ಕಾರವಾರ: ವಿದ್ಯುತ್ ದರ ಏರಿಕೆ ಖಂಡಿಸಿ ಕಾರವಾರ ಗುರುವಾರ ಸಂಪೂರ್ಣ ಸ್ಥಬ್ಧಗೊಂಡಿತು.
ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಕರೆಕೊಟ್ಟಿದ್ದ ರಾಜ್ಯವ್ಯಾಪಿ ಬಂದ್ ಹಿನ್ನೆಲೆಯಲ್ಲಿ ಕಾರವಾರದಲ್ಲಿ ಗುರುವಾರ ಬೆಳಿಗ್ಗಿನಿಂದ ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದಾಗಿದ್ದವು. ಬಂದ್‌ಗೆ ಕಾರವಾರ ಹೋಟೆಲ್ ಮಾಲಕರ ಅಸೋಸಿಯೇಶನ್, ರಿಕ್ಷಾ- ಟೆಂಪೋ ಚಾಲಕರು ಮತ್ತು ಮಾಲಕರ ಸಂಘ, ಬಿಜೆಪಿ ಕೂಡ ಬೆಂಬಲ ನೀಡಿರುವ ಕಾರಣ ಹೋಟೆಲ್‌ಗಳೂ ಮುಚ್ಚಿದ್ದು, ರಿಕ್ಷಾ- ಟೆಂಪೋಗಳ ಓಡಾಟ ಸ್ಥಗಿತಗೊಂಡಿದೆ.
ಇದರಿಂದಾಗಿ ದಿನನಿತ್ಯ ಕಾರವಾರಕ್ಕೆ ಕೆಲಸಕ್ಕೆ ಬರುವವರು, ಸರ್ಕಾರಿ ನೌಕರರಿಗೆ ಸಮಸ್ಯೆ ಉಂಟಾಗಿದೆ. ಓಡಾಡಲು ವಾಹನಗಳಿಲ್ಲದೆ, ಮಧ್ಯಾಹ್ನದ ಊಟಕ್ಕೆ ಹೋಟೆಲ್‌ಗಳು ತೆರೆಯದೆ ಪರದಾಡುವಂತಾಯಿತು. ಸಂಜೆಯ ಬಳಿಕ ಕೆಲವು ಹೋಟೆಲ್, ಮಳಿಗೆಗಳು ತೆರೆದುಕೊಂಡವು.
ವಿದ್ಯುತ್ ದರ ಏರಿಕೆ ಖಂಡಿಸಿ ಕರ್ನಾಟಕ ಬಂದ್: ಕಾರವಾರದಲ್ಲಿ ಉತ್ತಮ ಸ್ಪಂದನೆ
