Slide
Slide
Slide
previous arrow
next arrow

ಜೂಜಾಟ: 6 ಮಂದಿ ವಶಕ್ಕೆ, ಈರ್ವರು ಪರಾರಿ

300x250 AD

ಹೊನ್ನಾವರ: ತಾಲೂಕಿನ ಕಾಸರಕೋಡ್ ಇಕೋ ಬೀಚ್ ಕ್ರಾಸ್ ಫಾರೆಸ್ಟ್ ನರ್ಸರಿ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಜೂಜಾಟ ನಡೆಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ 6 ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಈರ್ವರು ಪರಾರಿಯಾದ ಘಟನೆ ನಡೆದಿದೆ.

ಪಿಎಸೈ ಮಹಾಂತೇಶ್ ಅವರ ನೇತೃತ್ವದಲ್ಲಿ ದಾಳಿ ನಡೆದಿದ್ದು, ಟೊಂಕಾ-2 ಕಾಸರಕೋಡ ನಿವಾಸಿಗಳಾದ  ಮಹಮ್ಮದ ಜಿಲಾನಿ ಸುಲೇಮಾನ ಮುನ್ನಾ, ಬಸೀರ್ ಅಹ್ಮದ ಹಬ್ಬಿ, ಅನ್ವರ್ ಅಬ್ದುಲ್ ಕರೀಮ್ ಬೊಂಬೈಕರ, ಹನೀಫ್ ಅಬ್ದುಲ್ ಕರೀಮ್ ಬೊಂಬೈಕರ, ಹಬಿವುಲ್ಲಾ ಉಮರಜಿ ಬಾಬ್ಲು, ಕಾಸರಕೋಡ ರಾಮನಗರ ನಿವಾಸಿ ಮಹ್ಮದ ಹನೀಫ್ ಉಮರ್ ಬಾಪುಸಾಬ ದಾಳಿ ವೇಳೆ ವಶಕ್ಕೆ ಸಿಕ್ಕಿದ್ದಾರೆ.
ಟೊಂಕಾ-2 ಕಾಸರಕೋಡ ನಿವಾಸಿಗಳಾದ ಸಲಾವುದ್ದೀನ್ ಜಿಕ್ರಿಯಾ ಬುರ್ಜಿ, ಸಮೀರ ಗನಿ ಬುಡ್ಡೆ ದಾಳಿ ವೇಳೆ ಓಡಿಹೋಗಿದ್ದಾರೆ. ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

300x250 AD
Share This
300x250 AD
300x250 AD
300x250 AD
Back to top