿನ ಕ್ಲಬ್ ಚಟುವಟಿಕೆಗಳ ವರದಿ ಸಲ್ಲಿಸಿದರು. ಲ. ಸುಮಂಗಲ ಹೆಗಡೆ ನೂತನ ಪಧಾಧಿಕಾರಿಗಳನ್ನು ಸಭೆಗೆ ಪರಿಚಯಿಸಿದರು. ಲ. ಉದಯ ಸ್ವಾದಿ ಮುಖ್ಯ ಅತಿಥಿ ಲ. ಮನೋಜ ಮಾನೆಕ ಇವರನ್ನು, ಲ. ವೇಣುಗೋಪಾಲ ಇವರು ಗೌರವ ಅತಿಥಿ ಲ. ರವಿ ಹೆಗಡೆ ಇವರನ್ನು ಸಭೆಗೆ ಪರಿಚಯಿಸಿದರು.

  300x250 AD

  ಶಿರಸಿ ಲಯನ್ಸ್ ಕ್ಲಬ್ ನ ’ಸ್ಪಂದನ’ ಕಾರ್ಯಕ್ರಮದಡಿಯಲ್ಲಿ ಬಡ ಪ್ರತಿಭಾನ್ವಿತ ವಿಧ್ಯಾರ್ಥಿನಿಗೆ ಧನ ಸಹಾಯ ನೀಡಲಾಯಿತು. ಈ ಸಂದರ್ಭದಲ್ಲಿ ಲಿಯೋ ಮಕ್ಕಳಿಗೆ ಭರತನಾಟ್ಯ ಕಲಿಸಿದ “ನಾಟ್ಯಶ್ರೀ ಕಲಾಕೇಂದ್ರ” ದ ಮುಖ್ಯಸ್ಥೆ ನೃತ್ಯ ವಿದೂಷಿ ವಿದ್ಯಾಶ್ರೀ ಹೆಗಡೆ ಇವರನ್ನು ಸನ್ಮಾನಿಸಲಾಯಿತು.
  ಲ.ಎನ್.ವಿ.ಜಿ. ಭಟ್ಟ, ಲ. ಜ್ಯೋತಿ ಭಟ್ಟ, ಕ್ಯಾಬಿನೆಟ್ ಕಾರ್ಯದರ್ಶಿ ಲ. ಅಶ್ವಿನ್ ಕಾರ್ಪೆ, ಲ. ಧ್ಯಾನೇಶ ನಾತು, ಲಿಯೊ ಶ್ರೀಕೃಷ್ಣ ತಾರ್ ನೂತನ ಪಧಾಧಿಕಾರಿಗಳನ್ನು ಅಭಿನಂದಿಸಿದರು.
  ನೂತನ ಅಧ್ಯಕ್ಷರಾದ ಲ. ಅಶೋಕ ಹೆಗಡೆ ಪ್ರತಿಷ್ಠಿತ ಲಯನ್ಸ್ ಕ್ಲಬ್ ಶಿರಸಿಯ ಸುವರ್ಣ ಮಹೋತ್ಸವದ ಮುಂದುವರೆದ ಭಾಗದ ಎಲ್ಲ ಸೇವಾ ಕಾರ್ಯ ಹಾಗೂ ಎಲ್ಲ ಕಾರ್ಯಕ್ರಮಗಳಿಗೆ ಎಲ್ಲ ಲಯನ್ಸ್ ಸದಸ್ಯರ, ಸೇವಾ ಸಂಸ್ಥೆಗಳ, ಪತ್ರಿಕೆಗಳ, ಶಿರಸಿ ಸಮಸ್ತ ಜನತೆಯ ಸಹಕಾರ ಕೋರಿದರು.
  ನೂತನ ಕಾರ್ಯದರ್ಶಿ ಲ. ಜ್ಯೋತಿ ಅಶ್ವಥ ಹೆಗಡೆ ಆಭಾರ ಮನ್ನಿಸಿದರು. ಲ.ಎಮ್ ಐ ಹೆಗಡೆ ಹಾಗೂ ಲ. ಜ್ಯೋತಿ ಅಶೋಕ ಹೆಗಡೆ ಕಾರ್ಯಕ್ರಮ ನಿರೂಪಣೆ ಮಾಡಿದರು.

  Share This
  300x250 AD
  300x250 AD
  300x250 AD
  Leaderboard Ad
  Back to top