ಭಟ್ಕಳ: ನಗರದ ಆಸರಕೇರಿಯ ಶ್ರೀ ನಾಮಧಾರಿ ಸಬಾಭವನದಲ್ಲಿ ಶ್ರೀ ವೆಂಕಟೇಶ್ವರ ವಿದ್ಯಾವರ್ಧಕ ಸೇವಾ ಸಂಸ್ಥೆಯ ವತಿಯಿಂದ 10 ನೇ ವರ್ಷದ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮವನ್ನು ವಿಶ್ರಾಂತ ಜಿಲ್ಲಾ ನ್ಯಾಯಾಧೀಶ ರವಿ ನಾಯ್ಕ ಉದ್ಘಾಟಿಸಿದರು.
ನಂತರ ಅವರು ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ವಿದ್ಯೆ ಪಡೆದು ವಿನಯಶೀಲತೆಯರಾಗಿ ಸಮಾಜಕ್ಕೆ ಮಾದರಿಯಾಗಬೇಕು. ಪುಸ್ತಕವೆಂದರೆ ಜ್ಞಾನದ ಸಂಕೇತ. ವಿದ್ಯಾರ್ಥಿಗಳು ಪುಸ್ತಕರ ಪ್ರತಿಯೊಂದು ಪುಟಗಳನ್ನು ಓದಿ ಇದರ ಸದುಪಯೋಗ ಪಡೆದುಕೊಳ್ಳಬೇಕು. ಈ ಹಿಂದೆ ನಾವು ಶಾಲೆ ಕಾಲೇಜಿಗೆ ಹೋಗುವಾಗ ಯಾವುದೇ ಸೌಕರ್ಯಗಳಿರಲಿಲ್ಲ. ಇಂದು ಇದ್ಯಾರ್ಥಿಗಳಿಗೆ ಎಲ್ಲಾ ಸೌಕರ್ಯಗಳು ಇದ್ದರು ಅವರು ವಿದ್ಯೆಯಲ್ಲಿ ಹಾಗೂ ಸಂಸ್ಕಾರದಲ್ಲಿ ಹಿಂದೆ ಬಿದ್ದಿದ್ದಾರೆ. ಗುರು ಹಿರಿಯರಿಗೆ ಗೌರವ ಕೊಟ್ಟು ಉತ್ತಮ ಸಂಸ್ಕಾರವoತರಾಗಿ ನಡೆಯಬೇಕಾಗಿದೆ. ಸಂಸ್ಕಾರವನ್ನು ಯಾರೂ ಹೇಳಿ ಕೊಡುವುದಿಲ್ಲ. ಅದು ತನ್ನಿಂದ ತಾನೇ ನಮ್ಮ ಹಿರಿಯರಿಂದ ಬರುತ್ತದೆ ಎಂದ ಅವರು ಸತತ 10 ವರ್ಷಗಳ ಕಾಲ ವಿದ್ಯಾವರ್ಧಕ ಸೇಸಾ ಸಂಸ್ಥೆಯವರು ಸಮಾಜದ ಪದವಿಪೂರ್ವ ಬಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಮಾಡುತ್ತಿದ್ದು ಇವರ ಕಾರ್ಯ ಶ್ಲಾಘನೀಯವಾಗಿದೆ. ಅವರ ಪರಿಶ್ರಮಕ್ಕೆ ತಾವೆಲ್ಲರೂ ಹೆಚ್ಚು ಅಂಕ ಪಡೆದು ಸಮಾಜದ ಗೌರವಕ್ಕೆ ಪಾತ್ರರಾಗಬೇಕು. ವಿದ್ಯಾರ್ಥಿ ಜೀವನದಲ್ಲಿ ಯಾವುದೇ ದುಶ್ಚಟಗಳಿಗೆ ಬಲಿಯಾಗದೇ ಉತ್ತಮ ಪ್ರಜೆಯಾಗಿ ದೇಶಕ್ಕೆ ಸೇವೆ ಸಲ್ಲಿಸುವಂತಾಬೇಕು ಎಂದರಲ್ಲದೇ ನನ್ನ ಒಂದು ತಿಂಗಳ ಪಿಂಚಣಿ ಹಣವನ್ನು ಸಮಾಜದ ಬಡ ವಿದ್ಯಾರ್ಥಿಗಳ ಕಲಿಕೆಗೆ ನೀಡುತ್ತಿದ್ದೇನೆ ಎಂದು ಸಭೆಯಲ್ಲಿ ವಾಗ್ದಾನ ಮಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಸಾರದಹೊಳೆ ಶ್ರೀ ಹಳೆಕೋಟೆ ಹನುಮಂತ ದೇವಸ್ಥಾನದ ಅಧ್ಯಕ್ಷ ಸುಬ್ರಾಯ ನಾಯ್ಕ ಮಾತನಾಡಿ ವಿದ್ಯಾವರ್ಧಕ ಸಂಸ್ಥೆಯು ಸತತ 10 ವರ್ಷಗಳಿಂದ ಅಚ್ಚುಕಟ್ಟಾಗಿ ಪುಸ್ತಕ ವಿತರಿಸುವ ಕಾರ್ಯ ಮಾಡಿ ಸಮಾಜಕ್ಕೆ ಮಾದರಿಯಾಗಿದೆ ಎಂದರು. ಕಾರ್ಯಕ್ರಮದಲ್ಲಿದ್ದ ಇನ್ನೋರ್ವ ಅತಿಥಿ ಭಟ್ಕಳ ಗುರುಮಠ ದೇವಸ್ತಾನದ ಆಡಳಿತ ಮಂಡಳಿಯ ಅಧ್ಯಕ್ಷ ಕೃಷ್ಣ ನಾಯ್ಕ ಮಾತನಾಡಿ ಇಂದು ವಿದ್ಯಾರ್ಥಿಗಳು ಮೊಬೈಲ್ ಹಾಗೂ ಟಿ.ವಿ. ಹಿಂದೆ ಬಿದ್ದಿದ್ದಾರೆ. ಅವರಿಗೆ ನಮ್ಮ ಧರ್ಮ, ನಮ್ಮ ಸಂಸ್ಕಾರದ ಅರಿವು ಗೊತ್ತಿಲ್ಲದೇ ತೇಲಾಡುತ್ತಿದ್ದಾರೆ. ಅವರಿಗೆ ಚಿಕ್ಕಂದಿನಿoದಲೇ ಪಾಲಕರು ಧರ್ಮ ಮತ್ತು ಸಂಸ್ಕಾರ ಕಲಿಸಬೇಕು ಎಂದರು. ವೇದಿಕೆಯಲ್ಲಿದ್ದ ನಾಮಧಾರಿ ಸಮಾಜದ ಗೌರವಾಧ್ಯಕ್ಷ ಎಂ.ಆರ್.ನಾಯ್ಕ, ಉದ್ಯಮಿ ಗೌರೀಶ ನಾಯ್ಕ, ಭಾರತ ವಿಕಾಸ ಪರಿಷತ್ ಅಧ್ಯಕ್ಷ ಪ್ರಕಾಶ ನಾಯ್ಕ, ಮಾತನಾಡಿದರು.
ಅಂಕೋಲಾ ಸಡಗೇರಿಯ ನಿವೃತ್ತ ಉಪನ್ಯಾಸಕ ಎಂ.ಆರ್.ನಾಯಕ ವಿದ್ಯಾರ್ಥಿಗಳಿಗೆ ಸಂಸ್ಕಾರದ ಬಗ್ಗೆ ಉಪನ್ಯಾಸ ನೀಡಿದರು. ವೆಂಕಟೇಶ್ವರ ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷ ಕೆ.ಆರ್. ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿಶ್ರಾಂತ ನ್ಯಾಯಾದೀಶರಾದ ರವಿ ನಾಯ್ಕ, ಉದ್ಯಮಿ ಗೌರೀಶ ನಾಯ್ಕ,ಭಾರತ ವಿಕಾಸ ಪರಿಷತ್ ಅದ್ಯಕ್ಷ ಪ್ರಕಾಶ ನಾಯ್ಕ ಇವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ದಿ. ಬಾಬು ಮಾಸ್ತರ ಸ್ಮರಣಾರ್ಥ ಹಾಗೂ ದಿ.ರಾಮ ಶ್ಯಾನುಬೋಗ ಸ್ಮರಣಾರ್ಥ ತಾಲೂಕಿನ ಅತಿ ಹೆಚ್ಚು ಅಂಕ ಪಡೆದ ಎಸ್.ಎಸ್.ಎಲ್.ಸಿ. ಹಾಗೂ ದ್ವಿತಿಯ ಪಿ.ಯು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು. ಕಾರ್ಯಕ್ರಮದಲ್ಲಿ 200 ಕ್ಕೂ ಹೆಚ್ಚು ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಯಿತು. ಮಂಜುನಾತ ನಾಯ್ಕ ಪ್ರರ್ಥನೆ ಹಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಮನಮೋಹನ ನಾಯ್ಕ ಎಲ್ಲರನ್ನು ಸ್ವಾಗತಿಸಿದರು. ರಾಘವೇಂದ್ರ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ರವಿ ನಾಯ್ಕ ವಂದಿಸಿದರು .ಶಿಕ್ಷಕರಾದ ನಾರಾಯಣ ನಾಯ್ಕ ಹಾಗೂ ಗಂಗಾಧರ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.
ವಿದ್ಯಾವರ್ಧಕ ಸೇವಾ ಸಂಸ್ಥೆಯ ಸದಸ್ಯರಾದ ಚಂದ್ರಶೇಖರ ನಾಯ್ಕ, ಶ್ರೀಧರ ನಾಯ್ಕ, ಜಗದೀಶ ನಾಯ್ಕ, ಮಾಧವ ಮಾಸ್ತರ ಅಂಕೋಲಾ, ನಿವ್ರತ್ತಕೃಷಿ ಅಧಿಕಾರಿ ಜಿ.ಎನ್.ನಾಯ್ಕ ಸಹಕರಿಸಿದರು.